ಸದನದಲ್ಲಿ ಮದ್ಯಪಾನ ನಿಷೇಧ ಪ್ರಶ್ನೆಗೆ ಎದ್ದಿತು ನಗೆಯ ಬುಗ್ಗೆ !

Published : Dec 11, 2018, 01:22 PM ISTUpdated : Dec 11, 2018, 02:23 PM IST
ಸದನದಲ್ಲಿ ಮದ್ಯಪಾನ ನಿಷೇಧ ಪ್ರಶ್ನೆಗೆ ಎದ್ದಿತು ನಗೆಯ ಬುಗ್ಗೆ !

ಸಾರಾಂಶ

ರಾಜ್ಯದಲ್ಲಿ ಲಾಟರಿ ನಂತರ ಮದ್ಯಪಾನ ನಿಷೇಧ ಮಾಡಲಾಗುತ್ತದೆಯೇ? ಹೀಗೊಂದು ಪ್ರಶ್ನೆ ಉದ್ಭವವಾಗಿದೆ.  ಇದಕ್ಕೆ ಕಾರಣ ಬೆಳಗಾವಿಯ ವಿಧಾನಸಭೆ ಅಧಿವೇಶನ

ಬೆಳಗಾವಿ(ಡಿ.11)  ರಾಜ್ಯದಲ್ಲಿ ಮದ್ಯಪಾನ ನಿಷೇಧ ಜಾರಿಗೆ ತರಲಾಗುತ್ತಿದೆಯೇ? ಎಂದು ಬಿಜೆಪಿ ಶಾಸಕ ಅಪ್ಪಚ್ವುರಂಜನ್ ಪ್ರಶ್ನೆ ಮಾಡಿದ್ದಾರೆ. ಆದರೆ ಈ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಿಲ್ಲ. ಯಾಕೆಂದರೆ ಮೊದಲೆ ನೋಟಿಸ್ ನೀಡಬೇಕಾಗಿತ್ತು ಎಂದು ಸ್ಪೀಕರ್ ತಿಳಿಸಿದರು.

ಈ ಪ್ರಶ್ನೆಗೆ ಸಂಜೆ ಪ್ರತ್ಯೇಕವಾಗಿ ಬಂದರೆ ಉತ್ತರ ಒದಗಿಸಲಾಗುವುದು ಎಂದು ಕಾಲೆಳೆದ ಸ್ಪೀಕರ್ ರಮೇಶ್‌ ಕುಮಾರ್ ಚಟಾಕಿ ಹಾರಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ  ಸಿಎಂ ಕುಮಾರಸ್ವಾಮಿ ಲಿಕ್ಕರ್ ಬ್ಯಾನ್ ಮಾಡಿದ್ರೆ ಅಪ್ಪಚ್ಚು ರಂಜನ್ ಗೆ ಕೊಡಗಿನಲ್ಲಿ ಹೆಚ್ಚು ತೊಂದರೆಯಾಗುತ್ತದೆ ಎಂದು ಹೇಳಿದಾಗ ನಗೆ ಬುಗ್ಗೆ ಉಕ್ಕಿ ಬಂತು.

‘ಗೆಸ್ಟ್ ಹೌಸ್ ಬಿಟ್ಟು ಫೈವ್ ಸ್ಟಾರ್ ಹೋಟೆಲ್! ಇವ್ರೇನಾ ಜನಸಾಮಾನ್ಯರ ಸಿಎಂ?’

ಬೆಳಗಾವಿಯಲ್ಲಿ ಹತ್ತು ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ರಾಜ್ಯದ ವಿವಿಧ ಸಮಸ್ಯೆಗಳ ಚರ್ಚೆಗೆ ವೇದಿಕೆ ನಿರ್ಮಾಣವಾಗಿದೆ.  ಎರೆಡನೇ ದಿನ ಕಲಾಪ ಬೆಳಗಾವಿಯಲ್ಲಿ ಮುಂದುವರಿದಿದೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೌಟು, ಕುಕ್ಕರ್ ಹಿಡಿದು ನಿಲ್ಲಿ, SIR ವಿರುದ್ಧ ಹೋರಾಟಕ್ಕೆ ಮಹಿಳೆಯರಿಗೆ ಸಿಎಂ ಮಮತಾ ಬ್ಯಾನರ್ಜಿ ಕರೆ
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