ಭಾರತ-ಚೀನಾ-ಪಾಕ್ ಸಹಕಾರದ ಪರಿಕಲ್ಪನೆ ಚೀನಾ ಹಿಂದೇಟು..!

First Published Jun 20, 2018, 7:33 PM IST
Highlights

ಭಾರತ-ಚೀನಾ-ಪಾಕ್ ಸಹಕಾರದ ಪರಿಕಲ್ಪನೆ ಚೀನಾ ಹಿಂದೇಟು

ಸಹಕಾರದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದ ಚೀನಾ ರಾಯಭಾರಿ ಕಚೇರಿ 

ಭಾರತದಲ್ಲಿರುವ ಚೀನಾದ ರಾಯಭಾರಿ ಕಚೇರಿ ಅಧಿಕಾರಿ ಹೇಳಿಕೆ

ಸಹಕಾರದಲ್ಲಿ ಕೇವಲ ಭಾರತ-ಪಾಕ್ ಹೆಸರು ಪ್ರಸ್ತಾಪ

ಬೀಜಿಂಗ್(ಜೂ.20): ಭಾರತ-ಚೀನಾ-ಪಾಕ್ ತ್ರಿಪಕ್ಷೀಯ ಸಹಕಾರದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದ ಚೀನಾದ ರಾಯಭಾರಿ ಕಚೇರಿ ಅಧಿಕಾರಿಯ ಹೇಳಿಕೆಯಿಂದ ಸ್ವತಃ ಚೀನಾ ಸರ್ಕಾರ ಅಂತರ ಕಾಯ್ದುಕೊಂಡಿದೆ. 

ಶಾಂಘೈ ಸಹಕಾರ ಒಕ್ಕೂಟದ ಅಡಿಯಲ್ಲಿ ತ್ರಿಪಕ್ಷೀಯ ಸಹಕಾರದ ಕುರಿತು  ಭಾರತದಲ್ಲಿರುವ ಚೀನಾದ ರಾಯಭಾರಿ ಕಚೇರಿ ಅಧಿಕಾರಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಚೀನಾ ಅಂತರ ಕಾಯ್ದುಕೊಂಡಿದ್ದರೂ ಭಾರತ-ಪಾಕಿಸ್ತಾನದ ನಡುವೆ ಮಾತುಕತೆಯನ್ನು ಬಲಪಡಿಸುವುದು ಮುಖ್ಯವಾಗಿದೆ, ಇದರಿಂದಾಗಿ ಉಭಯ ರಾಷ್ಟ್ರಗಳ ಹಿತಾಸಕ್ತಿಗಳೂ ಸುಧಾರಣೆಯಾಗಲಿವೆ ಎಂದು ಹೇಳಿದೆ. 

ಭಾರತ-ಪಾಕಿಸ್ತಾನದ ನಡುವೆ ಶಾಂತಿ ಮೂಡಿಸಲು ಶಾಂಘೈ ಸಹಕಾರ ಒಕ್ಕೂಟದ ಅಡಿಯಲ್ಲಿ ಭಾರತ-ಚೀನಾ-ಪಾಕ್ ತ್ರಿಪಕ್ಷೀಯ ಸಹಕಾರದ ಅಗತ್ಯವಿದೆ ಎಂದು ಚೀನಾ ರಾಯಭಾರಿ ಕಚೇರಿ ಅಧಿಕಾರಿ ಜೂ.18 ರಂದು ಹೇಳಿದ್ದರು. 

ಭಾರತ, ಪಾಕಿಸ್ತಾನ ಎರಡೂ ಚೀನಾದ ಮಿತ್ರ ರಾಷ್ಟ್ರಗಳು, ಮಿತ್ರರಾಷ್ಟ್ರಗಳ ನಡುವೆ ಉತ್ತಮ, ಸೌಹಾರ್ದಯುತ ವಾತಾವರಣವನ್ನುಂಟುಮಾಡಲು ಚೀನಾ ಬಯಸುತ್ತಿದೆ, ಈ ಮೂಲಕ ಪ್ರಾದೇಶಿಕವಾಗಿ ಸ್ಥಿರತೆ ಸಾಧ್ಯವಿದೆ ಎಂದು ಚೀನಾ ರಾಯಭಾರಿ ಕಚೇರಿ ಅಧಿಕಾರಿಗಳು ಹೇಳಿದ್ದರು. 

click me!