
ಅಮ್ರೇಲಿ: ಗುಜರಾತ್ ಅಮ್ರೇಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯತ್ತ ವ್ಯಕ್ತಿಯೊಬ್ಬ ಬಳೆ ಎಸೆದಿದ್ದು, ಅದನ್ನು ಆತನ ಪತ್ನಿಗೆ ಉಡುಗೊರೆಯಾಗಿ ಕಳಿಸುವುದಾಗಿ ಇರಾನಿ ಹೇಳಿದ್ದಾರೆ.
ಕೇತನ್ ಕಸ್ವಾಲ ಎಂಬಾತ ಇರಾನಿ ಅವರತ್ತ ಬಳೆ ಎಸೆದು ವಂದೇ ಮಾತರಂ ಎಂದು ಕೂಗಿದ್ದ. ತಕ್ಷಣ ಪೊಲೀಸರು ಆತನನ್ನು ವಶಕ್ಕೆ ಪಡೆದು ಅಲ್ಲಿಂದ ಹೊರಗೆ ಕರೆದೊಯ್ದರು.
ಮೋದಿ ಸರಕಾರದ ಮೂರು ವರ್ಷಗಳ ಸಾಧನಾ ಸಮಾವೇಶದಲ್ಲಿ ಸಚಿವೆ ಮಾತನಾಡುತ್ತಿರಬೇಕಾದರೆ ಆರೋಪಿಯು ವೇದಿಕೆಗೆ ಹತ್ತಿರದಲ್ಲೇ ಆಸೀನನಾಗಿದ್ದ. ಏಕಾಏಕಿ ಬಳೆಗಳನ್ನು ವೇದಿಕೆಯತ್ತ ಎಸೆದು ವಂದೇ ಮಾತರಂ ಎಂದು ಕೂಗಿದ್ದಾನೆ.
ಆಗ ಪೊಲೀಸರು ಧಾವಿಸಿ ಆತನನ್ನು ಹೊರಕ್ಕೆ ಕರೆದೊಯ್ದಿದ್ದಾರೆ. ಕೂಡಲೇ ಸಚಿವೆ ಇರಾನಿ ಅವರು, ‘ಆತ ಅಲ್ಲೇ ಇರಲಿ ಬಿಡಿ. ಆತ ಎಸೆದ ಬಳೆಗಳನ್ನು ಆತನ ಪತ್ನಿಗೆ ಉಡುಗೊರೆಯಾಗಿ ಕಳಿಸುವೆ,' ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.