
ಬೆಂಗಳೂರು (ಏ.16): ಕೆಲ ವರ್ಷಗಳ ಹಿಂದೆ ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗಳು ದಾರುಣವಾಗಿ ಸಾವು ಕಂಡಿದ್ದ ಘಟನೆ ಇನ್ನೂ ನೆನಪಿನಲ್ಲಿರುವಾಗಲೇ ಬೆಂಗಳೂರು ಮೆಟ್ರೋ ಕಾಮಗಾರಿಗೆ ಮತ್ತೊಂದು ಬಲಿಯಾಗಿದೆ. ಮೆಟ್ರೋ ವಯಾಡಕ್ಟ್ ಸಾಗಿಸುವ ವೇಳೆ, ಲಾರಿಯಿಂದ ವಯಾಡಕ್ಟ್ ಕಳಚಿ ಪಕ್ಕದಲ್ಲೇ ಇದ್ದ ಆಟೋ ಮೇಲೆ ಉರುಳಿಬಿದ್ದ ಪರಿಣಾಮ ಆಟೋ ಚಾಲಕ ದಾರುಣ ಸಾವು ಕಂಡಿದ್ದಾನೆ.
ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನಮ್ಮ ಮೆಟ್ರೋ ಎಡವಟ್ಟು ಮಾಡಿಕೊಂಡಿದ್ದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಮೆಟ್ರೋ ಕಾಮಗಾರಿ ಎಡವಟ್ಟಿಗೆ ಆಟೋ ಚಾಲಕ ದಾರುಣವಾಗಿ ಸಾವು ಕಂಡಿದ್ದಾರೆ. 35 ವರ್ಷದ ಖಾಸಿಂ ಸಾಬ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಯಲಹಂಕ ಬಳಿಯ ಕೋಗಿಲು ಕ್ರಾಸ್ ಬಳಿ ಭೀಕರ ದುರಂತ ನಡೆದಿದೆ. ವಯಾಡಕ್ಟ್‌ಅನ್ನು ಲಾರಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಅದು ಉರುಳಿಬಿದ್ದ ಈ ಅವಗಢ ಸಂಭವಿಸಿದೆ. ಮಧ್ಯರಾತ್ರಿ 12.30ರ ಸುಮಾರಿಗೆ ದುರಂತ ನಡೆದಿದೆ.
ಮೆಟ್ರೋ ಟ್ರ್ಯಾಕ್ ಗೆ ಹಾಕುವ ಬೃಹತಾಕಾರದ ತಡೆಗೋಡೆ (ವಯಾಡಕ್ಟ್) ಉರುಳಿ ದುರಂತ ಸಂಭವಿಸಿದೆ. ಏರ್ಪೋಟ್ ಮಾರ್ಗದ ಕಾಮಗಾರಿಗಾಗಿ 18 ಚಕ್ರದ ದೊಡ್ಡ ಲಾರಿಯಲ್ಲಿ ವಯಾಡಕ್ಟ್‌ಅನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಕೋಗಿಲುಕ್ರಾಸ್ ನಲ್ಲಿ ತಿರುವು ತೆಗೆದುಕೊಳ್ಳುವ ವೇಳೆ ಲಾರಿಯೇ ತುಂಡಾಗಿದೆ. ಇದರಿಂದಾಗಿ ಬೃಹತ್ ವಯಾಡೆಕ್ಟ್ ನೆಲಕ್ಕೆ ಉರುಳಿದೆ.
ಘಟನೆ ಆಗಿದ್ದು ಹೇಗೆ: ಲಾರಿ ಟರ್ನ್ ತೆಗೆದುಕೊಳ್ಳುವಾಗ ವಯಾಡಕ್ಟ್ ಲಾರಿಯ ಚಾಸೀಸ್‌ಗೆ ಟಚ್ ಆಗಿ ಘಟನೆ ನಡೆದಿದೆ. ಸರ್ಕಲ್‌ನಲ್ಲಿ ಲಾರಿ ಚಾಲಕ ಟರ್ನ್ ತೆಗೆದುಕೊಳ್ಳುತ್ತಿದ್ದ. ಈ ವೇಳೆ ಲಾರಿಯ ಚಾರ್ಸಿಗೆ ಟಚ್ ಆಗಿ ವಯಾಡಕ್ಟ್ ಉರುಳಿದೆ. ಇದೇ ವೇಳೆ ರಸ್ತೆ ಬದಿ ಆಟೋದಲ್ಲಿದ್ದ ಖಾಸಿಂಸಾಬ್ ಮೇಲೆ ಬಿದ್ದಿದೆ. ವಯಾಡಕ್ಟ್ ಬೀಳುವಾಗ ಸ್ಥಳದಿಂದ ಓಡಲು ಖಾಸಿ ಪ್ರಯತ್ನ ಪಟ್ಟಿದ್ದಾರೆ. ಆದರೆ, ಘಟನೆ ಕ್ಷಣ ಮಾತ್ರದಲ್ಲಿ ನಡೆದಿದ್ದು, ಪರಿಣಾಮ ಆಟೋ ಸಂಪೂರ್ಣ ನಜ್ಜುಗುಜ್ಜಾಗಿ ಸ್ಥಳದಲ್ಲೇ ಖಾಸಿಂ ಸಾವು ಕಂಡಿದ್ದಾರೆ.
