
ಬೆಂಗಳೂರು[ಏ.21]: ಸಿಲಿಕಾನ್ ಸಿಟಿಯಲ್ಲಿ ನಮ್ಮ ಮೆಟ್ರೋ ಜನರಲ್ಲಿ ಸಂತಸ ಮೂಡಿಸಿದೆ. ಟ್ರಾಫಿಕ್ ಸಮಸ್ಯೆಯೂ ಕಡಿಮೆಯಾಗಿದೆ ಎಂಬುವುದು ಹಲವರ ಮಾತಾಗಿದೆ. ಆದರೆ ಮಾಗಡಿ ನಿವಾಸಿ ಮಂಜುನಾಥ್ ಮಾತ್ರ ನಮ್ಮ ಮೆಟ್ರೋನ ಪ್ಲಾಟ್ ಫಾರಂನಿಂದ ಬೇಸತ್ತಿದ್ದು, ಮಿದರ ವಿರುದ್ಧ ಪೊಲೀಸರುಗೆ ದೂರು ಸಲ್ಲಿಸಿದ್ದಾರೆ.
ಹೌದು ನಗರದ ನಿವಾಸಿ ಮಂಜುನಾಥ್ ಎಂಬವರು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ನಮ್ಮ ಮೆಟ್ರೋ ಪ್ಲಾಟ್ಫಾರಂ ಕುರಿತಾಗಿ ದೂರು ದಾಖಲಿಸಿದ್ದಾರೆ. ಮಾ. 6ರಂದು ಮಾಗಡಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಲು ಹೋಗುವಾಗ ಇವರು ಜಾರಿ ಬಿದ್ದು ಕೈ ಮೂಳೆ ಮುರಿದು ಕೊಂಡಿದ್ದರು. ಹೀಗಾಗಿ ಕೆಂಪು ಗ್ರಾನೈಟ್ ತುಂಬಾ ಜಾರುತ್ತದೆ ಎಂದು ದೂರು ದಾಖಲಿಸಿದ್ದಾರೆ. ಈ ಕಂಪ್ಲೇಂಟ್ ನಲ್ಲಿ ಮಾಗಡಿ ರಸ್ತೆ ಮೆಟ್ರೋ ಸ್ಟೇಷನ್ ಮ್ಯಾನೇಜರ್ ಪ್ರಮುಖ ಆರೋಪಿ ಎಂದೂ ಉಲ್ಲೇಖಿಸಿದ್ದಾರೆ
ನಗರಾಭಿವೃದ್ಧಿ ಇಲಾಖೆಗೂ ಪತ್ರ ಬರೆದಿರುವ ಮಂಜುನಾಥ್, ಮೆಟ್ರೋ ಪ್ಲಾಟ್ ಫಾರಂನಲ್ಲಿ ಕೈ ಮುರಿದುಕೊಂಡ ತನಗೆ 2 ಲಕ್ಷ ಖರ್ಚಾಗಿದೆ, ಖರ್ಚು ಭರಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.