68 ನೇ ಗಣರಾಜ್ಯೋತ್ಸಕ್ಕೆ ಬೆಂಗಳೂರು ಸಜ್ಜು: ಮಾಣಿಕ್ ಷಾ ಪರೇಡ್ ಗ್ರೌಂಡ್ನಲ್ಲಿ ಬಿಗಿ ಭದ್ರತೆ

Published : Jan 26, 2017, 02:36 AM ISTUpdated : Apr 11, 2018, 01:06 PM IST
68 ನೇ ಗಣರಾಜ್ಯೋತ್ಸಕ್ಕೆ ಬೆಂಗಳೂರು ಸಜ್ಜು: ಮಾಣಿಕ್ ಷಾ ಪರೇಡ್ ಗ್ರೌಂಡ್ನಲ್ಲಿ ಬಿಗಿ ಭದ್ರತೆ

ಸಾರಾಂಶ

ಬೆಂಗಳೂರಿನಲ್ಲಿ ಗಣರಾಜ್ಯೋತ್ಸವಕ್ಕೆ ಭಾರೀ ಸಿದ್ದತೆ ನಡೆಯುತ್ತಿದೆ. ದೇಶದಲ್ಲೆಡೆ ಈ ಬಾರಿ ಹೈಅಲರ್ಟ್​ ಇರುವುದರಿಂದ ಮಾಣಿಕ್​ ಷಾ ಪರೇಡ್​ ಗ್ರೌಂಡ್'​ನಲ್ಲೂ ನಡೆಯಲಿರುವ ಗಣರಾಜ್ಯೊತ್ಸವಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುತ್ತಿದೆ. ದೇಶದೆಲ್ಲೆಡೆ ಹೈ ಅಲರ್ಟ್ ಇರುವ ಜೊತೆಗೆ, ಬೆಂಗಳೂರಿನಲ್ಲೂ ಕಟ್ಟೆಚ್ಚರ ವಹಿಸಲಾಗಿದೆ

ಬೆಂಗಳೂರು(ಜ.26): ಬೆಂಗಳೂರಿನಲ್ಲಿ ಗಣರಾಜ್ಯೋತ್ಸವಕ್ಕೆ ಭಾರೀ ಸಿದ್ದತೆ ನಡೆಯುತ್ತಿದೆ. ದೇಶದಲ್ಲೆಡೆ ಈ ಬಾರಿ ಹೈಅಲರ್ಟ್​ ಇರುವುದರಿಂದ ಮಾಣಿಕ್​ ಷಾ ಪರೇಡ್​ ಗ್ರೌಂಡ್'​ನಲ್ಲೂ ನಡೆಯಲಿರುವ ಗಣರಾಜ್ಯೊತ್ಸವಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುತ್ತಿದೆ. ದೇಶದೆಲ್ಲೆಡೆ ಹೈ ಅಲರ್ಟ್ ಇರುವ ಜೊತೆಗೆ, ಬೆಂಗಳೂರಿನಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ರಾಜ್ಯ ರಾಜಧಾನಿ  ಬೆಂಗಳೂರು ಗಣರಾಜ್ಯೋತ್ಸವಕ್ಕೆ  ಸಿದ್ಧವಾಗಿದೆ. ಬೆಳಗ್ಗೆ 9ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾರವರು ಧ್ವಜಾರೋಹಣ ಮಾಡಿ ರಾಜ್ಯವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.  ಈಗಾಗಲೇ ಮಾಣಿಕ್ ಷಾ ಪರೇಡ್ ಮೈದಾನದ ಸುತ್ತಾ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು , ನಗರದಾದ್ಯಂತ  9422ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಗಣರಾಜ್ಯೊತ್ಸವದ ಆಯೋಜನಾ ಸಮಿತಿ ಅಧ್ಯಕ್ಷತೆಯನ್ನ ವಹಿಸಿಕೊಂಡಿರೊ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್​, ನಗರ ಪೊಲೀಸ್​ ಆಯುಕ್ತ ಪ್ರವೀಣ್ ಸೂದ್, ಬೆಂಗಳೂರು ನಗರ ಡಿಸಿ ಶಂಕರ್  ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದ್ರು. ತೆರೆದ ಜೀಪಿನಲ್ಲಿ ಬಿಬಿಎಂಪಿ ಆಯುಕ್ತರು ಪರೇಡ್ ವೀಕ್ಷಿಸಿದ್ರು. ಯಾವುದೇ ಸಣ್ಣ ಅಹಿತಕಗರ ಘಟನೆ ನಡೆಯದಂತೆ ಪೊಲೀಸ್​ ಇಲಾಖೆ ಕಟ್ಟೆಚ್ಚರವಹಿಸಿದೆ. ಹೀಗಾಗಿ, ಮಾಣಿಕ್ ಷಾ ಪರೇಡ್ ಮೈದಾನ ಸೇರಿದಂತೆ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಗಣರಾಜ್ಯೋತ್ಸವದ ಭದ್ರತೆ ಹೇಗಿದೆ?

