ಅಪಾರ್ಟ್'ಮೆಂಟ್ ನಿವಾಸಿಗಳೇ ಎಚ್ಚರ!: ಬಿಬಿಎಂಪಿಯಿಂದ ಬೀಳಲಿದೆ ಭಾರೀ ದಂಡ!

By Suvarna Web DeskFirst Published Oct 10, 2017, 9:46 AM IST
Highlights

ತ್ಯಾಜ್ಯ ನೀರು ಸಂಸ್ಕರಣಾ ಘಟಕ ಅಳವಡಿಸದ ಅಪಾರ್ಟ್'ಮೆಂಟ್'ಗಳಿಗೆ ಕಾದಿದೆ ಅಪಾಯ. ಜನವರಿಯಿಂದಲೇ ಬೀಳಲಿದೆ ಹೆಚ್ಚುವರಿ ದಂಡ. ನೀವು ಕೂಡ ಅಪಾರ್ಟ್'ಮೆಂಟ್'ನಲ್ಲಿ ವಾಸವಿದ್ದೀರಾ? ಇನ್ಮುಂದೆ ನಿಮಗೂ ಬೀಳಲಿದೆ ಹೆಚ್ಚುವರಿ ದಂಡದ ಬಿಸಿ. ಈ ಕುರಿತ ವಿವರ ಇಲ್ಲಿದೆ ನೋಡಿ.

ಬೆಂಗಳೂರು(ಅ.10): ಜಲ ಮಂಡಳಿ 2016 ರಲ್ಲಿ  ಸಿಲಿಕಾನ್ ಸಿಟಿಯಲ್ಲಿ 50 ಕ್ಕೂ ಹೆಚ್ಚು ಪ್ಲಾಟ್ ಹೊಂದಿರುವ 919 ಅಪಾರ್ಟ್'ಮೆಂಟ್'ಗಳಿವೆಂದು ಗುರ್ತಿಸಿತ್ತು. ಈ ಎಲ್ಲ ಅಪಾರ್ಟ್'ಮೆಂಟ್ ಗಳು  2017 ಜನವರಿ ಒಳಗೆ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಅಳವಡಿಸುವಂತೆ ಮಂಡಳಿ ಆದೇಶಿಸಿತ್ತು.   ಡಿಸೆಂಬರ್ ವರೆಗೆ ಹೆಚ್ಚುವರಿ ಕಾಲಾವಕಾಶವನ್ನೂ ನೀಡಿತ್ತು. ಆದರೆ ಇದುವರೆಗೆ ಕೇವಲ 7 ಅಪಾರ್ಟ್ ಮೆಂಟ್  ಗಳು ಮಾತ್ರ ಎಸ್ ಟಿಪಿ ಘಟಕ ಅಳವಡಿಸಿವೆ. ಹೀಗಾಗಿ ಎಸ್ ಟಿಪಿ ಘಟಕ ಅಳವಡಿಸದ 912 ಅಪಾರ್ಟ್ ಮೆಂಟ್ ಗಳಿಗೆ ಜಲ ಮಂಡಳಿ ನೋಟಿಸ್ ನೀಡಿದ್ದು, ಡಿಸೆಂಬರ್ 31 ವರೆಗೆ ಡೆಡ್ ಲೈನ್ ನೀಡಿದೆ.

ಈಗಾಗಲೇ ನಿರ್ಮಾಣಗೊಂಡಿರುವ ಅಪಾರ್ಟ್ ಮೆಂಟ್ ಮಾಲೀಕರು ಎಸ್ ಟಿಪಿ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಐದಾರು ವರ್ಷದ ಹಿಂದೆ ಅಪಾರ್ಟ್ ಮೆಂಟ್ ಕಟ್ಟವಾಗ ಸುಮ್ಮನಿದ್ದ ಜಲಮಂಡಳಿ, ಈಗ ಇದ್ದಕ್ಕಿದ್ದಂತೆ  ಎಸ್ ಟಿಪಿ ಅಳವಡಿಸಿಕೊಳ್ಳಿ ಎಂದ್ರೆ ಕಷ್ಟವಾಗುತ್ತದೆ ಅನ್ನೋದು  ಅಪಾರ್ಟ್​ ಮೆಂಟ್​ ನಿವಾಸಿಗಳ ವಾದ.

ಒಟ್ನಲ್ಲಿ ಜಲ ಮಂಡಳಿ ಎಸ್ ಟಿಪಿ ಅಳವಡಿಸದ ಅಪಾರ್ಟ್ ಮೆಂಟ್ ಗಳಿಗೆ ನೋಟಿಸ್ ಜತೆ ದಂಡ ವಿಧಿಸಲು ಮುಂದಾಗಿದೆ. ಆದ್ರೆ, ಮಂಡಳಿ ಆದೇಶಕ್ಕೆ  ಅಪಾರ್ಟ್ ಮೆಂಟ್ ಮಾಲೀಕರು ಎಚ್ಚೆತ್ತುಕೊಳ್ತಾರಾ ಅನ್ನೋದನ್ನು   ಕಾದು ನೋಡಬೇಕಿದೆ.

click me!