
ಬೆಂಗಳೂರು (ಮಾ. 01): ಬಿಬಿಎಂಪಿ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿಯೇ ಇರುತ್ತದೆ. ಇದೀಗ ಲಗ್ಗೆರೆ ವಾರ್ಡ್’ನಲ್ಲಿ ಅವ್ಯವಹಾರ ಬಯಲಿಗೆ ಬಂದಿದೆ. ಸದಸ್ಯರಿಗೆ ಗೊತ್ತಿಲ್ಲದಂತೆ ಅಧಿಕಾರಿಗಳು ಲಕ್ಷ ಲಕ್ಷ ವಸೂಲಿಗಿಳಿದಿದ್ದಾರೆ. ಆಶ್ರಯ ಮನೆಗಳ ಬಿಲ್’ಗೆ ಮಹಿಳೆಯರಿಗೆ ಅಶ್ಲೀಲ ಪದ ಬಳಕೆ ಮಾಡಿ ಮಾತಾಡುತ್ತಿದ್ದು, ಅಧಿಕಾರಿಗಳಿಂದ ವಾರ್ಡ್’ನಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.
ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ಸಿಡಿ ಮತ್ತು ಅಶ್ಲೀಲವಾಗಿ ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಿದರು. ಲಗ್ಗೆರೆ ವಾರ್ಡ್’ನಲ್ಲಿ ಅಧಿಕಾರಿಗಳ ದರ್ಪ ಮಿತಿ ಮೀರಿದೆ. ಇಲ್ಲಿ ಪಾಲಿಕೆ ಸದಸ್ಯರಿಗೆ ಬೆಲೆಯೇ ಇಲ್ಲದಂತಾಗಿದೆ. ಇದಕ್ಕೆಲ್ಲ ಪ್ರಭಾವಿ ಶಾಸಕರ ಕುಮ್ಮಕ್ಕಿದೆ. ಮನೆಗಳ ಬಿಲ್ ಮಾಡುವುದಕ್ಕೆ ಕೇಸ್ ವರ್ಕರ್ ಚಂದ್ರು ಎಂಬುವರು ಮಹಿಳೆಯರಿಗೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಇನ್ನು ಒಎಫ್’ಸಿ ಕೇಬಲ್ ಹಾಕಲು ಎಇಇ ಬಸವರಾಜ್ ಮತ್ತು ಎಇ ಅಶ್ವತ್ಥ್ ಎಂಬುವರು ಕಾರ್ಪೋರೇಟರ್ ಹೆಸರಿನಲ್ಲಿಯೇ ಲಕ್ಷಾನುಗಟ್ಟಲೇ ವಸೂಲಿಗೆ ಇಳಿದ್ದಾರೆ. ಈ ಮೂಲಕ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಜೆಸಿ ಮತ್ತು ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಮಹಿಳಾ ಆಯೋಗ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.