ಎರಡೂ ಬಾರಿ ಜನಿಸಿದ ಒಂದೇ ಮಗು : ವಿಶ್ವದಲ್ಲಿ ಇದು ಅಪರೂಪದ ಘಟನೆ

Published : Oct 26, 2016, 03:50 PM ISTUpdated : Apr 11, 2018, 01:03 PM IST
ಎರಡೂ ಬಾರಿ ಜನಿಸಿದ ಒಂದೇ ಮಗು : ವಿಶ್ವದಲ್ಲಿ ಇದು ಅಪರೂಪದ ಘಟನೆ

ಸಾರಾಂಶ

ಅಮೆರಿಕದ ಹ್ಯೂಸ್ಟನ್‌ ಆಸ್ಪತ್ರೆಯೊಂದರಲ್ಲಿ ಹೆಣ್ಣು ಮಗುವೊಂದು ಎರಡು ಬಾರಿ ಜನಿಸಿರುವ ಅಪರೂಪದ ಘಟನೆ ನಡೆದಿದೆ. ತಾಯಿ 23 ವಾರಗಳ ಗರ್ಭಿಣಿಯಾಗಿದ್ದಾಗ ಒಮ್ಮೆ ಮಗುವನ್ನು ಹೊರತೆಗೆದಿದ್ದ ವೈದ್ಯರು, ಮಗುವಿಗೆ 20 ನಿಮಿಷಗಳ ಶಸ್ತ್ರಚಿಕಿತ್ಸೆ ನಡೆಸಿ ಮತ್ತೆ ತಾಯಿಯ ಗರ್ಭದೊಳಗಿಟ್ಟಿದ್ದರು. ಈಗ ಒಂಬತ್ತು ತಿಂಗಳು ಪೂರ್ಣಗೊಂಡ ಬಳಿಕ ತಾಯಿ ಸಹಜವಾಗಿ ಪುನಃ ಮಗುವನ್ನು ಹೆತ್ತಿದ್ದಾರೆ.

ಅಮೆರಿಕದ ಮಾರ್ಗರೆಟ್‌ ಬೊಮರ್‌ ಅವರು 16 ವಾರದ ಗರ್ಭಿಣಿಯಾಗಿದ್ದಾಗ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಮಗುವಿನ ಬೆನ್ನು ಮೂಳೆಯ ತುದಿಯಲ್ಲಿ ಗೆಡ್ಡೆ (ಸ್ಯಾಕ್ರೊಕಾಸಿಗೆಲ್‌ ಟ್ಯೂಮರ್‌) ಬೆಳೆಯುತ್ತಿರುವುದನ್ನು ಪತ್ತೆ ಮಾಡಿದ್ದರು. ‘ಇಂಥ ಗೆಡ್ಡೆಗಳು ಕ್ರಮೇಣ ಮಗುವಿನಲ್ಲಿ ಹರಿಯುವ ರಕ್ತವನ್ನು ಹೀರಿಕೊಂಡು ಮಗುವಿನಂತೆಯೇ ಬೆಳವಣಿಗೆ ಹೊಂದುತ್ತವೆ. ಒಂದು ಹಂತದಲ್ಲಿ ಗೆಡ್ಡೆ ಮತ್ತು ಮಗುವಿನ ನಡುವೆ ಪೈಪೋಟಿ ಉಂಟಾಗಿ, ಎರಡೂ ಕಡೆ ರಕ್ತ ಪೂರೈಸಲಾಗದೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ’ ಅಂತ ವೈದ್ಯರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಗೆಡ್ಡೆ ಭ್ರೂಣಕ್ಕಿಂತ ದೊಡ್ಡದಾದ ನಂತರ ತುರ್ತು ಶಸ್ತ್ರಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದ್ದರು. ವೈದ್ಯರಾದ ಕಾಸ್‌ ಮತ್ತು ಒಲುಯಿಂಕಾ ಒಲುಟೊಯಿ ಸತತ ಐದು ಗಂಟೆಗಳ ಕಾಲ ಆಪರೇಷನ್ ನಡೆಸಿ ಮಗುವಿಗೆ ಮರು ಜನ್ಮ ನೀಡಿದ್ದಾರೆ. ಒಟ್ಟಾರೆ 5 ಗಂಟೆಯ ಶಸ್ತ್ರಚಿಕಿತ್ಸೆಯಲ್ಲಿ 20 ನಿಮಿಷಗಳ ಚಿಕಿತ್ಸೆಯನ್ನು ಮಗುವಿಗೆ ನೀಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಶಸ್ತ್ರ ಚಿಕಿತ್ಸೆ ನಂತರ ವೈದ್ಯರು ಮಗುವನ್ನು ಪುನಃ ಗರ್ಭಕೋಶದೊಳಗೆ ಸೇರಿಸಿದರು. ಇದಾಗಿ 12 ವಾರಗಳ ನಂತರ ಮಹಿಳೆ ಮಗುವಿಗೆ ಮರುಜನ್ಮ ನೀಡಿದ್ದಾರೆ.

Click Here :ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಹಿಂದ, ಎಡಪಂಥೀಯರೇ ನಿಜವಾದ ದ್ವೇಷಭಾಷಣಕಾರರು: ಎನ್.ರವಿಕುಮಾರ್ ಲೇಖನ
ಚಿತ್ರದುರ್ಗ ಬಸ್‌ ದುರಂತ: ಮೃತ ಸಂಖ್ಯೆ 7ಕ್ಕೆ ಏರಿಕೆ, ಬಸ್‌ ಡ್ರೈವರ್‌ ರಫೀಕ್‌ ಸಾವು