
ಬೆಂಗಳೂರು (ಮಾ.31): ಕಾಂಗ್ರೆಸ್ ಕಾರ್ಯಕರ್ತರ ಜೊತೆ ಅಂಬರೀಶ್ ಚರ್ಚೆ ನಡೆಸಿದ್ದಾರೆ. ರಾಜಕೀಯದಲ್ಲಿ ಸೋಲು ಗೆಲುವು ಇದ್ದಿದ್ದೇ ಎಂದಿದ್ದಾರೆ.
ನನಗೆ ಪ್ರಚಾರ ತೆಗೆದುಕೊಂಡು ಅಭ್ಯಾಸ ಇಲ್ಲ. ಮಂಡ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನು ಯಾರಿಗೂ ಅನ್ಯಾಯ ಮಾಡಿದವನಲ್ಲ. ನನ್ನ ಕೆಲಸಗಳನ್ನು ನೋಡಿ ಓಟು ಕೇಳುವ ಹಕ್ಕು ನನಗೆ ಇದೆ. ಏಪ್ರಿಲ್ ಎರಡನೇ ತಾರೀಖು ಸಿಎಂ ಮತ್ತು ಪಕ್ಷದ ಪ್ರಮುಖರ ಜೊತೆ ಸೇರಿ ತೀರ್ಮಾನ ತೆಗೆದುಕೊಳ್ಳೋಣ. ನನಗೆ ಮತ ಹಾಕಿದವರು, ಹಾಕದೇ ಇದ್ದವರು ಎಲ್ಲರೂ ಬಂದಿದ್ದೀರ. ಮತ ಹಾಕದೇ ಇರುವವರ ಬಗ್ಗೆ ಬೇಸರವಿಲ್ಲ ಎಂದಿದ್ದಾರೆ.
ನೈಸ್ ರೋಡ್ ಪಕ್ಕ ಸೋಂಪುರದಲ್ಲಿ ಅಂಬರೀಷ್ ಬೆಂಬಲಿಗರ ಜೊತೆ ಚರ್ಚೆ ನಡೆಸಿದ್ದಾರೆ. ಅಂಬರೀಷ್ ಸ್ಪರ್ಧೆ ಮಾಡಬೇಕು ಚುನಾವಣೆ ಘೋಷಣೆ ಆದ್ರೂ ಶಾಸಕರು ಕ್ಷೇತ್ರದತ್ತ ಬಂದಿಲ್ಲ. ಹೀಗಾಗಿ ಅಂಬರೀಷ್ ನಿಲುವು ಸ್ಪಷ್ಟಪಡಿಸುವಂತೆ ಕಾರ್ಯಕರ್ತರು ಆಗ್ರಹಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.