ನಿರ್ಲಕ್ಷ್ಯದ ಆರೋಪ: ರಸ್ತೆ ಬ್ಲಾಕ್ ಮಾಡದೇ, ಸೆಕ್ಯುರಿಟಿ ವಾಹನ ಇಲ್ಲದೆ ಬಂದ ಕಾರಣ ಈ ಅನಾಹುತ ಆಗಿದೆ ಎನ್ನಲಾಗಿದೆ. ಅಲ್ಲದೆ, ವಯಾಡಕ್ಟ್ ಸಾಗಿಸುತ್ತಿದ್ದ ಲಾರಿ ಒನ್ ವೇನಲ್ಲಿ ಬಂದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಿಎಂಆರ್‌ಸಿಎಲ್ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದ್ದ NCC ಕಂಪನಿ ಮುಂದೆ ಪ್ರತಿಭಟನೆ ನಡೆಯುತ್ತಿದೆ.
'ಐ ಗರ್ಡರ್ ನಾರ್ಮಲ್ ಆಗಿ ರಾತ್ರಿ ವೇಳೆ ಸೈಟ್ ಗೆ ತೆಗೆದುಕೊಂಡು ಹೋಗುತ್ತೇವೆ. ಅದೇ ರೀತಿ ನೆನ್ನೆ ರಾತ್ರಿ ತೆಗೆದುಕೊಂಡು ಹೋಗುತ್ತಿದ್ದರು. ಕೊಗಿಲು ಕ್ರಾಸ್ ಬಳಿ ಟ್ರೈಲರ್ ಯೂಟರ್ನ್ ತೆಗೆದುಕೊಳ್ಳುವಾಗ ಘಟನೆ ನಡೆದಿದೆ. ಈ ವೇಳೆ ಸಡನ್ ಆಗಿ ಟ್ರೈಲರ್ ಗೆ ಅಡ್ಡಲಾಗಿ ವಾಹನ ಬಂದಿದೆ. ಆಗ ಟ್ರೈಲರ್ ಚಾಲಕ ಬ್ರೇಕ್ ಹೊಡೆದಿದ್ದಾನೆ. ಈ ವೇಳೆ ಐ ಗರ್ಡರ್ ಗಾಡಿಯಿಂದ ಬಿದ್ದು ಹೋಗಿದೆ. ಈ ವೇಳೆ ಪಕ್ಕದಲ್ಲೇ ಆಟೋ ಚಾಲಕ ನಿಂತಿದ್ದ ಅವನ ಮೇಲೆ ಬಿದ್ದಿದೆ. ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂಜಿನಿಯರ್ಸ್, ಕಂಟ್ರಾಕ್ಟರ್ ಗಳು ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಕಂಟ್ರಾಕ್ಟರ್ ಗೆ ಈಗಾಗಲೇ ತಿಳಿಸಲಾಗಿದೆ. ಕುಟುಂಬಕ್ಕೆ ಪರಿಹಾರ ನೀಡುವಂತೆ ತಿಳಿಸಿದ್ದೇವೆ. ಪ್ರೋಟೋಕಾಲ್ ಪ್ರಕಾರ ಪರಿಹಾರ ಘೋಷಣೆ ಮಾಡುತ್ತಾರೆ' ಎಂದು ಬಿಎಂಆರ್ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವ್ಹಾಣ್ ತಿಳಿಸಿದ್ದಾರೆ.
'ಒಂದು ನಾಯಿ ಕರೆದುಕೊಂಡು ಹೋದರು ಬೆಲ್ಟ್ ಹಾಕಿ ಕರೆದುಕೊಂಡು ಹೋಗುತ್ತಾರೆ. ಇಷ್ಟು ದೊಡ್ಡ ಪಿಲ್ಲರ್ ಸಾಗಿಸಬೇಕಾದರೆ ಯಾವುದೇ ಸೇಫ್ಟಿ ತೆಗೆದುಕೊಂಡಿಲ್ಲ. ಯಾರೋ ಮಾಡಿದ ತಪ್ಪಿಗೆ ಅಮಾಯಕ ಬಲಿಯಾಗಿದ್ದಾನೆ. ಖಾಸಿಂ ದುಡಿದರಷ್ಟೇ ಅವರ ಕುಟುಂಬ ನಡಿಯೋದು. ಇಂದು ಮೂರು ಮಕ್ಕಳು ಅನಾಥರಾಗಿದ್ದಾರೆ. ಖಾಸಿಂ ಸಾವಿಗೆ ಪರಿಹಾರ ನೀಡಬೇಕು'ಎಂದು ಖಾಸಿ ಬಾಮೈದ ಲತೀಫ್ ಹೇಳಿದ್ದಾರೆ.
