ಮೊಬೈಲ್ ಚಾರ್ಜಿಂಗ್ ವೇಳೆ ವಿದ್ಯುತ್ ಶಾಕ್ ತಗುಲಿ ಮಗು ಸಾವು..!

By Suvarna Web DeskFirst Published Feb 2, 2018, 11:34 AM IST
Highlights

ಮೊಬೈಲ್’ಗೆ ಚಾರ್ಜ್ ಹಾಕಿದ್ದ ವೇಳೆ ಚಾರ್ಜರ್ ವೈರ್ ಕಡಿದ ಪರಿಣಾಮ ವಿದ್ಯುತ್ ಶಾಕ್’ನಿಂದ ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು : ಮೊಬೈಲ್’ಗೆ ಚಾರ್ಜ್ ಹಾಕಿದ್ದ ವೇಳೆ ಚಾರ್ಜರ್ ವೈರ್ ಕಡಿದ ಪರಿಣಾಮ ವಿದ್ಯುತ್ ಶಾಕ್’ನಿಂದ ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಮೂಡಿಗೆರೆ ತಾಲೂಕಿನ ಆಲ್ದೂರಿನಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಶಾಕ್ ತಗುಲಿ ಮಗುವು ಹೊರಳಾಡುವಾಗ ಮನೆಯವರು ಕೂಡಲೆ  ಮಗುವನ್ನು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ.

ಬೆಳಗ್ಗಿನಿಂದಲೂ ಮಗುವಿಗೆ ಚಿಕಿತ್ಸೆ ನೀಡಲಾಗಿದ್ದರು, ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ.

click me!