ಸಸ್ಯಹಾರಿ ವಿದ್ಯಾರ್ಥಿಗಳಿಗೆ ಬೀಫ್ ಖಾದ್ಯ

By Suvarna Web DeskFirst Published Jan 29, 2018, 9:53 AM IST
Highlights

ಇಲ್ಲಿನ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಸಸ್ಯಾಹಾರದ ಖಾದ್ಯವೆಂದು, ದನದ ಮಾಂಸ ತಿನ್ನಿಸಿದ ಬಗ್ಗೆ ಕೆಲವು ಸಸ್ಯಾಹಾರಿ ವಿದ್ಯಾರ್ಥಿಗಳ ಗುಂಪು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದೆ.

ಅಲಪ್ಪುಳ: ಇಲ್ಲಿನ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಸಸ್ಯಾಹಾರದ ಖಾದ್ಯವೆಂದು, ದನದ ಮಾಂಸ ತಿನ್ನಿಸಿದ ಬಗ್ಗೆ ಕೆಲವು ಸಸ್ಯಾಹಾರಿ ವಿದ್ಯಾರ್ಥಿಗಳ ಗುಂಪು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದೆ.

ಕೊಚ್ಚಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಎಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್‌ನಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಪುಳಿಂಕುನ್ನುನಲ್ಲಿರುವ ಕಾಲೇಜಿನಲ್ಲಿ ಗುರುವಾರ ನಡೆದಿದ್ದ ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಿದ್ದ ಬಿಹಾರದ ಕೆಲವು ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಿದೆ.

ಸಸ್ಯಾಹಾರಿ ಖಾದ್ಯವೆಂದು ಬೀಫ್ ಕಟ್ಲೇಟ್ ನೀಡಲಾಗಿತ್ತು. ಇದು ಸಸ್ಯಾಹಾರವೇ? ಎಂದು ವಿದ್ಯಾರ್ಥಿಗಳು ಪದೇಪದೇ ಕೇಳಿದಾಗಲೂ ಸಿಬ್ಬಂದಿ, ಸಸ್ಯಾಹಾರಿ ಕಟ್ಲೇಟ್ ಎಂದಿದ್ದರು ಎಂದು ಆಪಾದಿಸಲಾಗಿದೆ.

ಪ್ರಾಂಶುಪಾಲರಿಗೆ ಅರಿವಿದ್ದೇ ಇದು ನಡೆದಿದೆ. ತಮ್ಮ ನಂಬಿಕೆ, ಧರ್ಮಕ್ಕೆ ಸಂಬಂಧಿಸಿದುದರಿಂದ, ಬೀಫ್ ತಿಂದ ಬಳಿಕ ತಮಗೆ ತೀವ್ರ ಖಿನ್ನತೆಯ ಭಾವ ಮೂಡಿತು ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

click me!