ನೀರಿನ ದರ ಅಧಿಕೃತವಾಗಿ ಏರಿಸಿದ ರಾಜ್ಯ ಸರ್ಕಾರ, ಏ.1 ರಿಂದ ಪೂರ್ವಾನ್ವಯ!

Published : Apr 09, 2025, 02:30 PM ISTUpdated : Apr 09, 2025, 02:57 PM IST
ನೀರಿನ ದರ ಅಧಿಕೃತವಾಗಿ ಏರಿಸಿದ ರಾಜ್ಯ ಸರ್ಕಾರ, ಏ.1 ರಿಂದ ಪೂರ್ವಾನ್ವಯ!

ಸಾರಾಂಶ

ಬೆಂಗಳೂರಿನಲ್ಲಿ ಏಪ್ರಿಲ್ 1 ರಿಂದ ನೀರಿನ ದರ ಏರಿಕೆಯಾಗಿದೆ. ಗೃಹ ಬಳಕೆದಾರರಿಗೆ 20-30 ರೂ. ಮತ್ತು ವಾಣಿಜ್ಯ ಬಳಕೆದಾರರಿಗೆ 50-60 ರೂ. ಹೆಚ್ಚಳವಾಗಲಿದೆ. ಪ್ರತಿ ವರ್ಷ ವಿದ್ಯುತ್ ದರದಂತೆ ನೀರಿನ ದರವೂ ಏರಿಕೆಯಾಗಲಿದೆ.

ಬೆಂಗಳೂರು (ಏ.9): ರಾಜಧಾನಿ ಬೆಂಗಳೂರಿನಲ್ಲಿ ನೀರಿನ ದರ ಅಧಿಕೃತವಾಗಿ ಏರಿಕೆಯಾಗಿದೆ. ಏಪ್ರಿಲ್‌ 1 ರಿಂದ ಪೂರ್ವಾನ್ವಯ ಆಗುವಂತೆ ನೀರಿನ ದರ ಏರಿಕೆ ಜಾರಿಗೆ ಬರಲಿದೆ. ಇನ್ನು ಮುಂದೆ ಪ್ರತಿ ವರ್ಷ ಏಪ್ರಿಲ್‌ 1 ರಂದು ನೀರಿನ ದರ ಏರಿಕೆಯಾಗಲಿದ್ದು, ಇದಕ್ಕೆ ಸರ್ಕಾರ ಅನುಮತಿ ಕೂಡ ಅಗತ್ಯವಿರೋದಿಲ್ಲ. ಇದಕ್ಕೆ ಸರ್ಕಾರ ಕೂಡ ಒಪ್ಪಿಗೆ ನೀಡಿದೆ.

ಈ ಬಗ್ಗೆ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಕಳೆದ 11 ವರ್ಷದ ಹಿಂದೆ ನೀರಿನ ದರ ಏರಿಕೆ ಆಗಿತ್ತು. 2014ರಿಂದ ನೀರಿನ ದರ ಏರಿಕೆ ಆಗಿಲ್ಲ. 3 ಬಾರಿ ಎಲೆಕ್ಟ್ರಿಕ್ ಸಿಟಿ ಖರ್ಚು ಜಾಸ್ತಿ ಆಗಿದೆ. ವಿದ್ಯುತ್‌ ದರದಿಂದಲೇ ನಮಗೆ ಹೆಚ್ಚಿನ ಖರ್ಚು ಬೀಳುತ್ತದೆ. ಆದಾಯಕ್ಕಿಂತ ಬರುವಂತಹ ಖರ್ಚು ಜಾಸ್ತಿ ಆಗುತ್ತಿದೆ. ಕಾವೇರಿ 5ನೇ ಹಂತ ಆದ ಮೇಲೆ ತಿಂಗಳಿಗೆ ಸಾಕಷ್ಟು  ಆದಾಯ  ಕೊರತೆ ಆಗುತ್ತಿದೆ. ವಾರ್ಷಿಕವಾಗಿ ಕೋಟ್ಯಂತರ ನಷ್ಟ ಆಗುತ್ತಿದೆ ಎಂದು ಹೇಳಿದರು.

Bwssb 1994 ಕಾಯ್ದೆಯಂತೆ  ಸಂಪೂರ್ಣ ಅಧಿಕಾರ ಇದೆ. ಮಂಡಳಿಯ ಸದಸ್ಯರು ತುರ್ತಾಗಿ ಚರ್ಚೆ ಮಾಡಿ ನಿರ್ಣಯ ತೆಗೆದುಕೊಂಡಿದ್ದೇವೆ. ಪ್ರಸ್ತಾವನೆ ಪ್ರಕಾರ ಡಿಸಿಎಂ ಒಳ್ಳೆ ನಿರ್ದೇಶನ ಕೊಟ್ಟರು. ಸಾರ್ವಜನಿಕರಿಗೆ ಸಾಕಷ್ಟು ಹೊಡೆತ ಆಗಬಾರದು ಅಂತ ನಿರ್ದೇಶನ ಕೊಟ್ಟಿದ್ದರು ಎಂದಿದ್ದಾರೆ.

