
ಬೀದರ್[ಸೆ.10]: ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಸವಣ್ಣನವರ ವಚನವನ್ನು ತಪ್ಪಾಗಿ ಉಚ್ಚರಿಸಿದ್ದು ಸುದ್ದಿಯಾಗಿತ್ತು. ಇದೀಗ ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.
ಸೋಮವಾರ ಬೀದರ್ ಜಿಲ್ಲಾ ಬಿಜೆಪಿಯಿಂದ ಆಯೋಜಿಸಲಾಗಿದ್ದ ವಿಶೇಷ ಸಭೆಯಲ್ಲಿ ಮಾತನಾಡುವ ವೇಳೆ ‘ಇವನಾರವ ಇವನಾರವ ಇವನಾರನನೆಂದೆನಿಸದಿರಯ್ಯಾ’ ಬದಲಿಗೆ ಅವನಾರವ ಅವನಾರವ ಅವನಾರವ ಎಂದೆನಿಸದಿರಯ್ಯಾ ಎಂದು ಹೇಳಿದರು.
ಬಿ.ಎಸ್. ಯಡಿಯೂರಪ್ಪ ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಮಾಡಿದ್ದಾರೆ. ನಾನು ಕರ್ನಾಟಕ ಕಲ್ಯಾಣ ಮಾಡಲಿಕ್ಕೆ ಬೀದರ್ ನಗರಕ್ಕೆ ಬಂದಿದ್ದೇನೆ ಎಂದರು. ಇದೇ ವೇಳೆ ಬಸವಣ್ಣನವರ ‘ಇವನಾರವ ಇವನಾರವ ಇವನಾರನನೆಂದೆನಿಸದಿರಯ್ಯಾ’ ಬದಲಿಗೆ ‘ಅವನಾರವ ಅವನಾರವ ಅವನಾರವ ಎಂದೆನಿಸದಿರಯ್ಯಾ’ ಅಂತ ತಪ್ಪು ವಚನ ಹೇಳಿ ಎಡವಟ್ಟು ಮಾಡಿಕೊಳ್ಳುತ್ತಿದ್ದಂತೆ ಅಲ್ಲಿದ್ದವರು ಮುಖ ಗಂಟಿಕ್ಕಿಕೊಂಡು ತಪ್ಪನ್ನು ತಿದ್ದುವ ಪ್ರಯತ್ನ ನಡೆಸಿದಾದರೂ ಅಷ್ಟರಲ್ಲೇ ಕಾಲ ಮಿಂಚಿ ಹೋಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.