ಫಾರೂಕ್ ಅಬ್ದುಲ್ಲಾ ತಲೆ ಕಡಿದವರಿಗೆ 1 ಲಕ್ಷ ರೂ. ಘೋಷಿಸಿದ ಭಜರಂಗ ದಳದ ನಾಯಕ!

Published : Apr 16, 2017, 12:07 PM ISTUpdated : Apr 11, 2018, 12:59 PM IST
ಫಾರೂಕ್ ಅಬ್ದುಲ್ಲಾ ತಲೆ ಕಡಿದವರಿಗೆ 1 ಲಕ್ಷ ರೂ. ಘೋಷಿಸಿದ ಭಜರಂಗ ದಳದ ನಾಯಕ!

ಸಾರಾಂಶ

ಫಾರೂಕ್ ಅಬ್ದುಲ್ಲಾ ಬಂಡುಕೋರರನ್ನು ಸಮರ್ಥಿಸಿದ್ದಾರೆ, ಅವರು ರಾಷ್ಟ್ರ ವಿರೋಧಿಯಾಗಿದ್ದಾರೆ. ಅವರ ತಲೆ ಕಡಿದು ತಂದವರಿಗೆ 1 ಲಕ್ಷ ರೂ. ಕೊಡುವುದಾಗಿ  ಗೋವಿಂದ ಪರಾಶರ್ ಎಂಬ ಭಜರಂಗ ದಳದ ನಾಯಕ ಹೇಳಿದ್ದಾನೆ.

ಆಗ್ರಾ ( ಏ.16): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಲೆಕಡಿದವರಿಗೆ ಬಿಜೆಪಿ ನಾಯಕ 11 ಲಕ್ಷ ಬಹುಮಾನ ಘೋಷಿಸಿರುವ ಬೆನ್ನಲ್ಲೇ,   ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ತಲೆಯನ್ನು ಕಡಿದು ತಂದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಭಜರಂಗ ದಳ ನಾಯಕನೊಬ್ಬ ಘೋಷಿಸಿದ್ದಾನೆ.

ಫಾರೂಕ್ ಅಬ್ದುಲ್ಲಾ ಬಂಡುಕೋರರನ್ನು ಸಮರ್ಥಿಸಿದ್ದಾರೆ, ಅವರು ರಾಷ್ಟ್ರ ವಿರೋಧಿಯಾಗಿದ್ದಾರೆ. ಅವರ ತಲೆ ಕಡಿದು ತಂದವರಿಗೆ 1 ಲಕ್ಷ ರೂ. ಕೊಡುವುದಾಗಿ  ಗೋವಿಂದ ಪರಾಶರ್ ಎಂಬ ಭಜರಂಗ ದಳದ ನಾಯಕ ಹೇಳಿದ್ದಾನೆ.

ಕಳೆದ ಹನುಮಾನ್ ಜಯಂತಿಯಂದು ಸಭೆಯೊಂದರಲ್ಲಿ ಪಶ್ಚಿಮ ಬಂಗಾಳದ ಯುವ ಮೋರ್ಚಾ ನಾಯಕ ಯೋಗೀಶ್ ವರ್ಶೆನೆಯ್ 'ಯಾರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತಲೆ ಕಡಿದು ತರಿತ್ತಾರೋ ಅವರಿಗೆ 11 ಲಕ್ಷ ಬಹುಮಾನ ನೀಡುತ್ತೇನೆ,’ ಎಂದು ಘೋಷಿಸಿದ್ದನು.

ಕಳೆದ ತಿಂಗಳು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಲೆ ಕಡಿದು ತಂದವರಿಗೆ 2 ಕೋಟಿ ರೂ. ಬಹುಮಾನ ನೀಡಿವುದಾಗಿ ಉಜ್ಜಯಿನಿಯ ಕುಂದನ್ ಚಂದ್ರಾವತ್ ಎಂಬ ಆರೆಸ್ಸೆಸ್ ನಾಯಕನೊಬ್ಬ ಘೋಷಿಸಿ ಬಂಧನಕ್ಕೊಳಗಾಗಿದ್ದನು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