ಭೇಷ್ ಸರ್ಕಾರ: ಇನ್ಮೇಲೆ ರೇಶನ್ ಜೊತೆ ಬಿಯರ್ ಸಪ್ಲೈ!

First Published Jun 30, 2018, 7:42 PM IST
Highlights

ಇನ್ಮೇಲೆ ರೇಶನ್ ಜೊತೆಗೆ ಬಿಯರ್ ಸಪ್ಲೈ

ಪಡಿತರ ಸೌಲಭ್ಯಕ್ಕೆ ಬಿಯರ್ ಸೇರ್ಪಡೆ

ಬ್ರಿಟನ್ ನಿರ್ಧಾರಕ್ಕೆ ಕಾರಣವಾದರೂ ಏನು?

 Co2 ಕೊರತೆ ಎದುರಿಸುತ್ತಿರುವ ಬಿಯರ್ ಇಂಡಸ್ಟ್ರಿ

ಲಂಡನ್(ಜೂ.30): ಇದೊಂದು ಬಾಕಿ ಇತ್ತು ನೋಡ್ರಿ. ಇನ್ಮೇಲೆ ಬಿಯರ್ ಕುಡಿಯಕ್ಕೆ ಅಲ್ಲಿ, ಇಲ್ಲಿ, ಬಾರು, ಕಾರು ಅಂತಾ ಸುತ್ತಬೇಕಿಲ್ಲ. ಯಾಕಂದ್ರೆ ಇನ್ಮುಂದೆ ಸರ್ಕಾರವೇ ರೇಶನ್ ಜೊತೆಗೆ ಬಿಯರ್ ನ್ನು ಮನೆ ಮನೆಗೆ ತಲುಪಿಸಲಿದೆ. ಅಯ್ಯೋ! ಸ್ವಲ್ಪ ಇರಿ..ಹೀಗೆ ಬಿಯರ್ ನ್ನು ರೇಶನ್ ಜೊತೆಗೆ ಕೊಡುವ ನಿರ್ಧಾರ ನಮ್ಮ ರಾಜ್ಯ ಅಥವಾ ಕೇಂದ್ರ ಸರ್ಕಾರದ್ದಲ್ಲ. ಬದಲಿಗೆ ಇಂತಹ ನಿರ್ಧಾರ ಕೈಗೊಂಡಿರುವುದು ಬ್ರಿಟನ್ ಸರ್ಕಾರ.

ಇದಕ್ಕೆ ಕಾರಣ ಏನು ಅಂತಾ ಕೇಳಿದ್ರೆ ಅದು ಇನ್ನೂ ವಿಚಿತ್ರವಾಗಿದೆ. ಬ್ರಿಟನ್ ನ ಬಿಯರ್ ಯುತ್ಪಾದನೆ ಕೈಗಾರಿಕೆಗಳಿಗೆ ಕಾರ್ಬನ್ ಡೈ ಆಕ್ಸೈಡ್ ಕೊರತೆ ಕಾಡುತ್ತಿದೆ. ಬಿಯರ್ ಉತ್ಪಾದಿಸಲು ಬೇಕಾದ Co2 ಕೊರತೆಯಿಂದ ಅಗತ್ಯಕ್ಕೆ ತಕ್ಕಂತೆ ಬಿಯರ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಬಿಯರ್ ಉತ್ಪಾದನೆಯನ್ನು ಕಡಿಮೆಗೊಳಿಸಲು ನಿರ್ಧರಿಸಲಾಗಿದ್ದು, ಸರ್ಕಾರದ ಪಡಿತರ ಸೇವೆ ಅಡಿಯಲ್ಲೇ ಬಿಯರ್ ನ್ನು ಸರಬರಾಜು ಮಾಡಲಾಗುತ್ತದೆ ಎಂದು ಹೇಳಲಾಗಿದೆ.

Co2ನ್ನು ಮಾಂಸ ಮತ್ತು ಸೋಡಾ ತಯಾರಿಕೆಯಲ್ಲೂ ಹೆಚ್ಚಿಗೆ ಬಳಸುತ್ತಿರುವುದರಿಂದ ಬಿಯರ್ ತಯಾರಿಖಾ ಘಟಕಗಳಿಗೆ Co2 ನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸರಬರಾಜು ಮಾಡಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿಯರ್ ಉತ್ಪಾದನೆಯನ್ನೇ ಕಡಿತಗೊಳಿಸಿ, ಅದನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
 

click me!