ವಿಧಾನ ಪರಿಷತ್ ಚುನಾವಣೆ; ಬಿಬಿಎಂಪಿ ಸಕಲ ಸಿದ್ಧತೆ

By Suvarna Web DeskFirst Published Dec 20, 2017, 5:11 PM IST
Highlights

ಮುಂಬರುವ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ರಾಜಧಾನಿಯಲ್ಲಿ ಸಿದ್ಧತೆಗಳು ಸದ್ದಿಲ್ಲದೆ ಜರುಗುತ್ತಿದೆ.

ಬೆಂಗಳೂರು (ಡಿ.20): ಮುಂಬರುವ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ರಾಜಧಾನಿಯಲ್ಲಿ ಸಿದ್ಧತೆಗಳು ಸದ್ದಿಲ್ಲದೆ ಜರುಗುತ್ತಿದೆ.

ಈ ಬಗ್ಗೆ ಸುದ್ಧಿಗೋಷ್ಠಿ ನಡೆಸಿದ ಬಿಬಿಎಂಪಿ  ಆಯುಕ್ತ ಮಂಜುನಾಥ್ ಪ್ರಸಾದ್ ಎಲ್ಲಾ ವಾರ್ಡ್’ಗಳಲ್ಲಿ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬೂತ್ ಮಟ್ಟದಲ್ಲಿ 5518 ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಬೆಂಗಳೂರಿನ 28 ವಿಧಾನ ಸಭಾ ಕ್ಷೇತ್ರಗಳಲ್ಲಿ ಒಟ್ಟು 85,92,815 ಮತದಾರರಿದ್ದಾರೆ. ಒಟ್ಟು 8284 ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಚುನಾವಣೆಯಲ್ಲಿ ಗೈರಾದ ಅಧಿಕಾರಿಗಳು, ಒಂದು ಪಕ್ಷದ ಪರ ಕೆಲಸ ಮಾಡುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತೆ ಅಂತ ಮಂಜುನಾಥ್ ಪ್ರಸಾದ್ ತಿಳಿಸಿದರು.

ಇನ್ನೂ ಮತದಾರರ ಪಟ್ಟಿಯಲ್ಲಿ ಇನ್ನೂ ನೋಂದಣಿ ಆಗದವರು 29 ನೇ ತಾರೀಖನ ನಂತರವೂ ಅರ್ಜಿ ಕೊಡಬಹುದಾಗಿದ್ದು, ಫೆಬ್ರುವರಿ 15 ರಂದು ಕೊನೆಯ ಲಿಸ್ಟ್ ಬಿಡುಗಡೆ ಮಾಡಲಾಗುತ್ತೆ. ಎಲೆಕ್ಷನ್ ನಾಮಿನೇಷನ್ ಫೈಲ್ ಮಾಡುವವರೆಗೂ ಹೆಸರು ಸೇರಿಸಿಕೊಳ್ಳಲು ಅವಕಾಶವಿದೆ. ಆದರೆ ಡಿಸೆಂಬರ್ 29 ರೊಳಗೆ ಕೊಟ್ಟವರ ಹೆಸರು ಮದರ್ ರೋಲ್’ನಲ್ಲಿ ಬರುತ್ತದೆ ಎಂದು ಕಮಿಷನರ್ ಮಂಜುನಾಥ್ ಪ್ರಸಾದ್ ತಿಳಿಸಿದರು.

click me!