
ಬೆಳಗಾವಿ[ಜೂ.20] ಇದನ್ನು ಅಚ್ಚರಿ ಅಂತ ಕರೆಯುತ್ತಿರೋ, ಪವಾಡ ಅಂತ ಕರೆಯುತ್ತಿರೋ ಅಥವಾ ಕೆಟ್ಟ ಘಟನೆಯ ಸೂಚನೆ ಅಂತ ಕರೆಯುತ್ತಿರೋ ಗೊತ್ತಿಲ್ಲ. ಆದರೆ ಇಂಥದ್ದೊಂದು ಪ್ರಕರಣಕ್ಕೆ ಬೆಳಗಾವಿ ಜಿಲ್ಲೆ ಸಾಕ್ಷಿಯಾಗಿದೆ.
ಗ್ರಾಮದೇವತೆ ದ್ಯಾಮವ್ವನ ಕಲ್ಲಿನ ಮೂರ್ತಿಯ ಎರಡು ಕಣ್ಣಿನಿಂದ ಬುಧವಾರ ಬೆಳಗ್ಗೆ ಸುಮಾರು ಎರಡು ಗಂಟೆಯತನಕ ಕಣ್ಣೀರು ಬೀಳುತ್ತಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಗಟ್ಟಿ ಸಮೀಪದ ಹಲಕಿ ಗ್ರಾಮದ ದೇವಿಯ ಮೂರ್ತಿಯ ಕಣ್ಣಿಂದ ನೀರು ಬರುತ್ತಿದೆ.
ಏನಿದು ಅಚ್ಚರಿ?: ಹಲಕಿ ಗ್ರಾಮದ ದ್ಯಾಮವ್ವನ ದೇವಸ್ಥಾನಕ್ಕೆ ಎಂದಿನಂತೆ ನಿತ್ಯ ಪೂಜೆ ಮಾಡಲು ಪೂಜಾರಿ ಭೀಮಪ್ಪ ಪೂಜೇರ ಆಗಮಿಸಿದ್ದಾರೆ. ಈ ವೇಳೆ ಎಲ್ಲ ಪೂಜೆಯನ್ನು ಪೂಜೇರಿ ನೆರವೇರಿಸಿದ್ದಾರೆ. ಇದೇ ಸಮಯದಲ್ಲಿ ಬೆಳಗ್ಗೆ 9 ಗಂಟೆಗೆ ಹಲಕಿ ಗ್ರಾಮದ ಸಾವಿತ್ರಿ ಗೌಡರ ಎಂಬ ಮಹಿಳೆ ದೇವಸ್ಥಾನದಲ್ಲಿ ದೇವಿಗೆ ನೈವೇದ್ಯ ಮಾಡಿದ್ದಾಳೆ. ನಂತರ ದೇವಿ ಮೂರ್ತಿ ಕಾಣುವಂತೆ ದೇವಸ್ಥಾನ ಆವರಣದಲ್ಲಿ ವಿಶ್ರಾಂತಿ ಪಡೆದಿದ್ದಾಳೆ. ಈ ವೇಳೆ ದೇವಿಯ ಕಣ್ಣುಗಳಿಂದ ನೀರು ಜಿನುಗುವುದು ಕಂಡು ಭಯಭೀತಳಾಗಿದ್ದಾಳೆ. ಆಗ ತಕ್ಷಣ ಮನೆಗೆ ಹೋಗಿ ಅಣ್ಣ, ತಮ್ಮಂದಿರಿಗೆ ಸುದ್ದಿ ಮುಟ್ಟಿಸಿದ್ದಾಳೆ.
ವಿಷಯ ತಿಳಿದ ಗ್ರಾಮಸ್ಥರು ಎಲ್ಲರೂ ತಂಡೋಪತಂಡವಾಗಿ ದೇವಸ್ಥಾನಕ್ಕೆ ಬಂದು ನೋಡಿದಾಗ, ದೇವಿಯ ಕಣ್ಣಲ್ಲಿ ನೀರು ಬರುವುದನ್ನು ಗಮನಿಸಿದ್ದಾರೆ. ನಂತರ ಈ ಸುದ್ದಿ ಎಲ್ಲ ಕಡೆ ಹರಡಿದ್ದು, ಜನ ಮರಳೋ ಜಾತ್ರೆ ಮರಳು ಎಂಬಂತೆ ತಾಯಿಯನ್ನು ನೋಡಲು ಮುಗಿಬಿದ್ದಿದ್ದಾರೆ.
ಹಿನ್ನೆಲೆ: ಸುಮಾರು ವರ್ಷದಿಂದ ಪುರಾತನವಾದ ಈ ಗುಡಿ ಹಲಕಿ ಗ್ರಾಮಕ್ಕೆ ವಿಷೇಶವಾಗಿತ್ತು ಆದರೆ ಕಳೆದ ಹತ್ತು ವರ್ಷದಿಂದ ಗ್ರಾಮಸ್ಥರು ರೈತರು ಕೊಲಿಕಾರರು ಮುಂಗಾರು ಬಿತ್ತನೆ ಮಾಡುವಾಗ ದ್ಯಾಮ್ಮವ್ವಗೆ ಉಡಿ ತುಂಬುವ ವಾಡಿಕೆ ಇತ್ತು ಆದರೆ ಕಳೇದ ೧೦ವರ್ಷದಿಂದ ಈ ದೇವಿಗೆ ಊಡಿ ತುಂಬದೆ ಇರುವದರಿಂದ ದ್ಯಾಮ್ಮವ್ವ ಮುನ್ನಿಸಿಕೊಂಡಿದ್ದಾಳೆ ಎನ್ನಲಾಗುತ್ತಿದೆ. 10 ವರ್ಷದಿಂದ ಮುಂಗಾರು ಮತ್ತು ಹಿಂಗಾರು ಮಳೆ ಸರಿಯಾಗಿ ಬಾರದೆ ವಿವಿಧ ಬೆಳೆಗಳು ರೈತರ ಕೈ ಸೇರದೆ ಇರುವುದು ಈ ದೇವಿಯ ಬಗ್ಗೆ ನಿರ್ಲಕ್ಷ ವಹಿಸಿರುವುದು ಸತ್ಯವೆಂದು ಹೇಳುತ್ತಿದ್ದರೆ, ಕಳೆದ ಹತ್ತು ವರ್ಷದ ಹಿಂದೆ ಈ ಗುಡಿ ನಿಮಾರ್ಣಕ್ಕೆ ಹಲಕಿ ಯುವ ಸೈನೀಕರು ಮುಂದಾಗಿದ್ದು ಶಾಸಕರ ಅನುದಾನಲ್ಲಿ ಸಮುದಾಯ ಭವನ ನಿರ್ಮಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.