ಬಾಬ್ರಿ ಮಸೀದಿ ಪ್ರಕರಣ: ಅಡ್ವಾಣಿ, ಮುರುಳಿ ಮನೋಹರ್ ಜೋಷಿ ಹಾಗೂ ಉಮಾಭಾರತಿಗೆ ಜಾಮೀನು

By Suvarna Web DeskFirst Published May 30, 2017, 4:37 PM IST
Highlights

ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಮುಖಂಡ ಎಲ್.ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಷಿ ಹಾಗೂ ಉಮಾಭಾರತಿಗೆ ಸಿಬೈ ವಿಶೇಷ ನ್ಯಾಯಾಲಯ ಜಾಮೀನು  ನೀಡಿದೆ.  ಪ್ರತಿಯೊಬ್ಬರಿಗೂ 50 ಸಾವಿರ ಬಾಂಡ್ ನೀಡಬೇಕೆಂದು ಕೋರ್ಟ್ ಹೇಳಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಪಿತೂರಿ ನಡೆಸಿದ್ದಾರೆಂದು 12 ಜನರ ಮೇಲೆ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ನವದೆಹಲಿ (ಮೇ.30): ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಮುಖಂಡ ಎಲ್.ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಷಿ ಹಾಗೂ ಉಮಾಭಾರತಿಗೆ ಸಿಬೈ ವಿಶೇಷ ನ್ಯಾಯಾಲಯ ಜಾಮೀನು  ನೀಡಿದೆ.  ಪ್ರತಿಯೊಬ್ಬರಿಗೂ 50 ಸಾವಿರ ಬಾಂಡ್ ನೀಡಬೇಕೆಂದು ಕೋರ್ಟ್ ಹೇಳಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಪಿತೂರಿ ನಡೆಸಿದ್ದಾರೆಂದು 12 ಜನರ ಮೇಲೆ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಇಂದು ನಡೆದ ವಿಚಾರಣೆಯಲ್ಲಿ ಇದೇ ಮೊದಲ ಬಾರಿಗೆ ಅಡ್ವಾಣಿ. ಜೋಷಿ ಹಾಗೂ ಉಮಾಭಾರತಿ ನ್ಯಾಯಾಲಯದ ಮುಂದೆ ಹಾಜರಾದರು. ತಮ್ಮ ಮೇಲಿರುವ ಆರೋಪ ಪಟ್ಟಿಯನ್ನು ಕೈಬಿಡಬೇಕು ಎಂದು ಈ ಮೂವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದು ಬಿಜೆಪಿಗೆ ಹಿನ್ನಡೆಯಾಗಿದೆ.

click me!