2ನೇ ದಿನಕ್ಕೆ ಕಾಲಿರಿಸಿದ ಪೌರಕಾರ್ಮಿಕರ ಪ್ರತಿಭಟನೆ; ಬೆಂಗಳೂರಿನಲ್ಲಿ ‘ಕಸ’ ಭಯ

By Suvarna Web DeskFirst Published Jun 13, 2017, 12:08 PM IST
Highlights

ಸೇವೆ ಖಾಯಂಮಾತಿಗೆ ಆಗ್ರಹಿಸಿ ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದೆ. 100ಕ್ಕೂ ಹೆಚ್ಚು ಕಾರ್ಮಿಕರು ಮಳೆ, ಚಳಿಯನ್ನು ಲೆಕ್ಕಿಸದೇ ರಾತ್ರಿ ಇಡೀ ಅನಿರ್ದಿಷ್ಟಾವದಿ ಧರಣಿಯನ್ನು ನಡೆಸ್ತಿದ್ದಾರೆ.

ಬೆಂಗಳೂರು: ಬೆಂಗಳೂರು ಮಾನ ಮತ್ತೊಮ್ಮೆ ಹರಾಜಾಗುವ ಲಕ್ಷಣಗಳು ಕಾಣ್ತಿವೆ. ಬೆಂಗಳೂರಿನ ಬನ್ನಪ್ಪ ಪಾರ್ಕ್’ನಲ್ಲಿ ಪೌರ ಕಾರ್ಮಿಕರು ಗುತ್ತಿಗೆ ಪದ್ಧತಿ ವಿರೋಧಿಸಿ ಅಹೋ ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸೇವೆ ಖಾಯಂಮಾತಿಗೆ ಆಗ್ರಹಿಸಿ ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದೆ. 100ಕ್ಕೂ ಹೆಚ್ಚು ಕಾರ್ಮಿಕರು ಮಳೆ, ಚಳಿಯನ್ನು ಲೆಕ್ಕಿಸದೇ ರಾತ್ರಿ ಇಡೀ ಅನಿರ್ದಿಷ್ಟಾವದಿ ಧರಣಿಯನ್ನು ನಡೆಸ್ತಿದ್ದಾರೆ.

ಸರ್ಕಾರ ಕೂಡಲೇ ಗುತ್ತಿಗೆ ಪದ್ದತಿಯನ್ನು ರದ್ದು ಮಾಡಬೇಕು ಹಾಗೂ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಸಬೇಕು ಎಂಬುವುದು ಅವರ ಬೇಡಿಕೆಯಾಗಿದೆ.

ಬೇಡಿಕೆ ಈಡೇರಿಸುವವರೆಗೂ ಬೆಂಗಳೂರಲ್ಲಿ ಕಸ ತೆಗೆಯದಿರಲು ನಿರ್ಧರಿಸಿದ್ದಾರೆ. ಇದು ಅಲ್ಲದೇ, ರಾಜ್ಯದ ವಿವಿಧ ಜಿಲ್ಲೆಗಳಿಂದ 15 ಸಾವಿರಕ್ಕೂ ಹೆಚ್ಚು ಪೌರ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ಮೇಯರ್ ಭೇಟಿ:

ಬೆಂಗಳೂರಿನ ಬನ್ನಪ್ಪ ಪಾರ್ಕ್​ನಲ್ಲಿ ಧರಣಿ ಮುಂದುವರೆದಿದ್ದು ಸ್ಥಳಕ್ಕೆ ಬಿಬಿಎಂಪಿ ಮೇಯರ್‌ ಜಿ.ಪದ್ಮಾವತಿ ಭೇಟಿ ನೀಡಿದ್ದಾರೆ. ಪೌರ ಕಾರ್ಮಿಕರ ವೇತನವನ್ನು 17,040 ರೂ.ಗೆ ಹೆಚ್ಚಿಸಲಾಗಿದೆ. ಬಿಸಿಯೂಟ, ಅಗತ್ಯ ಸೌಲಭ್ಯ ಕಲ್ಪಿಸಲಾಗ್ತಿದೆ. ಶೀಘ್ರವಾಗಿ ಖಾಯಂ ಆದೇಶ ಹೊರಬೀಳುವ ಸಾಧ್ಯತೆ ಇದ್ದು, ಅಲ್ಲಿಯವರೆಗೆ ಪೌರ ಕಾರ್ಮಿಕರು ಸಹಕರಿಸಬೇಕು ಅಂತ ಮನವಿ ಮಾಡಿದ್ದಾರೆ. ಜೊತೆಗೆ ಪ್ರತಿಭಟನೆ ಹಿಂಪಡೆಯುವಂತೆ ಧರಣಿನಿರತರನ್ನು ಮನವೊಲಿಸುವುದಾಗಿ ಹೇಳಿದ್ದಾರೆ.

click me!