ಡಬ್ಬಿಂಗ್‌ ನಿಷೇಧ ಸರಿಯಲ್ಲ : ಸುಪ್ರೀಂಕೋರ್ಟ್ ಮಹತ್ವದ ನಿರ್ದೇಶನ

By Suvarna Web DeskFirst Published Mar 17, 2017, 7:47 AM IST
Highlights

ಹಿಂದಿ ಧಾರಾವಾಹಿ ಮಹಾಭಾರತ ಬಂಗಾಳಿ ಭಾಷೆಗೆ ಡಬ್ ಆಗಿ ವಿವಿಧ ಚಾನೆಲ್'ಗಳಲ್ಲಿ ಪ್ರಸಾರವಾಗುತ್ತಿರುವುದನ್ನು ಖಂಡಿಸಿದ ಪಶ್ಚಿಮ ಬಂಗಾಳದ ಸಿನಿಮಾ ವಲಯದ ವಿವಿಧ ಸಂಘಗಳು ಧಾರಾವಾಹಿಯನ್ನು ನಿಲ್ಲಿಸಲು ಚಾನಲ್'ಗಳಿಗೆ ಪತ್ರ ಬರೆದಿತ್ತು.

ನವದೆಹಲಿ(ಮಾ.17): ಡಬ್ಬಿಂಗ್ ಇರುವ ಚಲನಚಿತ್ರಗಳು ಹಾಗೂ ಧಾರಾವಾಹಿಗಳನ್ನು ನಿಷೇಧಿಸುವುದರಿಂದ ಕಾಂಪಿಟೇಷನ್ ಆ್ಯಕ್ಟ್ 2002ರ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಭಾಷಾಭಿಮಾನದ ಹೆಸರಿನಲ್ಲಿ ಡಬ್ಬಿಂಗ್ ವಿರೋಧಿ ಚಟುವಟಿಕೆಗಳು ಕಾನೂನು ವಿರೋಧಿಯಾಗುವುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಹಿಂದಿ ಧಾರಾವಾಹಿ ಮಹಾಭಾರತ  ಬಂಗಾಳಿ ಭಾಷೆಗೆ ಡಬ್ ಆಗಿ ವಿವಿಧ ಚಾನೆಲ್'ಗಳಲ್ಲಿ ಪ್ರಸಾರವಾಗುತ್ತಿರುವುದನ್ನು ಖಂಡಿಸಿದ ಪಶ್ಚಿಮ ಬಂಗಾಳದ ಸಿನಿಮಾ ವಲಯದ ವಿವಿಧ ಸಂಘಗಳು ಧಾರಾವಾಹಿಯನ್ನು ನಿಲ್ಲಿಸಲು ಚಾನಲ್'ಗಳಿಗೆ ಪತ್ರ ಬರೆದಿತ್ತು.

ಸಂಘಗಳ ಆಕ್ಷೇಪಣೆಯನ್ನು ಖಂಡಿಸಿ ಚಾನಲ್'ಗಳು ಸುಪ್ರೀಂ ಕೋರ್ಟ್'ಗೆ ಮೇಲ್ಮನವಿ ಸಲ್ಲಿಸಿದ್ದವು. ಮನವಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.

click me!