ಗಣರಾಜ್ಯೋತ್ಸವ  ಹಿನ್ನೆಲೆಯಲ್ಲಿ  ಬೆಂಗಳೂರಿನಾದ್ಯಂತ  152 ಸಿಸಿ ಕ್ಯಾಮರಾಗಳನ್ನು ಅಳಡಿಸಲಾಗಿದೆ. 9 ಡಿಸಿಪಿ, 16 ಎಸಿಪಿ, 48 ಇನ್ಸ್​ಪೆಕ್ಟರ್​, 101 ಪಿಎಸ್​ಐ, 13 ಮಹಿಳಾ ಪಿಎಸ್​ಐ, 1050 ಪೇದೆಗಳು ಹಾಗೂ ಕೆಎಸ್​ಆರ್​ಪಿ ತುಕಡಿ ಸೇರಿದಂತೆ ಸಿಆರ್ ಪಿಎಫ್​​ ತುಕಡಿ,ಸೇರಿ ನಗರದಾದ್ಯಂತ 9422 ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ ಗರುಡ ಪಡೆ, ವಜ್ರ ಮಿಲಿಟರಿ ಸ್ಕ್ವಾಡ್​ ಭದ್ರತೆ ನಿಯೋಜಿಸಲಾಗಿದ್ದು, ಶ್ವಾನ ದಳವೂ ಭಾಗಿಯಾಗುತಿದೆ. ಇನ್ನು ಈ ಬಾರಿಯೂ ನಮ್ಮ ರಾಜ್ಯದ ಒಂದು ತುಕಡಿ ಪಾಂಡಿಚೆರಿಗೆ ತೆರಳಿದ್ದು, ಪುದುಚೇರಿಯ ಸಶಸ್ತ್ರ ತುಕಡಿ ನಮ್ಮ ರಾಜ್ಯಕ್ಕೆಆಗಮಿಸಿದೆ.

ಇನ್ನು ಈ ಬಾರಿ ವಿಶೇಷ ಅಂದ್ರೆ ದ್ರೋಣ್ ಕ್ಯಾಮರಾ ನಿಷೇಧಿಸಲಾಗಿದೆ, ಜೊತೆಗೆ ನೀರಿನ ಬಾಟಲಿ, ಪಟಾಕಿ, ಸಿಗರೇಟು, ಶಸ್ತ್ರಾಸ್ತ್ರಗಳು ಹಾಗೂ ತಿಂಡಿ ತಿನಿಸುಗಳನ್ನು ಕೂಡ ನಿಷೇಧ ಮಾಡಲಾಗಿದೆ.    

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನ 2ನೇ ಏರ್‌ಪೋರ್ಟ್‌, ಗುರುತಿಸಿರೋ ಈ 3 ಸ್ಥಳಗಳಲ್ಲಿ ಯಾವುದು ಬೆಸ್ಟ್? ಅಧ್ಯಯನಕ್ಕೆ ಟೆಂಡರ್ ಕರೆದ ಸರ್ಕಾರ!
ನವೋದಯ ಪರೀಕ್ಷೆಯಲ್ಲಿ ಅಕ್ರಮ ಆರೋಪ; ಬೀದರ್‌ನಲ್ಲಿ ಬಿಇಓಗೆ ವಿದ್ಯಾರ್ಥಿ ಪೋಷಕರಿಂದ ತರಾಟೆ