ಸರ್ಕಾರಿ ನೌಕರರ ಬ್ಯಾಂಕ್ ವ್ಯವಹಾರಗಳ ಮೇಲೆ ಸಿವಿಸಿ ಹದ್ದಿನಗಣ್ಣು

By Suvarna Web DeskFirst Published Jul 6, 2017, 11:59 PM IST
Highlights

ಸರ್ಕಾರಿ ಸಿಬ್ಬಂದಿಗಳ ಶಂಕಾಸ್ಪದ ಬ್ಯಾಂಕ್ ವ್ಯವಹಾರಗಳ ಸಂಬಂಧ ಹಣಕಾಸು ಗುಪ್ತಚರ ಘಟಕದಿಂದ ಉತ್ತಮ ಮಾಹಿತಿ ಬರುತ್ತಿದೆ. ಅದನ್ನು ಆಧರಿಸಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ವಿಚಕ್ಷಣ ಆಯುಕ್ತ ಟಿ.ವಿ. ಭಾಸಿನ್ ತಿಳಿಸಿದ್ದಾರೆ.

ನವದೆಹಲಿ(ಜು.06): ಸರ್ಕಾರಿ ಸಿಬ್ಬಂದಿಯ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹಾಗೂ ಭ್ರಷ್ಟಾಚಾರದಿಂದ ಗಳಿಸಿದ ಹಣ ಬ್ಯಾಂಕಿಂಗ್ ವ್ಯವಸ್ಥೆಯನ್ನು ತಲುಪದಂತೆ ನೋಡಿಕೊಳ್ಳಲು ಸರ್ಕಾರಿ ಅಕಾರಿಗಳ ಶಂಕಾಸ್ಪದ ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲಿಸುವ ಕೆಲಸವನ್ನು ಕೇಂದ್ರೀಯ ವಿಚಕ್ಷಣ ದಳ (ಸಿವಿಸಿ) ಆರಂಭಿಸಿದೆ.

ಸರ್ಕಾರಿ ಸಿಬ್ಬಂದಿಗಳ ಶಂಕಾಸ್ಪದ ಬ್ಯಾಂಕ್ ವ್ಯವಹಾರಗಳ ಸಂಬಂಧ ಹಣಕಾಸು ಗುಪ್ತಚರ ಘಟಕದಿಂದ ಉತ್ತಮ ಮಾಹಿತಿ ಬರುತ್ತಿದೆ. ಅದನ್ನು ಆಧರಿಸಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ವಿಚಕ್ಷಣ ಆಯುಕ್ತ ಟಿ.ವಿ. ಭಾಸಿನ್ ತಿಳಿಸಿದ್ದಾರೆ.

10 ಲಕ್ಷ ರು. ಹಾಗೂ ಅದಕ್ಕೆ ಮೇಲ್ಪಟ್ಟ ಶಂಕಾಸ್ಪದ ವ್ಯವಹಾರಗಳು ಕಪ್ಪು ಹಣವಾಗಿರಬಹುದು ಅಥವಾ ಅಪರಾಧದಿಂದ ಗಳಿಸಿದ ಹಣವಾಗಿರಬಹುದು ಎಂಬ ಶಂಕೆ ಇರುತ್ತದೆ. ಇಂತಹ ವ್ಯವಹಾರಗಳ ಮೇಲೆ ನಿಗಾ ಇಡುವುದರಿಂದ ಖಾಸಗಿ ವ್ಯಕ್ತಿಗಳು ಹಾಗೂ ಸರ್ಕಾರಿ ನೌಕರರ ಭ್ರಷ್ಟ ಕೆಲಸಕ್ಕೆ ಕಡಿವಾಣ ಬಿದ್ದಂತಾಗಲಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

click me!