’ಮೋದಿ ಅಧಿಕಾರಕ್ಕೆ ಬಂದ್ಮೇಲೆ ಮಾಂಸ ರಫ್ತಿನಲ್ಲಿ ಭಾರತಕ್ಕೆ ವಿಶ್ವದಲ್ಲೇ ಎರಡನೇ ಸ್ಥಾನ’

By Suvarna Web DeskFirst Published Mar 31, 2018, 3:40 PM IST
Highlights

ಬಿಜೆಪಿ ಅಧಿಕಾರಕ್ಕೆ ಬಂದ್ರೆ ಹತ್ಯೆ ನಿಲ್ಲಿಸ್ತೇವೆ ಅಂತಾ ಹೇಳುತ್ತಿದೆ.  ರಾಜ್ಯದಲ್ಲಿ ಅಮಿತ್ ಶಾ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ. ಗೋ ಹತ್ಯೆ ಒಂದೇ ಅಲ್ಲ ಯಾವ ಪ್ರಾಣಿಯ ಹತ್ಯೆ ಆಗಬಾರದು ಎಂದಿದ್ದಾರೆ. 

ಬೆಂಗಳೂರು (ಮಾ. 31):  ಬಿಜೆಪಿ ಅಧಿಕಾರಕ್ಕೆ ಬಂದ್ರೆ ಹತ್ಯೆ ನಿಲ್ಲಿಸ್ತೇವೆ ಅಂತಾ ಹೇಳುತ್ತಿದೆ.  ರಾಜ್ಯದಲ್ಲಿ ಅಮಿತ್ ಶಾ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ. ಗೋ ಹತ್ಯೆ ಒಂದೇ ಅಲ್ಲ ಯಾವ ಪ್ರಾಣಿಯ ಹತ್ಯೆ ಆಗಬಾರದು ಎಂದಿದ್ದಾರೆ. 

ಗೋ ಹತ್ಯೆ ಸೇರಿದಂತೆ ಎಲ್ಲ ಪ್ರಾಣಿಗಳ ಹತ್ಯೆ ನಿಲ್ಲಬೇಕು.  ಅದಕ್ಕೆ ನನ್ನ ಬೆಂಬಲವಿದೆ ಎಂದು  ಬಿಜೆಪಿ ಗೋ ಹತ್ಯೆ ನಿಷೇಧ ಸ್ಟಾಟರ್ಜಿಗೆ  ಗೃಹ ಸಚಿವರು ಟಾಂಗ್ ನೀಡಿದ್ದಾರೆ.  ಗೋ ಮಾಂಸ ವಿದೇಶಕ್ಕೆ ರಫ್ತು ಆಗುತ್ತಿದೆ.  ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಗೋ ಮಾಂಸ ರಫ್ತಿನಲ್ಲಿ 2 ಸ್ಥಾನಕ್ಕೆ ಬಂದಿದೆ.  ಮೊದಲು ಮೂರನೇ ಸ್ಥಾನದಲ್ಲಿ ಇತ್ತು.  ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಯ್ತಾ ಬಂತು.  ಆದರೆ ಹೊರ ದೇಶಕ್ಕೆ ರಫ್ತು ಆಗ್ತಿರುವ ಗೋ ಮಾಂಸವನ್ನ ಯಾಕೆ ನಿಷೇಧ ಮಾಡಿಲ್ಲ?  ಗೋ ಹತ್ಯೆ ನಿಷೇಧ ಮಾಡ್ತೇವೆ ಅಂತಾ ಹೇಳುವ ಬಿಜೆಪಿ ನಾಟಕ ಮಾಡ್ತಿದೆ ಎಂದಿದ್ದಾರೆ. 

ಮೋದಿ ಅಧಿಕಾರಕ್ಕೆ ಬಂದ ಮೇಲೆ ಗೋ ಮಾಂಸ ರಫ್ತಿನಲ್ಲಿ ಭಾರತಕ್ಕೆ ವಿಶ್ವದಲ್ಲೇ ಎರಡನೆ ಸ್ಥಾನ ಸಿಕ್ಕಿದೆ.  2007 ರಲ್ಲಿ 1800 ಮೆಟ್ರಿಕ್  ಟನ್  ರಫ್ತು  26  ಸಾವಿರ ಕೋಟಿ ಆದಾಯ ಬಂದಿದೆ.  ಮೋದಿ ಸರ್ಕಾರ ಕೂಡಲೇ ಗೋ ಮಾಂಸ ರಫ್ತಿಗೆ ಬ್ರೇಕ್ ಹಾಕಲಿ. 14 % ರಷ್ಟು ಗೋ ಮಾಂಸ ರಫ್ತು ಪ್ರತಿವರ್ಷ ಹೆಚ್ಚಿದೆ.  ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲೇ ಗೋ ಮಾಂಸ ಶುದ್ಧೀಕರಣ ಘಟಕಗಳಿವೆ.  ಈ ಎರಡು ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದೆ.  ಗೋ ಮಾಂಸ ರಫ್ತು ಮಾಡುವ ಬಹುತೇಕ ಕಂಪನಿಗಳ ಮಾಲಿಕರು ಬಿಜೆಪಿ ಮುಖಂಡರೇ ಆಗಿದ್ದಾರೆ ಎಂದಿದ್ದಾರೆ.   

ಗೋವಾದಲ್ಲೂ  ಬಿಜೆಪಿ ಸರ್ಕಾರವಿದ್ದು, ಅಲ್ಲಿ ಪ್ರತಿದಿನ 32  ಟನ್ ಗೋ ಮಾಂಸ ಬಳಕೆಯಾಗುತ್ತಿದೆ.  ಈಶಾನ್ಯ ರಾಜ್ಯಗಳಲ್ಲೂ ನಿಷೇಧ ಮಾಡಬೇಕಲ್ಲವಾ ? ಎಂದು ರಾಮಲಿಂಗಾ ರೆಡ್ಡಿ  ಪ್ರಶ್ನಿಸಿದ್ದಾರೆ. 

click me!