
ಬೆಂಗಳೂರು[ಜು.19]: ಜರ್ಮನಿಯ ಬವೇರಿಯಾ ತಂಡದಿಂದ ಇದೇ ನವೆಂಬರ್ ತಿಂಗಳಲ್ಲಿ ಬೆಳಗಾವಿ ಭಾಗದ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ.
ವಿಧಾನಸೌಧದಲ್ಲಿ ಗೃಹ ಸಚಿವ ಜಿ.ಪರಮೆಶ್ವರ್ ಅವರನ್ನು ಭೇಟಿಯಾದ ಬವೇರಿಯಾ ಪ್ರತಿನಿಧಿ, ರಾಜ್ಯ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುವ ಕುರಿತು ಚರ್ಚೆ ನಡೆಸಿದರು. ಈ ಹಿಂದೆ ಮೈಸೂರಿನಲ್ಲಿ ತರಬೇತಿ ನೀಡಿದ್ದೆವು. ಅದೇ ಮಾದರಿಯಲ್ಲಿ ಈಗ ಬೆಳಗಾವಿನಲ್ಲಿ ತರಬೇತಿ ನೀಡಲಾಗುವುದು ಎಂದು ಪರಮೇಶ್ವರ್ ಗೆ ಬವೇರಿಯಾ ಪ್ರತಿನಿಧಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುವುದು ಸ್ವಾಗತಾರ್ಹ. ಜೊತೆಗೆ, ಮಹಿಳಾ ಸುರಕ್ಷತೆಗೂ ಸಹ ನಿಮ್ಮ ತಂಡ ಕೊಡುಗೆ ನೀಡಬೇಕು. ಪೊಲೀಸ್ ಠಾಣೆ ಹೆಚ್ವಿಸುವುದು, ಪೊಲೀಸ್ ಫೋರ್ಸ್‌ನಲ್ಲಿ ಶೇ. 20 ರಷ್ಟು ಪಡೆ ಮಹಿಳಾ ಪೊಲೀಸ್ ಇರುವಂಥೆ ತಯಾರು ಮಾಡಬೇಕಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಿದರೆ ಒಳಿತು ಎಂದು ಸಲಹೆ ನೀಡಿದರು.
ಆ್ಯಪ್ ಆಧಾರಿತ ಟ್ಯಾಕ್ಸಿ ಭದ್ರತಾ ಕುರಿತ ಸಭೆ
ಡಿಸಿಎಂ ಪರಮೇಶ್ವರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಭದ್ರತಾ ಕುರಿತ ಸಭೆ ನಡೆಸಲಾಯಿತು.
ಸಭೆಯಲ್ಲಿ ಡಿಜಿಪಿ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ಬೆಂಗಳೂರು ನಗರ ಸಂಚಾರ ಪೊಲೀಸ್ ಆಯುಕ್ತರು ಭಾಗಿಯಾಗಿದ್ದರು. ಕ್ಯಾಬ್‌ಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಸಾಕಷ್ಟು ಕಾನೂನು ಹಾಗೂ ಕಾರ್ಯಕ್ರಮಗಳಿದ್ದರೂ ಇದು ಸೂಕ್ತ ರೀತಿಯಲ್ಲಿ ತಲುಪುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಮಹಿಳಾ ಸುರಕ್ಷತೆಗೆ ಇರುವ ಕಾನೂನು, ಕಾರ್ಯಕ್ರಮ, ಸಹಾಯವಾಣಿ ಎಲ್ಲವನ್ನೂ ಜಾಹಿರಾತು ಮೂಲಕ ತಲುಪುವ ರೀತಿ ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ಮಹಿಳೆ ಮೇಲೆ ದೌರ್ಜನ್ಯ ಸಂಭವಿಸಬಾರದು. ರಾತ್ರಿ ವೇಳೆ ತೆರಳುವ ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆ ಅಗತ್ಯವಿದೆ. ಇದಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲು ಕ್ರಮ ಕೈಗೊಳ್ಳಬೇಕು. ನಿರ್ಭಯಾ ಯೋಜನೆಯಡಿ ಸಾಕಷ್ಟು ಅನುದಾನವಿದ್ದು ಅದನ್ನು ಬಳಸಿಕೊಳ್ಳಿ ಎಂದ ಗೃಹ ಸಚಿವರು 5000 ಸಿಸಿ ಕ್ಯಾಮರಾ, 1 ಸಾವಿರ ದ್ವಿಚಕ್ರ ವಾಹನ, ಪೊಲೀಸ್ ವಾಹನ ಖರೀದಿ ಹಾಗೂ ಮಫ್ತಿ ಪೊಲೀಸರನ್ನು ಹೆಚ್ಚಿಸುವಂತೆ ಸೂಚನೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.