
ಬೆಂಗಳೂರು(ಜ.09): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ 'ಆಯುಷ್ಮಾನ್ ಭಾರತ' ಆರೋಗ್ಯ ವಿಮೆ ಯೋಜನೆಯ ಅರ್ಹತಾ ಪತ್ರಗಳು ರಾಜ್ಯದ ಲಕ್ಷಾಂತರ ಫಲಾನುಭವಿಗಳ ಮನೆಗೆ ತಲುಪುತ್ತಿವೆ.
ಯಾವುದೇ ಅರ್ಜಿ ಅಥವಾ ದಾಖಲೆಯ ಕಿರುಕುಳ ಇಲ್ಲದೆ ಈ ಯೋಜನೆಯ ಪ್ರಯೋಜನ ತಮಗೆ ಸಿಗುತ್ತಿರುವ ಬಗ್ಗೆ ನಾಗರಿಕರು ಫುಲ್ ಖುಷ್ ಆಗಿದ್ದಾರೆ. ಆದರೆ ಅರ್ಹತಾ ಪತ್ರದಲ್ಲಿ ನಮೂದಿಸಿರುವ ವಿಳಾಸಗಳು ತಪ್ಪಾಗಿರುವುದರಿಂದ ಪೋಸ್ಟ್‌ಮನ್‌ಗಳು ಪರದಾಡುತ್ತಿದ್ದಾರೆ.
ಅರ್ಹತಾ ಪತ್ರ ಹೊಂದಿದರೆ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಕಾರ್ಡ್ ಪಡೆಯಲು ಮತ್ಯಾವುದೇ ದಾಖಲೆ ಒದಗಿಸುವಂತಿಲ್ಲ ಎಂಬುದು ಈ ಪ್ರಕ್ರಿಯೆಯ ಉದ್ದೇಶ. ಆದರೆ, ಸರಿ ಇದ್ದ ವಿಳಾಸವನ್ನೇ ಪತ್ತೆ ಹಚ್ಚಿ ಬಟಾವಡೆ ಮಾಡುವುದೇ ಕಷ್ಟದ ಕೆಲಸ. ಈ ನಡುವೆ ತಪ್ಪು ವಿಳಾಸಗಳಿಂದಾಗಿ ಆಯುಷ್ಮಾನ್ ಅರ್ಹತಾ ಪತ್ರಗಳ ಸಮರ್ಪಕ ವಿತರಣೆ ಪೋಸ್ಟ್ ಮ್ಯಾನ್‌ಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಅಂತ್ಯೋದಯ ಕುಂಟುಂಬಕ್ಕೆ ಸಂಪೂರ್ಣ ಉಚಿತ ಚಿಕಿತ್ಸೆ, ಬಿಪಿಎಲ್ ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ಹಾಗೂ ಎಪಿಲ್ ಕುಟುಂಬಕ್ಕೆ 1.50 ಲಕ್ಷ ರೂ.ವರೆಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.