
ಶಿವಮೊಗ್ಗ[ಅ.28]: ಪರಸ್ಪರ ಒಪ್ಪಂದದ ಮೇರೆಗೆ ಮದುವೆಯಾಗಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಸಂಸಾರ ನಡೆಸುವುದಿಲ್ಲ. ಯಾವಾಗಾದರೂ ವಿಚ್ಛೇದನ ಸಾಧ್ಯತೆ ಇದೆ ಎಂದು ಶಾಸಕ ಬಾಬುರಾವ್ ಚಿಂಚನಸೂರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಇಂದು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ. ಕುಮಾರಸ್ವಾಮಿ ಸರ್ಕಾರ ಮಿಲಿ-ಜುಲಿ ಆಗಿದೆ ಎಂದರು. ದೇಶ ಕಂಡ ಅತ್ಯಂತ ಕೆಟ್ಟ ಸಿಎಂ ಸಿದ್ದ ರಾಮಯ್ಯ ಎಂದು ದೇವೇಗೌಡರು ಜರಿದಿದ್ದರು. ರಾಜಕೀಯ ಕುತಂತ್ರದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸಿದ್ದಾರೆ ಎಂದು ಸಿದ್ದರಾಮಯ್ಯ ಅವರು ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ದೂರಿದ್ದರು. ಹೀಗಿರುವಾಗ ಸರ್ಕಾರದಲ್ಲಿ ಹೊಂದಾಣಿಕೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಸಮ್ಮಿಶ್ರ ಸರ್ಕಾರ ದಲ್ಲಿ ಹೊಂದಾಣಿಕೆಯೇ ಇಲ್ಲ ವಾಗಿದೆ. ಸರ್ಕಾರ ಸದ್ಯದಲ್ಲೇ ಪತನವಾಗುತ್ತದೆ. ನವಂಬರ್ ಬಳಿಕ ಬಿ.ಎಸ್. ಯಡಿಯೂರಪ್ಪ ರಾಜ್ಯದ ಸಿಎಂ ಆಗುವುದು ಖಚಿತ. ಶಿವಮೊಗ್ಗ, ಬಳ್ಳಾರಿ, ಜಮಖಂಡಿಯಲ್ಲಿ ಬಿಜೆಪಿ ಗೆಲುವು ಖಚಿತ. ಮಂಡ್ಯ, ರಾಮನಗರ ಕ್ಷೇತ್ರ ದಲ್ಲೂ ಪವಾಡ ನಡೆಯಲಿದೆ. ಫಲಿತಾಂಶ ಬಿಜೆಪಿ ಪರ ಇರಲಿದೆ ಎಂದರು.
ಗಂಗಾಮತಸ್ಥ ಸಮಾಜಕ್ಕೆ ಸೇರಿದ ರಾಮನಾಥ ಕೋವಿಂದ ಅವರಿಗೆ ನರೇಂದ್ರ ಮೋದಿ ರಾಷ್ಟ್ರಪತಿ ಹುದ್ದೆ ನೀಡಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಕೆಲಸ ಮಾಡಿದ್ದಾರೆ ಎಂದರು. ರಾಮಣ್ಣ ನಾಯಕವಾಡಿ, ಕೆಂಚಪ್ಪ, ಕುಮಾರ್, ಸತೀಶ್ ಗಾಂಧಿ, ಶ್ರೀನಿವಾಸ್, ಹಿರಣ್ಣಯ್ಯ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.