
ಕೋಲ್ಕತ್ತಾ(ಏ.12): ಬಿಜೆಪಿಯ ನಾಯಕನೊಬ್ಬ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತಲೆ ಕಡಿದು ತಂದವರಿಗೆ 11 ಲಕ್ಷ ರೂ. ಬಹುಮಾನ ನೀಡುವುದಾಗಿ ಹೇಳಿರುವ ಮಾತು ಈಗ ವಿವಾದಕ್ಕೀಡಾಗಿದೆ.
ಹನುಮ ಜಯಂತಿಯ ದಿನದಂದು ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ರಾಲಿಯಲ್ಲಿ ವಿರುದ್ಧ ಪೊಲೀಸರು ಲಾಠಿ ಚಾರ್ಚ್ ನಡೆಸಿದಕ್ಕೆ ಆಕ್ರೋಶ'ಗೊಂಡಿರುವ ಪಶ್ಚಿಮ ಬಂಗಾಳದ ಯುವ ಮೋರ್ಚಾ ನಾಯಕ ಯೋಗೀಶ್ ವರ್ಶೆನೆಯ್ ಈ ಹೇಳಿಕೆ ನೀಡಿದ್ದಾನೆ.
'ಯಾರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತಲೆ ಕಡಿದು ತರಿತ್ತಾರೋ ಅವರಿಗೆ 11 ಲಕ್ಷ ಬಹುಮಾನ ನೀಡುತ್ತೇನೆ. ಮಮತಾ ಬ್ಯಾನರ್ಜಿ' ಅವರು ಸರಸ್ವತಿ ಪೂಜೆ'ಗೆ ಅವಕಾಶ ನೀಡುವುದಿಲ್ಲ. ರಾಮ ನವಮಿಯ ಸಂಭ್ರಮ ಆಚರಿಸುವುದಕ್ಕೆ ಬಿಡುವುದಿಲ್ಲ. ಅಲ್ಲದೆ ಹನುಮ ಜಯಂತಿಯ ಮೆರವಣಿಗೆ ವೇಳೆಯಲ್ಲಿ ಸಾರ್ವಜನಿಕರ ಮೇಲೆ ನಿರ್ದಯವಾಗಿ ಲಾಠಿ ಚಾರ್ಜ್ ನಡೆಸಿದ್ದಾರೆ. ಇವರು ಸದಾ ಮುಸ್ಲಿಮರಿಗೆ ಸದಾ ಬೆಂಬಲ ನೀಡುತ್ತಾರೆ. ಇಫ್ತಾರ್ ಕೂಟವನ್ನು ಆಯೋಜಿಸುತ್ತಾರೆ'ಎಂದು ಯೋಗೀಶ್ ವರ್ಶೆನೆಯ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾನೆ.
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಳೆದ ಮಮತಾ ಬ್ಯಾನರ್ಜಿ ಆಡಳಿತ ಅಧಿಕಾರಕ್ಕೆ ಬಂದ ನಂತರ ಬಲಪಂಥೀಯ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯುತ್ತಿದೆ. ಅಲ್ಲದೆ ಮುಖ್ಯಮಂತ್ರಿಗಳು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ'ಎಂದು ಸ್ಥಳೀಯ ಬಿಜೆಪಿ ಮುಖಂಡರ ಆರೋಪ'ವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.