ಪಾಲಿಕೆ ಸದಸ್ಯೆಗೆ ಪತಿಯಿಂದ ಕಿರುಕುಳ: ಠಾಣೆಗೆ ದೂರು

Published : Oct 23, 2017, 02:41 PM ISTUpdated : Apr 11, 2018, 01:08 PM IST
ಪಾಲಿಕೆ ಸದಸ್ಯೆಗೆ ಪತಿಯಿಂದ ಕಿರುಕುಳ: ಠಾಣೆಗೆ ದೂರು

ಸಾರಾಂಶ

ಥಣಿಸಂದ್ರ ವಾರ್ಡ್ ಸದಸ್ಯೆ ಮಮತಾ ಅಳಲು ಪತಿಗೆ ಕರೆದು ಬುದ್ಧಿ ಹೇಳುವಂತೆ ಮನವಿ

ಬೆಂಗಳೂರು: ಪಾಲಿಕೆ ಸದಸ್ಯೆಗೆ ಪತಿಯಿಂದ ಕಿರುಕುಳ: ಠಾಣೆಗೆ ದೂರು ಬೆಂಗಳೂರು: ಕಿರುಕುಳ ನೀಡುತ್ತಾರೆ ಎಂದು ಆರೋಪಿಸಿ ಬಿಬಿಎಂಪಿ ಸದಸ್ಯೆಯೊಬ್ಬರು ತಮ್ಮ ಪತಿ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ಪತಿ ವೆಂಕಟೇಶ್ ಕುಡಿದು ನಿತ್ಯ ಕಿರುಕುಳ ನೀಡುತ್ತಾರೆ. ಪತಿಯನ್ನು ಠಾಣೆಗೆ ಕರೆದು ಬುದ್ಧಿ ಹೇಳುವಂತೆ ಥಣಿಸಂದ್ರದ ಬಿಬಿಎಂಪಿ ಸದಸ್ಯೆ ಕೆ. ಎಂ.ಮಮತಾ ಅವರು ಪತಿ ವೆಂಕಟೇಶ್ ವಿರುದ್ಧ ದೂರು ನೀಡಿದ್ದಾರೆ.

ಪತಿ ವಿರುದ್ಧ ಆರೋಪಿಸಿ ಲಿಖಿತ ದೂರು ನೀಡಿರುವ ಪಾಲಿಕೆ ಸದಸ್ಯೆ, ಎಫ್‌ಐಆರ್ ಮಾಡುವ ಬದಲಿಗೆ ಕರೆದು ಬುದ್ಧಿ ಹೇಳುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹೀಗಾಗಿ ಎನ್‌ಸಿಆರ್ (ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲಿಸಿ ಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಕೆ.ಎಂ.ಮಮತಾ ಅವರು ಥಣಿಸಂದ್ರ ವಾರ್ಡ್’ನ ಪಾಲಿಕೆ ಸದಸ್ಯರಾಗಿದ್ದು, ಪತಿ ಕಾಂಗ್ರೆಸ್ ಮುಖಂಡರಾಗಿದ್ದಾರೆ. ಮಮತಾ ಮತ್ತು ವೆಂಕಟೇಶ್ ಅವರಿಗೆ 14 ವರ್ಷಗಳ ಹಿಂದೆ ವಿವಾಹವಾಗಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಕುಟುಂಬ ಕೊತ್ತನೂರು ಠಾಣಾ ವ್ಯಾಪ್ತಿಯ ಹೆಗ್ಗಡೆ ನಗರದಲ್ಲಿ ವಾಸವಿದೆ. ‘ಪತಿ ವೆಂಕಟೇಶ್ ನಿತ್ಯ ಕುಡಿದು ಬಂದು ಜಗಳ ತೆಗೆಯುತ್ತಾರೆ.

ಅ.20ರಂದು ಕುಡಿದು ಬಂದು ರಾತ್ರಿ ವೇಳೆ ಮಕ್ಕಳ ಮುಂದೆ ನನ್ನನ್ನು ಥಳಿಸಿದ್ದಾರೆ. ಅವರನ್ನು ಠಾಣೆಗೆ ಕರೆದು ಬುದ್ಧಿವಾದ ಹೇಳಿ ನನಗೆ ರಕ್ಷಣೆ ನೀಡಿ’ ಎಂದು ಭಾನುವಾರ ಬೆಳಗ್ಗೆ ಲಿಖಿತ ರೂಪದಲ್ಲಿ ಮನವಿ ಮಾಡಿದ್ದಾರೆ. ಅದರಂತೆ ಎನ್‌ಸಿಆರ್ ಮಾಡಿಕೊಳ್ಳಲಾಗಿದೆ.

ವೆಂಕಟೇಶ್ ಅವರು ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದು, ಅವರು ನಗರಕ್ಕೆ ಬಂದ ಬಳಿಕ ಠಾಣೆಗೆ ಕರೆಸಿ ಎಚ್ಚರಿಕೆ ನೀಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