
ನವದೆಹಲಿ (ಆ.08): ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಪ್ರಕರಣದಲ್ಲಿ ಮಧ್ಯಪ್ರವೇಶಿಸಿರುವ ಶಿಯಾ ವಕ್ಫ್ ಮಂಡಳಿ ಈ ಸಂಬಂಧ ಸುಪ್ರೀಂಕೋರ್ಟ್’ಗೆ ಅಫಿಡವಿಟ್ ಸಲ್ಲಿಸಿದ್ದು, ವಿವಾದಿತ ಸ್ಥಳದಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡಿಕೊಳ್ಳಬಹುದು. ಅದೇ ರೀತಿ ರಾಮಜನ್ಮಭೂಮಿ ಸಮೀಪವಿರುವ ಮುಸ್ಲೀಂ ಬಾಹುಳ್ಯವಿರುವ ಸ್ಥಳಗಳಲ್ಲಿ ಬಾಬ್ರಿ ಮಸೀದಿಯನ್ನು ನಿರ್ಮಾಣ ಮಾಡಬಹುದು ಎಂದು ಸುಪ್ರೀಂಕೋರ್ಟ್’ಗೆ ಅಫಿಡವಿಟ್ ಸಲ್ಲಿಸಿದೆ.
ರಾಮಮಂದಿರ ಹಾಗೂ ಬಾಬ್ರಿ ಮಸೀದಿ ಒಟ್ಟಿಗೆ ಇರುವುದರಿಂದ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ ಎಂದಾದರೆ ನಾವು ಈ ರೀತಿ ಮಾಡಿಕೊಳ್ಳಬಹುದು ಎಂದು ಶಿಯಾ ವಕ್ಫ್ ಮಂಡಳಿ ಕೋರ್ಟ್’ಗೆ ಹೇಳಿದೆ.
ಅತ್ಯಂತ ಹಳೆಯ ವಿವಾದ ಪ್ರಕರಣವಾದ ಅಯೋಧ್ಯ ಭೂಮಿ ವಿಚಾರ ದಶಕಗಳಾದರೂ ಬಗೆಹರಿದಿಲ್ಲ. ಅದು ರಾಮಜನ್ಮಭೂಮಿ ಎಂದು ಹಿಂದೂಗಳು ವಾದಿಸಿದರೆ ಅಲ್ಲಿ ಬಾಬ್ರಿ ಮಸೀದಿಯಿತ್ತು ಎಂದು ಮುಸ್ಲೀಂಮರು ವಾದಿಸುತ್ತಾರೆ. 1992 ರಲ್ಲಿ ಕರವೇ ಕಾರ್ಯಕರ್ತರು ಬಾಬ್ರಿ ಮಸೀದಿಯನ್ನು ಕೆಡವಿದ ಬಳಿಕ ವಿವಾದ ಇನ್ನಷ್ಟು ಕಗ್ಗಂಟಾಗಿದೆ.
ಆ.11 ರಂದು ಸುಪ್ರೀಂಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.