ಶಮಿ ವಿರುದ್ಧ ತನಿಖೆ ನಡೆಸುವಂತೆ ಬಿಸಿಸಿಐ ಆದೇಶ

By Suvarna Web DeskFirst Published Mar 15, 2018, 11:54 AM IST
Highlights

ಭಾರತ ಕ್ರಿಕೆಟ್ ತಂಡದ  ಬೌಲರ್​ ವೇಗಿ ಮಹಮ್ಮದ್ ಶಮಿ ವಿರುದ್ಧ ತನಿಖೆ ನಡೆಸುವಂತೆ ಬಿಸಿಸಿಐ ಆದೇಶ ನೀಡಿದೆ. ಪತ್ನಿ ಮಾಡಿರುವ ಆರೋಪಗಳ ಬಗ್ಗೆ  ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಸೂಚಿಸಿದ ಬಿಸಿಸಿಐ ಸೂಚನೆ ನೀಡಿದೆ. 

ಬೆಂಗಳೂರು (ಮಾ. 15): ಭಾರತ ಕ್ರಿಕೆಟ್ ತಂಡದ  ಬೌಲರ್​ ವೇಗಿ ಮಹಮ್ಮದ್ ಶಮಿ ವಿರುದ್ಧ ತನಿಖೆ ನಡೆಸುವಂತೆ ಬಿಸಿಸಿಐ ಆದೇಶ ನೀಡಿದೆ. ಪತ್ನಿ ಮಾಡಿರುವ ಆರೋಪಗಳ ಬಗ್ಗೆ  ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಸೂಚಿಸಿದ ಬಿಸಿಸಿಐ ಸೂಚನೆ ನೀಡಿದೆ. 

ಎಸಿಯು ಮುಖ್ಯಸ್ಥ ನೀರಜ್‌ ಕುಮಾರ್‌ ಅವರಿಗೆ ಈ ಕುರಿತು ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಅಧ್ಯಕ್ಷ ವಿನೋದ್ ರಾಯ್‌ ಆದೇಶ ನೀಡಿದ್ದಾರೆ.  ಶಮಿ ಪತ್ನಿ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಅದರಲ್ಲಿ ಭ್ರಷ್ಟಾಚಾರದ ಕುರಿತು ಕೂಡ ಉಲ್ಲೇಖಿಸಿದ್ದಾರೆ. ಆರೋಪ ಕೇಳಿ ಬಂದ ಕಾರಣ ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪದ್ಧತಿಯಿಂದ ಶಮಿ ಅವರನ್ನು ಕೈಬಿಟ್ಟಿತ್ತು. ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ತನಿಖೆಗೆ ಆದೇಶಿಸಿರುವ ರಾಯ್‌ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ನೀರಜ್‌ ಕುಮಾರ್‌ ಅವರಿಗೆ ಸೂಚಿಸಿದ್ದಾರೆ.
 

click me!