ಭಾಗವತ ಪಟ್ಲ ಸತೀಶ್‌ ಪರ ಬೆಂಗಳೂರು ಯಕ್ಷಾಭಿಮಾಗಳ ಧರಣಿ

By Kannadaprabha News  |  First Published Nov 29, 2019, 8:10 AM IST

ಸಹ ಕಲಾವಿದರ ಮೇಲಿನ ದೌರ್ಜನ್ಯ ಪ್ರಶ್ನಿಸಿದ ಕಾರಣಕ್ಕಾಗಿ ಕಟೀಲು ಯಕ್ಷಗಾನ ಮೇಳದಿಂದ ಭಾಗವತ ಪಟ್ಲ ಸತೀಶ್‌ ಶೆಟ್ಟಿಅವರನ್ನು ಹೊರಗೆ ಕಳುಹಿಸಿದ ಮೇಳದ ಸಂಚಾಲಕ ದೇವಿಪ್ರಸಾದ್‌ ಶೆಟ್ಟಿ ವಿರುದ್ಧ ಯಕ್ಷಾಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.


ಬೆಂಗಳೂರು(ನ.29): ಸಹ ಕಲಾವಿದರ ಮೇಲಿನ ದೌರ್ಜನ್ಯ ಪ್ರಶ್ನಿಸಿದ ಕಾರಣಕ್ಕಾಗಿ ಕಟೀಲು ಯಕ್ಷಗಾನ ಮೇಳದಿಂದ ಭಾಗವತ ಪಟ್ಲ ಸತೀಶ್‌ ಶೆಟ್ಟಿಅವರನ್ನು ಹೊರಗೆ ಕಳುಹಿಸಿದ ಮೇಳದ ಸಂಚಾಲಕ ದೇವಿಪ್ರಸಾದ್‌ ಶೆಟ್ಟಿ ವಿರುದ್ಧ ಯಕ್ಷಾಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.

ಗುರುವಾರ ನಗರದ ಪುರಭವನದ ಎದುರು ಯಕ್ಷಾಭಿಮಾನಿಗಳ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಲ್ಲಾಡಿ ದೇವಿ ಪ್ರಸಾದ್‌ ಶೆಟ್ಟಿವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tap to resize

Latest Videos

undefined

ಖಾಸಗಿ ಬಸ್‌ಗಳಲ್ಲಿ ಈಗ ದಿಢೀರ್‌ ತಪಾಸಣೆ..! ಟಿಕೆಟ್ ಇಲ್ಲಾಂದ್ರೆ ಬೀಳುತ್ತೆ ದಂಡ

ಪಟ್ಲ ಸತೀಶ್‌ ಶೆಟ್ಟಿಅವರನ್ನು ರಂಗಸ್ಥಳದಲ್ಲಿ ಭಾಗವತಿಕೆ ಮಾಡಲು ಕರೆಯಿಸಿ ಪದ್ಯ ಹೇಳಲು ಅವಕಾಶ ನೀಡದೆ ಅಪಮಾನ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸತೀಶ್‌ ಶೆಟ್ಟಿಅವರನ್ನು ಕಟೀಲು ಯಕ್ಷಗಾನ ಮೇಳಕ್ಕೆ ಪುನಃ ಕರೆಯಿಸಿ ಭಾಗವತಕ್ಕೆ ಅವಕಾಶ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಕನ್ನಡ ಕಲಿಸದ CBSE ಶಾಲೆಗಳಿಗೆ ಡಿಸಿ ಸಿಂಧು ರೂಪೇಶ್ ಕೊಟ್ರು ಶಾಕ್..!

ಪ್ರತಿಭಟನೆಯಲ್ಲಿ ಯಕ್ಷಾಭಿಮಾನಿಗಳ ಸಂಘದ ಅಧ್ಯಕ್ಷ ದಿನೇಶ್‌ ವೈದ್ಯ ಅಂಪರ್‌, ಕರವೇ ಅಧ್ಯಕ್ಷ ಪ್ರವೀಣ್‌ಕುಮಾರ್‌ ಶೆಟ್ಟಿ, ಮಧುಕರ ಶೆಟ್ಟಿ, ದೀಪಕ್‌ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಅನಿಲ್‌ಕುಮಾರ್‌ ಪೆರ್ಡೂರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಮಂಗಳೂರು: ಕಟೀಲು ಮೇಳ ಸಂಚಾಲಕರಿಗೆ ಡಿಸಿ ಪತ್ರ

click me!