ಹೊಸ ಆಟೋ ಖರೀದಿಸಿ 20 ದಿನ: ಖಾಸಿಂ ಫೈನಾನ್ಸ್ ನಲ್ಲಿ ಸಾಲ ಮಾಡಿ ಆಟೋ ಕೊಂಡು 20 ದಿನವಾಗಿತ್ತು ಎಂದು ತಿಳಿದುಬಂದಿದೆ. ಆಸ್ಪತ್ರೆಯ ಶವಾಗಾರದ ಬಳಿ ಮಗನ ಆಕ್ರಂದನ ಮುಗಿಲು ಮುಟ್ಟಿದೆ. ತಾಯಿ ಹೃದ್ರೋಗ ಖಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಇನ್ನೂ ಈ ವಿಚಾರ ಗೊತ್ತಿಲ್ಲ, ಹೇಗೆ ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಖಾಸಿಂ ಇಪ್ಪತ್ತು ವರ್ಷ ದಿಂದ ಆಟೋ ಓಡಿಸುತ್ತಿದ್ದಾರೆ. ಹೆವಿ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಇದೆ. ನಿನ್ನೆ ಆರೋಗ್ಯ ಸರಿ ಇರಲಿಲ್ಲ. ರಾತ್ರಿ 8 ಗಂಟೆ ಬಳಿಕ ನೈಟ್ ಆಟೋ ಓಡಿಸಲೆಂದು ಬಂದಿದ್ದರು. ಇಡೀ ಕುಟುಂಬ ಇತ್ತಿಚೇಗಷ್ಟೇ ಶಿಡ್ಲಘಟ್ಟ ಕ್ಕೆ ಶಿಫ್ಟ್ ಆಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ಆಟೋ ಓಡಿಸುತ್ತಿದ್ದರು. ನನ್ನ ಭಾವ ಖಾಸಿಂ ತುಂಬಾ ಒಳ್ಳೆಯವರು ಎಂದು ಲತೀಫ್ ಹೇಳಿದ್ದಾರೆ.
ಬೆಂಗಳೂರು ಮೆಟ್ರೋದಲ್ಲಿ ಮಿತಿ ಮೀರಿದ ಪ್ರಯಾಣಿಕರು; 4 ರೈಲು ಹೆಚ್ಚಳ
ನಿನ್ನೆ ತಂದೆಗೆ ಆರೋಗ್ಯ ಸರಿ ಇರಲಿಲ್ಲ. ಆಸ್ಪತ್ರೆ ಹೋಗಿ ಬಂದಿದ್ದರು. ಹೀಗಾಗಿ ರಾತ್ರಿ ಒಂದು ಟ್ರಿಪ್ ಹಾಕಿ ಬರುತ್ತೇನೆ ಎಂದು ಹೋಗಿದ್ದರು. ಮೂರು ಜನ ಮಕ್ಕಳು ನಾವು. ತಾಯಿ ಹೌಸ್ ವೈಫ್. ತಂದೆ ದುಡಿದರಷ್ಟೇ ಮನೆಯಲ್ಲಿ ಜೀವನ. ಬೆಳಗ್ಗೆ ಪೊಲೀಸರು ಹೇಳಿದ ಮೇಲೆ ನಮಗೆ ವಿಚಾರ ಗೊತ್ತಾಗಿದೆ ಎಂದು ತಂದೆ ನೆನೆಯುತ್ತಾ ಮಗ ಆರಿಫ್ ಕಣ್ಣೀರು ಹಾಕಿದ್ದಾರೆ.
Bengaluru: ಮೆಟ್ರೋ ನಿಲ್ದಾಣದಲ್ಲೇ ಯುವ ಜೋಡಿಯ ರೋಮ್ಯಾನ್ಸ್, ಇದೆಂಥಾ ಅಸಹ್ಯ ಎಂದ ನೆಟ್ಟಿಗರು!
ಮೃತ ಖಾಸಿ ಹೆಗ್ಡೆನಗರ ನಿವಾಸಿಯಾಗಿದ್ದು, ಶಿಡ್ಲಘಟ್ಟ ಮೂಲದವರಾಗಿದ್ದಾರೆ. ನೈಟ್ ಆಟೋ ಡ್ಯೂಟಿ ವೇಳೆ ಕೋಗಿಲು ಕ್ರಾಸ್ ಬಳಿ ಆಟೋ ನಿಲ್ಲಿಸಿಕೊಂಡಿದ್ದ.ಈ ವೇಳೆ ದುರಂತ ನಡೆದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಯಲಹಂಕ ಸಂಚಾರಿ ಪೊಲೀಸರು ಪರಿಶೀಲನೆ ಮಾಡಿದ್ದು, ಲಾರಿ ಚಾಲಕನನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗಿದೆ. BMRCL ಹಾಗೂ ಗುತ್ತಿಗೆ ಪಡೆದಿದ್ದ ಖಾಸಗಿ ಕಂಪನಿಗೆ ನೊಟೀಸ್ ನೀಡಲು ತಯಾರಿ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.