ರ್ಯಾಲಿ ಫಾರ್ ರಿವರ್ಸ್ ಸಮಾವೇಶ; ಸಂಚಾರ ಮಾರ್ಗ ಬದಲಾವಣೆ

By Suvarna Web DeskFirst Published Sep 9, 2017, 10:54 AM IST
Highlights

ಶ್ರೀ ಸದ್ಗುರು ವಾಸುದೇವ್ ನೇತೃತ್ವದಲ್ಲಿ ಇಂದು ಸಂಜೆ ಅರಮನೆ ಮೈದಾನದಲ್ಲಿ ರ್ಯಾಲಿ ಫಾರ್ ರಿವರ್ಸ್ ಬೃಹತ್ ಸಮಾವೇಶ ಇರುವುದರಿಂದ ಅರಮನೆ ಮೈದಾನ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ವಾಹನಗಳು ಕೆಳಕಂಡ ಮಾರ್ಗಗಳಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು (ಸೆ.09): ಶ್ರೀ ಸದ್ಗುರು ವಾಸುದೇವ್ ನೇತೃತ್ವದಲ್ಲಿ ಇಂದು ಸಂಜೆ ಅರಮನೆ ಮೈದಾನದಲ್ಲಿ ರ್ಯಾಲಿ ಫಾರ್ ರಿವರ್ಸ್ ಬೃಹತ್ ಸಮಾವೇಶ ಇರುವುದರಿಂದ ಅರಮನೆ ಮೈದಾನ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ವಾಹನಗಳು ಕೆಳಕಂಡ ಮಾರ್ಗಗಳಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.

ಹೀಗೆ ಬನ್ನಿ:

* ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಸಮನಹಳ್ಳಿ, ಡಾ. ರಾಜ್ ಕುಮಾರ್ ಸಮಾಧಿ-ತುಮಕೂರು ರಸ್ತೆ ಬಲ ತಿರುವು ಪಡೆದು ಗೋರನಗುಂಟೆ ಪಾಳ್ಯ ಎಡತಿರುವು ಪಡೆದು, ಬಿಇಎಲ್. ಹೆಬ್ಬಾಳ ಮೇಲ್ಸೇತುವೆ, ಮೇಖ್ರಿ ಸರ್ಕಲ್ ಸರ್ವೀಸ್ ರಸ್ತೆ, ಜಯಮಹಲ್ ರಸ್ತೆಯ ಮಾವಿನಮಂಡಿ ಗೇಟ್ ಂಉಲಕ ಅರಮನೆ ಮೈದಾನ ತಲುಪಬಹುದು.

* ಕನಕಪುರ ರಸ್ತೆಯಿಂದ ಬರುವವರು ಕನಕಪುರ ರಸ್ತೆ, ಬನಶಂಕರಿ ದೇವಸ್ಥಾನ ಬಸ್ ನಿಲ್ದಾಣದ ಬಲ ತಿರುವು ಪಡೆದು ರಾಜಲಕ್ಷ್ಮೀ ಜಂಕ್ಷನ್ ಮೂಲಕ ಜಯನಗರ 4 ನೇ ಮುಖ್ಯರಸ್ತೆ ಸೌತ್ ಎಂಡ್ ಸರ್ಕಲ್, ಆರ್,ವಿ ಜಂಕ್ಷನ್ ಲಾಲ್ ಬಾಗ್ ಪಶ್ಚಿಮ ದ್ವಾರ, ಮಿನರ್ವ ಸರ್ಕಲ್, ಜೆ.ಸಿ ರಸ್ತೆ ಬಳಸಿ ಟೌನ್'ಹಾಲ್ ಪೊಲೀಸ್ ಕಾರ್ನರ್'ನಲ್ಲಿ ಎಡ ತಿರುವು ಪಡೆದು ಕೆಜಿ ರಸ್ತೆ ಮೈಸೂರು ಬ್ಯಾಂಕ್ ಬಳಿ ಬಲ ತಿರುವು ಪಡೆಯಬೇಕು. ಪ್ಯಾಲೇಸ್ ಸರ್ಕಲ್, ಬಸವೇಶ್ವರ ಸರ್ಕಲ್, ಹಳೇ ಹೈಗ್ರೌಂಡ್ ರಸ್ತೆ, ಚಂದ್ರಿಕಾ ಹೋಟೆಲ್, ಜಂಕ್ಷನ್ ಕಂಟೋನ್ಮೆಂಟ್ ಅಂಡರ್ ಪಾಸ್ ಮೂಲಕ ಜಯಮಹಲ್ ರಸ್ತೆಯ ಮಾವಿನಕಾಯಿ ಮಂಡಿ ಗೇಟ್ ಮೂಲಕ ಅರಮನೆ ಮೈದಾನದಲ್ಲಿ ವಾಹನ ನಿಲುಗಡೆ ಮಾಡಬಹುದು.

