
ನವದೆಹಲಿ (ಜ.04): ಹೊಸವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ಹೆಣ್ಣುಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಟೈಮ್ಸ್ ಆಫ್ ಇಂಡಿಯಾಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
4 ವರ್ಷಗಳ ಹಿಂದೆ 2012 ರಲ್ಲಿ ದೆಹಲಿಯಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆ ಮಾಡಲಾಯಿತು. ಈ ನಿರ್ಭಯ ಪ್ರಕರಣ ಜನಮಾನಸದಲ್ಲಿ ಮಾಸಿಲ್ಲ. ಅದೇ ರೀತಿ ಇಂದು ನಮ್ಮ ಕಣ್ಮುಂದೆಯೇ ಬೆಂಗಳೂರಿನಲ್ಲಿಯೂ ಮಹಿಳೆಯರ ಮೇಲೆ ಹಿಂಸಾಚಾರ ನಡೆಯುತ್ತಿದೆ. ಹೊಸ ವರ್ಷವನ್ನು ಖುಷಿಯಾಗಿ ಆಚರಿಸುವ ಬದಲು ಮಹಿಳೆಯರ ಪಾಲಿಗೆ ಭಯಾನಕವಾಗಿದೆ. ಇಂತದ್ದೊಂದು ಹೇಯ ಕೃತ್ಯವೆಸಗಿದ ಕಾಮುಕರ ವಿರುದ್ಧ ಶೀಘ್ರ ಕಠಿಣ ಕ್ರಮ ಕೈಗೊಳ್ಳುವ ಬದಲು ಇದಕ್ಕೆಲ್ಲಾ ಮಹಿಳೆಯರ ಡ್ರೆಸ್ ಸೆನ್ಸ್ ಕಾರಣ ಎನ್ನುವ ರಾಜಕಾರಣಿಗಳ ಹೇಳಿಕೆ ಕೇಳಿ ಆಘಾತವಾಯಿತು. ಇದೆಂಥಾ ಬೇಜವಾಬ್ದಾರಿ ಹೇಳಿಕೆ? ಘಟನೆಯ ಸತ್ಯಾಂಶದ ಬಗ್ಗೆ ಗಮನ ಹರಿಸಬೇಕಾಗಿರುವುದು ಸರ್ಕಾರದ ಮತ್ತು ನಮ್ಮೆಲ್ಲರ ಜವಾಬ್ದಾರಿ.ಘಟನೆ ಬಗ್ಗೆ ಪೋಲಿಸ್ ಮುಖ್ಯಸ್ಥರ ಹೇಳಿಕೆ, ಮಂತ್ರಿಗಳ ಹೇಳಿಕೆ ಕೇಳಿ ಆಘಾತವಾಯಿತು.
ಮುಖ್ಯಮಂತ್ರಿಗಳು ಹಾಗೂ ಅವರ ಸರ್ಕಾರ ಜನರಿಂದಲೇ ಆಯ್ಕೆಯಾಗಿ ಬಂದಿರುವುದು ಎಂಬುದನ್ನು ಮರೆತಿದೆ. ಕಾನೂನು ಸುವ್ಯವಸ್ಥೆ ಕಾಪಾಡಿ ಎಲ್ಲಾ ನಾಗರೀಕರಿಗೆ ಭದ್ರತೆ ಒದಗಿಸುವುದು ಜವಾಬ್ದಾರಿ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.