ಎಂಜಿನಿಯರಿಂಗ್‌ ವಿದ್ಯಾರ್ಥಿನಿ ದಾಖಲೆ, ಹಣ ನೀರುಪಾಲು

By Web DeskFirst Published Aug 20, 2019, 10:16 AM IST
Highlights

ವಿದ್ಯಾರ್ಥಿನಿಯ ಶೈಕ್ಷಣಿಕ ದಾಖಲೆಗಳು, ಕಾಲೇಜು ಶುಲ್ಕಕ್ಕಾಗಿ ಆಕೆಯ ತಂದೆ ತೆಗೆದಿಟ್ಟಿದ್ದ .1 ಲಕ್ಷ ಕಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರು ಪಿಕೆ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ (ಆ. 20): ವಿದ್ಯಾರ್ಥಿನಿಯ ಶೈಕ್ಷಣಿಕ ದಾಖಲೆಗಳು, ಕಾಲೇಜು ಶುಲ್ಕಕ್ಕಾಗಿ ಆಕೆಯ ತಂದೆ ತೆಗೆದಿಟ್ಟಿದ್ದ .1 ಲಕ್ಷ ಕಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರು ಪಿಕೆ ಗ್ರಾಮದಲ್ಲಿ ನಡೆದಿದೆ.

'ಮಹಾ' ಪ್ರವಾಹಕ್ಕೆ ನಲುಗಿದ ದೇವಸ್ಥಾನಗಳನ್ನು ಸ್ವಚ್ಛಗೊಳಿಸಿದ ಮುಸಲ್ಮಾನರು!

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಕಾಲೇಜೊಂದರಲ್ಲಿ ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ.ಬಸವರಾಜ ಕಾಂಬಳೆ (ನಾಗನೂರು) ಅವರ ಪಿಕೆ ಗ್ರಾಮದಲ್ಲಿರುವ ಮನೆ ಪ್ರವಾಹಕ್ಕೆ ಕುಸಿದಿದೆ. ಜೊತೆಗೆ ಅವರ ಪುತ್ರಿ ಝಾನ್ಸಿರಾಣಿ ಕಾಂಬಳೆ (ನಾಗನೂರು) ಎಂಬ ವಿದ್ಯಾರ್ಥಿನಿಯ ಕೆಲವು ಪ್ರಮಾಣ ಪತ್ರಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ.

ಝಾನ್ಸಿರಾಣಿ ಸರ್ಕಾರಿ ಕೋಟಾದಲ್ಲಿ ಚಿಕ್ಕೋಡಿಯಲ್ಲಿರುವ ಕೆಎಲ್‌ಇ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿಎಸ್‌ (ಕಂಪ್ಯೂಟರ್‌ ವಿಜ್ಞಾನ) ನಲ್ಲಿ ಪ್ರವೇಶ ಪಡೆದುಕೊಂಡಿದ್ದಾಳೆ. ಇದಕ್ಕಾಗಿ ಅವರ ತಂದೆ ಪ್ರೊ.ಬಸವರಾಜ ಅವರು .20 ಸಾವಿರ ಹಣ ತುಂಬಿದ್ದಾರೆ.

ಶಾಸಕ - ಜಿಲ್ಲಾಡಳಿತದ ಶ್ರಮ : ಮೂರೇ ದಿನದಲ್ಲಿ ಕೊಚ್ಚಿ ಹೋದ ಸೇತುವೆ ನಿರ್ಮಾಣ

ಇನ್ನುಳಿದ ಹಣ, ಹಾಸ್ಟೆಲ್‌ ಶುಲ್ಕ ತುಂಬಲೆಂದು .1 ಲಕ್ಷ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು. ಆದರೆ, ಕೃಷ್ಣಾ ನದಿಗೆ ಪ್ರವಾಹ ಬಂದಿದ್ದರಿಂದ ಮನೆಯಲ್ಲಿಯೇ ಎಲ್ಲವನ್ನು ಬಿಟ್ಟು ಪರಿಹಾರ ಕೇಂದ್ರಗಳತ್ತ ತೆರಳಿದ್ದರು.

ನೆರೆ ಇಳಿದ ಮೇಲೆ ವಾಪಸ್‌ ಬಂದು ನೋಡಿದರೆ, ಮನೆ ಬಿದ್ದುಹೋಗಿದೆ. ಮನೆಯಲ್ಲಿಟ್ಟಿದ್ದ ಅಂದಾಜು 70 ರಿಂದ 80 ಸಾವಿರ ಮೌಲ್ಯದ ಪುಸ್ತಕಗಳು, ಪುತ್ರಿಯ ಶೈಕ್ಷಣಿಕ ದಾಖಲೆಗಳು, ಅಂಕಪಟ್ಟಿ, ಕಾಲೇಜು ಶುಲ್ಕ ಕಟ್ಟಲು, ಹಾಸ್ಟೆಲ್‌ ಪ್ರವೇಶಕ್ಕೆಂದು ಇಟ್ಟಿದ್ದ .1 ಲಕ್ಷ ಹಣ ಕೂಡ ಕೊಚ್ಚಿಕೊಂಡು ಹೋಗಿದೆ.

 

click me!