* ಬನ್ನೇರುಘಟ್ಟ ರಸ್ತೆ ಮೂಲಕ ಬರುವವರು ಡೈರಿ ಸರ್ಕಲ್ ಎಡ ತಿರುವು ಪಡೆದು, ಡಾ ಮರೀಗೌಡ ರಸ್ತೆ, ಕೆಎಚ್ ವೃತ್ತ, ಲಾಲ್ ಬಾಗ್ ಮುಖ್ಯದ್ವಾರ, ಮಿನರ್ವ ಸರ್ಕಲ್ ಬಲತಿರುವು ಪಡೆದು, ಕೆ ಜಿ ರಸ್ತೆ ಮೈಸೂರು ಬ್ಯಾಂಕ್ ವೃತ್ತ ಬಲತಿರುವು ಪಡೆಯಬೇಕು. ಪ್ಯಾಲೇಸ್ ರಸ್ತೆ, ಬಸವೇಶ್ವರ ರಸ್ತೆ, ಹಳೇ ಹೈಗ್ರೌಂಡ್ ಜಂಕ್ಷನ್, ಅವಿನಾಶ್ ಪೆಟ್ರೋಲ್ ಬಂಕ್ ದಾಟಿ ಚಂದ್ರಿಕಾ ಹೋಟೆಲ್, ಉದಯ ಟಿವಿ ಜಂಕ್ಷನ್, ಕಂಟೋನ್ಮೆಂಟ್ ಅಂಡರ್'ಪಾಸ್ ,   ಜಯಮಹಲ್ ರಸ್ತೆಯ ಮಾವಿನಕಾಯಿ ಮಂಡಿ ಗೇಟ್ ಮೂಲಕ ಅರಮನೆ ಮೈದಾನದಲ್ಲಿ ವಾಹನ ನಿಲುಗಡೆ ಮಾಡಬಹುದು.

* ಹೊಸೂರು ಕಡೆಯಿಂದ ಬರುವವರು ಹೊಸೂರು ರಸ್ತೆ-ಮಡಿವಾಳ ಚೆಕ್'ಪೋಸ್ಟ್'ನಲ್ಲಿ ಎಡ ತಿರುವು ಪಡೆದು ಡೈರಿ ಸರ್ಕಲ್, ಕೆ.ಎಚ್ ಸರ್ಕಲ್, ಲಾಲ್ ಬಾಗ್ ಮುಖ್ಯದ್ವಾರ, ಮಿನರ್ವ ವೃತ್ತದಲ್ಲಿ ಬಲ ತಿರುವು ಪಡೆಯಬೇಕು. ಜೆ. ಸಿ ರಸ್ತೆ ಬಳಸಿ ಟೌನ್'ಹಾಲ್ ಪೊಲೀಸ್ ಕಾರ್ನರ್'ನಲ್ಲಿ ಎಡ ತಿರುವು ಪಡೆದು ಕೆಜಿ ರಸ್ತೆ ಮೈಸೂರು ಬ್ಯಾಂಕ್ ಬಳಿ ಬಲ ತಿರುವು ಪಡೆಯಬೇಕು.  ಪ್ಯಾಲೇಸ್ ಸರ್ಕಲ್, ಬಸವೇಶ್ವರ ಸರ್ಕಲ್, ಹಳೇ ಹೈಗ್ರೌಂಡ್ ರಸ್ತೆ, ಚಂದ್ರಿಕಾ ಹೋಟೆಲ್, ಜಂಕ್ಷನ್ ಕಂಟೋನ್ಮೆಂಟ್ ಅಂಡರ್ ಪಾಸ್ ಮೂಲಕ ಜಯಮಹಲ್ ರಸ್ತೆಯ ಮಾವಿನಕಾಯಿ ಮಂಡಿ ಗೇಟ್ ಮೂಲಕ ಅರಮನೆ ಮೈದಾನದಲ್ಲಿ ವಾಹನ ನಿಲುಗಡೆ ಮಾಡಬಹುದು.

ಎಲ್ಲೆಲ್ಲಿ ನಿಷೇಧ?

ಅರಮನೆ ಮೈದಾನಕ್ಕೆ ಹೊಂದಿಕೊಂಡಂತೆ ಇರುವ ರಮಣ ಮಹರ್ಷಿ ರಸ್ತೆ, ಸರ್ ಸಿ ವಿ ರಾಮನ್ ರಸ್ತೆ, ಬಳ್ಳಾರಿ ರಸ್ತೆ, ಜಯಮಹಲ್ ರಸ್ತೆ, ಎಂ ವಿ ಜಯರಾಮ್ ರಸ್ತೆ, ಪ್ಯಾಲೇಸ್ ರಸ್ತೆಗಳಲ್ಲಿ ಎಲ್ಲಾ ಬಗೆಯ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

 

click me!