ಪ್ರತಿ ತಿಂಗಳು ಎಷ್ಟು ಖರ್ಚು ಬೀಳಲಿದೆ: ಗೃಹ ಬಳಕೆ ಮಾಡುವವರಿಗೆ ಅಂದಾಜು ಪ್ರತಿ ತಿಂಗಳು ಇನ್ನುಮುಂದೆ 20 ರಿಂದ 30 ರೂ ವರೆಗೆ ದರ ಬರಲಿದೆ. ವಾಣಿಜ್ಯ ಬಳಕೆದಾರರಿಗೆ ಪ್ರತಿ ತಿಂಗಳು 50 ರಿಂದ 60 ರೂ ಬರುವ ಸಾಧ್ಯತೆ ಇದೆ. ಸ್ಯಾನಿಟರಿ ದರ ಶೇ.25ರಷ್ಟು ಹೆಚ್ಚಳ ಮಾಡಲಾಗಿದ್ದು, ಪ್ರತಿ ತಿಂಗಳು 10 ರಿಂದ 15 ರೂಪಾಯಿ ಬರುವ ಸಾಧ್ಯತೆ ಇದೆ. ಒಟ್ಟು ಇನ್ನುಮುಂದೆ ಗೃಹಬಳಕೆಯವರು 50 ರೂಪಾಯಿ ಹಾಗೂ ಕಮರ್ಷಿಯಲ್ 100 ರೂಪಾಯಿ ವರೆಗೆ ಹೆಚ್ಚಳ ಬರುವ ಸಾಧ್ಯತೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಕಾವೇರಿ ನೀರು ದರ ಏರಿಕೆ: ಪ್ರತಿ ಲೀಟರ್‌ಗೆ 1 ಪೈಸೆ ಹೆಚ್ಚಳ?

ವಿದ್ಯುತ್‌ ದರದ ರೀತಿ ಪ್ರತಿ ವರ್ಷ ನೀರಿನ ದರ ಏರಿಕೆ: ಇನ್ನುಮುಂದೆ ವಿದ್ಯುತ್ ರೀತಿ ಕಾವೇರಿ ನೀರಿನ ದರ ಕೂಡ ಏರಿಕೆ ಆಗಲಿದೆ. ಪ್ರತಿ ವರ್ಷ ಜಲಮಂಡಳಿ ದರ ಪರಿಷ್ಕರಣೆ ಮಾಡಲಿದೆ. ದರ ಏರಿಕೆಯ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಅಗತ್ಯವಿರೋದಿಲ್ಲ. ಜಲಮಂಡಳಿ ಇನ್ಮುಂದೆಯೇ ನಿರ್ಧಾರ ಮಾಡಲಿದೆ. ಮುಂದಿನ ವರುಷ ಶೇ. 3 ರಷ್ಟು ದರ ಏರಿಕೆ ಆಗಲಿದೆ. ಅದೇ ರೀತಿ ಮುಂದಿನ ಎರಡು ವರುಷ ಶೇ.3ರಷ್ಟು ದರ ಏರಿಕೆಗೆ ನಿರ್ಧಾರ ಮಾಡಲಾಗಿದೆ.ಜಲಮಂಡಳಿ ಆರ್ಥಿಕ ವೆಚ್ಚವನ್ನು ಸರಿದೂಗಿಸಲು ಈ ರೀತಿ ನಿರ್ಧಾರ ಮಾಡಲಾಗಿದೆ. ಇದಕ್ಕೆ ಸರ್ಕಾರವೂ ಒಪ್ಪಿಗೆ ನೀಡಿದೆ ಎಂದು ಡಾ ರಾಮ್‌ಪ್ರಸಾತ್ ಮನೋಹರ್ ಹೇಳಿದ್ದಾರೆ.

ಬೆಂಗಳೂರು ಜಲಮಂಡಳಿಗೆ 103 ಕೋಟಿ ರೂ. ಬಹುಮಾನ ಕೊಟ್ಟ ಕೇಂದ್ರ ಸರ್ಕಾರ! ಈ ಹಣ ಏನು ಮಾಡ್ತಾರೆ?

ಯಾರಿಗೆ ಎಷ್ಟು ಏರಿಕೆ ಆಗಲಿದೆ.

  • ಡೊಮೆಸ್ಟಿಕ್ ಕನೆಕ್ಷನ್‌: ಗರಿಷ್ಠ ​ಲೀಟರ್‌ಗೆ ಒಂದು ಪೈಸೆ ಹೆಚ್ಚಳ
  • 0-8 ಸಾವಿರದೊಳಗೆ ಸ್ಲ್ಯಾಬ್‌: ಲೀಟರ್‌​ಗೆ 0.15 ಪೈಸೆ ಹೆಚ್ಚಳ
  • 8-25 ಸಾವಿರದೊಳಗೆ ಸ್ಲ್ಯಾಬ್‌: ಲೀಟರ್‌​ಗೆ 0.40 ಪೈಸೆ ಹೆಚ್ಚಳ
  • 25 ಸಾವಿರ ಲೀಟರ್​ಗಿಂತ ಹೆಚ್ಚು ಬಳಕೆ:  0.80 ಪೈಸೆ ಹೆಚ್ಚಳ
  • 50 ಸಾವಿರದಿಂದ 1 ಲಕ್ಷ ಲೀಟರ್ ನೀರು ಬಳಕೆ: 1 ಪೈಸೆ ಹೆಚ್ಚಳ
     

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹನಿಮೂನ್‌ ಮೊಟಕುಗೊಳಿಸಿ ನವವಿವಾಹಿತೆ ನೇಣಿಗೆ ಶರಣು, ಪೊಲೀಸರು ಬರದಂತೆ ಗೇಟ್‌ ಗೆ ನಾಯಿ ಕಟ್ಟಿ ಲಾಕ್ ಮಾಡಿಕೊಂಡ ಆರೋಪಿಗಳು!
'ಬೆನ್ನುಮೂಳೆ ಮುರಿದಿದೆ..ಕಣ್ಣೆದುರೇ ಸ್ನೇಹಿತೆಯ ಸಾವು ಕಂಡು ಮಗಳು ಶಾಕ್‌ನಲ್ಲಿದ್ದಾಳೆ..' ಗಗನಶ್ರೀ ತಂದೆ ಸಿದ್ದರಾಜು ಮಾತು