ದ್ವಿತೀಯ ಪಿಯುಸಿ ಮಕ್ಕಳಿಗೆ ಪರೀಕ್ಷೆ ಹತ್ತಿರ ಬರುತ್ತಿದ್ದರೂ ಪುಸ್ತಕ ನೀಡದ ಬಿಬಿಎಂಪಿ, ಆಯುಕ್ತರೇ ಇನ್ನಾದರೂ ಎಚ್ಚೆತ್ತುಕೊಳ್ಳುವಿರಾ?

Published : Dec 23, 2016, 05:27 AM ISTUpdated : Apr 11, 2018, 12:43 PM IST
ದ್ವಿತೀಯ ಪಿಯುಸಿ ಮಕ್ಕಳಿಗೆ ಪರೀಕ್ಷೆ ಹತ್ತಿರ ಬರುತ್ತಿದ್ದರೂ ಪುಸ್ತಕ ನೀಡದ ಬಿಬಿಎಂಪಿ, ಆಯುಕ್ತರೇ ಇನ್ನಾದರೂ ಎಚ್ಚೆತ್ತುಕೊಳ್ಳುವಿರಾ?

ಸಾರಾಂಶ

ಬಿಬಿಎಂಪಿಯಲ್ಲಿ ಗುತ್ತಿಗೆ ಹಣ ವರ್ಷಗಟ್ಟಲೆ ಸಿಕ್ಕಲ್ಲ. ಕಾಮಗಾರಿ ನಿಗದಿತ ಸಮಯಕ್ಕೆ ಮುಗಿಯಲ್ಲ. ಪಾಲಿಕೆಯ ಶಾಲೆಗಳಲ್ಲಿ ಸಮವಸ್ತ್ರ ಕೊಟ್ಟಿಲ್ಲ ಎಂಬ ಆರೋಪವಿತ್ತು. ಈ ಪಟ್ಟಿಗೆ ಸದ್ಯ ಹೊಸ ಸೇರ್ಪಡೆಯಾಗಿದೆ ಅದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಕೊಟ್ಟಿಲ್ಲ. ಶಾಲಾ ಸಮವಸ್ತ್ರ ಒದ್ದಾಟದ ಕಥೆಯನ್ನ ಸುವರ್ಣನ್ಯೂಸ್ ಬಿತ್ತರಿಸಿತ್ತು.

ಬೆಂಗಳೂರು (ಡಿ. 23): ಬಿಬಿಎಂಪಿಯಲ್ಲಿ ಗುತ್ತಿಗೆ ಹಣ ವರ್ಷಗಟ್ಟಲೆ ಸಿಕ್ಕಲ್ಲ. ಕಾಮಗಾರಿ ನಿಗದಿತ ಸಮಯಕ್ಕೆ ಮುಗಿಯಲ್ಲ. ಪಾಲಿಕೆಯ ಶಾಲೆಗಳಲ್ಲಿ ಸಮವಸ್ತ್ರ ಕೊಟ್ಟಿಲ್ಲ ಎಂಬ ಆರೋಪವಿತ್ತು. ಈ ಪಟ್ಟಿಗೆ ಸದ್ಯ ಹೊಸ ಸೇರ್ಪಡೆಯಾಗಿದೆ ಅದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಕೊಟ್ಟಿಲ್ಲ. ಶಾಲಾ ಸಮವಸ್ತ್ರ ಒದ್ದಾಟದ ಕಥೆಯನ್ನ ಸುವರ್ಣನ್ಯೂಸ್ ಬಿತ್ತರಿಸಿತ್ತು.

ಬಿಬಿಎಂಪಿ ಕಾಲೇಜು 2016-17 ರ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ 6 ತಿಂಗಳು ಕಳೆದರೂ ದ್ವಿತೀಯ ಪಿಯುಸಿ ಪಠ್ಯಪುಸ್ತಕ ಮಾತ್ರ ಸಿಕ್ಕಿಲ್ಲ. ಒಂದಲ್ಲ ಎರಡಲ್ಲ ಬರೋಬ್ಬರಿ ಕಾಲೇಜು ಆರಂಭವಾಗಿ 210 ದಿನ ಕಳೆದಿದ್ದರೂ  ಪಠ್ಯಪುಸ್ತಕ ಮಾತ್ರ ಸಿಕ್ಕಿಲ್ಲ.

ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಥಮ ಹಾಗೂ ದ್ವೀತಿಯ ಪಿಯುಸಿಯಲ್ಲಿ 13 ಕಾಲೇಜುಗಳಿದ್ದು , ಒಟ್ಟು 4830 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ದಿನ ಕಳೆಯುತ್ತಿದ್ದರೂ ಪಠ್ಯಪುಸ್ತಕ ಮಾತ್ರ ಸಿಗುತ್ತಿಲ್ಲ. ಪಾಲಿಕೆ ಕಾಲೇಜುಗಳಲ್ಲಿ ಬಹುತೇಕ ಬಡ ಹಾಗೂ ಮಧ್ಯಮ ವರ್ಗ ವಿದ್ಯಾರ್ಥಿಗಳೇ ಓದುತ್ತಿದ್ದಾರೆ. ಹೀಗಿರುವಾಗ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಬೋರ್ಡ್​ ಎಕ್ಸಾಂ ಬೇರೆ ಇದೆ. ಪಾಲಿಕೆಯ ಕಾಮರ್ಸ್​ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಇಲ್ದೇ ಕಳೆದ ಸಾಲಿನ ಪುಸ್ತಕವನ್ನೇ ಬಳಕೆ ಮಾಡುತ್ತಿದ್ದಾರೆ. 4 ಜನಕ್ಕೆ ಒಂದು ಪುಸ್ತಕ ಎಂದು ಅಡ್ಜೆಸ್ಟ್ ಮಾಡಿಕೊಳ್ಳುತ್ತಿದ್ದಾರೆ.

ಸದ್ಯ ಟೆಂಡರ್ ಆಗಿಲ್ಲ ಎಂದು ಕಾರಣ ನೀಡಿ ಬೋರ್ಡ್ ಎಕ್ಸಾಂ ಇರೊ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಕೊಡದೇ ಇರೊದು ಎಷ್ಟು ಸರಿ ನೀವೇ ಹೇಳಿ ಪಾಲಿಕೆ ಆದಿಕಾರಿಗಳೇ ಜನಪ್ರತಿನಿಧಿಗಳೇ ? ನಿಮ್ಮ ಮಕ್ಕಳಿಗೆ ಪಠ್ಯಪುಸ್ತಕ ಸಿಕ್ಕಿಲ್ಲ ಎಂದ್ರೆ ಹೀಗೆ ಟೆಂಡರ್ ಕಾರಣ ನೀಡಿ ಸುಮ್ಮನೆ ಇರುತ್ತಿದ್ರಾ ಹೇಳಿ? ಸಾಮಾಜಿಕ ಬದ್ಧತೆಯೊಂದಿಗೆ ಸುವರ್ಣನ್ಯೂಸ್ ವಿದ್ಯಾರ್ಥಿಗಳ ಅಳಲನ್ನ ಪ್ರಸಾರ ಮಾಡಿದೆ.ಈಗಲಾದರೂ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಕೊಡುತ್ತಾರಾ?

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