ಬಳ್ಳಾರಿ ರೆಡ್ಡಿ ಬ್ರದರ್ಸ್ ವಿರುದ್ಧ ತೊಡೆ ತಟ್ಟಿದ್ದ 'ಕೈ' ಮಾಜಿ ಸಚಿವ ಬಿಜೆಪಿಯತ್ತ..!

By Web Desk  |  First Published Sep 27, 2019, 3:00 PM IST

ಕಾಂಗ್ರೆಸ್ ನಾಯಕ, ಮಾಜಿ ಶಾಸಕರೊಬ್ಬರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಈ ಕುರಿತು ಮಾತುಕತೆಯೂ ಆರಂಭವಾಗಿದೆ.  ಬಳ್ಳಾರಿ ರೆಡ್ಡಿ ಬ್ರದರ್ಸ್ ವಿರುದ್ಧ ತೊಡೆ ತಟ್ಟಿದ್ದ ಮಾಜಿ ಸಚಿವರೊಬ್ಬರು ಬಿಜೆಪಿ ಸೇರುವ ಮುನ್ಸೂಚನೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ಶಾಕ್ ಕೊಟ್ಟಿದ್ದಾರೆ.


ಬೆಂಗಳೂರು/ಬಳ್ಳಾರಿ, (ಸೆ.27): ಬಳ್ಳಾರಿ ರೆಡ್ಡಿ ಬ್ರದರ್ಸ್ ವಿರುದ್ಧ ತೊಡೆ ತಟ್ಟಿದ್ದ ಮಾಜಿ ಸಚಿವ ಬಿಜೆಪಿ ಸೇರುವ ಸನಿಹದಲ್ಲಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ, ಬಳ್ಳಾರಿಯ ಕಾಂಗ್ರೆಸ್ ನಾಯಕ ಅನಿಲ್ ಲಾಡ್ ಬಿಜೆಪಿ ಸೇರುವುದು ಖಚಿತ ಎನ್ನಲಾಗುತ್ತಿದೆ.  ಈಗಾಗಲೇ ಅನಿಲ್ ಲಾಡ್ ತಮ್ಮ ಆಪ್ತರಿಗೆ, ಕಾರ್ಯಕರ್ತರಿಗೆ ಈಗಾಗಲೇ ಬಿಜೆಪಿ ಸೇರುವ ಕುರಿತು ಅಭಿಪ್ರಾಯ ತಿಳಿಸುವಂತೆ ಸಂದೇಶ ಕಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Tap to resize

Latest Videos

ಹೊಯ್‌ಕೈ: ಸಿದ್ದು, ಮುನಿಯಪ್ಪ ಏಕವಚನ ಜಟಾಪಟಿ!

ಈ ಸಂಬಂಧ ಅವರು ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದು, ಅಂದು ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.

ಈಗಾಗಲೇ, ಅನಿಲ್ ಲಾಡ್ ಅವರು ತಮ್ಮ ಒಂದು ಕಾಲದ ಬದ್ಧ ವೈರಿ ಬಿ. ಶ್ರೀರಾಮುಲು ಅವರ ಜತೆಯಲ್ಲೂ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಲಾಡ್ ಬಿಜೆಪಿ ತೆಕ್ಕೆಗೆ ಜಾರುವುದು ನಿಶ್ಚಿತವಾಗಿದೆ.

2018ರ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಪಕ್ಷದ ಅನಿಲ್ ಲಾಡ್ ಕಾಂಗ್ರೆಸ್ ಕಾರ್ಯ ಚಟುವಟಿಕೆಗಳಿಂದ ದೂರ ಉಳಿದಿರುವುದನ್ನು ಇಲ್ಲಿ ಸ್ಮರಿಸಬಹುದು.

ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್‌ ಎದುರಿಸುವ ಶಕ್ತಿ ಅನಿಲ್ ಲಾಡ್‌ ಅವರಿಗಿತ್ತು. ಇದೀಗ ಲಾಡ್ ಬಿಜೆಪಿಯತ್ತ ಮುಖ ಮಾಡಿರುವುದು ಮುಂದಿನ ದಿನಗಳಲ್ಲಿ  ಕಾಂಗ್ರೆಸ್‌ಗೆ ಭಾರೀ ನಷ್ಟವಾಗಲಿದೆ.

ಸೆ.27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!