ಮ್ಯಾರ​ಥಾನ್‌ ಓಡಿ ಮದುವೆಯಾದ ಬೆಂಗಳೂರು ಜೋಡಿ

Published : Feb 06, 2017, 06:25 AM ISTUpdated : Apr 11, 2018, 12:39 PM IST
ಮ್ಯಾರ​ಥಾನ್‌ ಓಡಿ ಮದುವೆಯಾದ ಬೆಂಗಳೂರು ಜೋಡಿ

ಸಾರಾಂಶ

ಫಿನಿ​ಶಿಂಗ್‌ ಲೈನ್‌​ನಲ್ಲಿ ಮದು​ವೆ​ | ಜೈಪುರದಲ್ಲಿ ವಿಶಿಷ್ಟಘಟನೆ

ಜೈಪು​ರ (ಫೆ.06): ಮದು​ವೆ​ಗಾಗಿ ಹಾಫ್‌-ಮ್ಯಾರ​ಥಾನ್‌ ಕನ​ಸನ್ನು ​ಬಿಟ್ಟುಬಿ​ಡಲು ಒಲ್ಲದ ಬೆಂಗ​ಳೂ​ರಿನ ಅನಂತ್‌ ತ್ರಿವೇದಿ ​ನುಡಿ​ದಂತೆಯೇ ನಡೆ​ದಿ​ದ್ದಾರೆ.

ಜೈಪು​ರ​ದಲ್ಲಿ ಮ್ಯಾರ​ಥಾ​ನ್‌ನ ಫಿನಿ​ಶಿಂಗ್‌ ಲೈನ್‌​ನಲ್ಲೇ ಅವರು ತಮ್ಮ ಸ್ನೇಹಿತೆ ಕವಿತಾ ಬಾತ್ರಾ​ರನ್ನು ವರಿಸಿದ್ದಾರೆ. ಜೈಪು​ರದ ಹಾಫ್‌ ಮ್ಯಾರ​ಥಾ​ನ್‌ನಲ್ಲಿ ಪಾಲ್ಗೊಂಡಿದ್ದ ಉದ್ಯಮಿ ತ್ರಿವೇದಿ ಅವರು ಮ್ಯಾರ​ಥಾ​ನ್‌ನ ಫಿನಿ​ಶಿಂಗ್‌ ಲೈನ್‌​ನಲ್ಲಿ ತನ​ಗಾಗಿ ಹಾರ ಹಿಡಿ​ದು ಕಾಯು​ತ್ತಿದ್ದ ಕವಿತಾ(28)ರನ್ನು ಮದು​ವೆ​ಯಾ​​ದರು.

ಮ್ಯಾರ​ಥಾ​ನ್‌ನ ಓಟ​ವನ್ನು ಮುಗಿ​ಸು​ತ್ತಿ​ದ್ದಂತೆಯೇ, ಹೊಸ ಬದು​ಕಿನ ಓಟವನ್ನು ಶುರು​ವಿ​ಟ್ಟು​ಕೊಂಡರು. ಈ ಜೋಡಿ, ಮದುವೆ ದಿನವೇ ಮ್ಯಾರ​ಥಾನ್‌ ಇದ್ದ ಕಾರಣ ಫಿನಿ​ಶಿಂಗ್‌ ಲೈನ್‌​ನಲ್ಲಿ ಮದು​ವೆ​ಯಾ​ಗಲು ನಿರ್ಧ​ರಿ​ಸಿ​ದ್ದರು. ವಧು-ವರರ ಸ್ನೇಹಿ​ತರು, ಇತರೆ ಮ್ಯಾರ​ಥಾನ್‌ ಓಟ​ಗಾ​ರರು ಈ ವಿವಾ​ಹಕ್ಕೆ ಸಾಕ್ಷಿ​ಯಾ​ದ​ರು. ಅನಂತ್‌ ಬೆಂಗಳೂರಿನಲ್ಲಿ ಸ್ವಂತ ಉದ್ಯೊಗ ಹೊಂದಿದ್ದರೆ, ಕವಿತಾ ಐಟಿ ಉದ್ಯೋಗದಲ್ಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಸನ: ತಹಸಿಲ್ದಾರ್ ಕಿರುಕುಳ ಆರೋಪ; ಕಚೇರಿ ಆವರಣದಲ್ಲೇ ಉಪತಹಸಿಲ್ದಾರ್ ಆತ್ಮ೧ಹತ್ಯೆ ಯತ್ನ!
ಫ್ಲಾಶ್ ಹಾಕಿ ಜೀವ ಉಳಿಸಲು ಅಂಗಲಾಚಿದ ಟೆಕ್ಕಿ ಕೊನೆಯ ವಿಡಿಯೋ, ಅಸಹಾಯಕರಾಗಿ ಕುಳಿತ ತಂದೆ