ಹೊಸ ಲುಕ್'ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಯಮಹಾದ ಈ 2 ಬೈಕ್'ಗಳು

By Suvarna Web DeskFirst Published Jan 9, 2018, 5:23 PM IST
Highlights

ಕಳೆದ ವರ್ಷ ಯಮಹಾ ಸಂಸ್ಥೆಯು ಯಮಹಾ FZ25 ಹಾಗೂ ಯಮಹಾ ಫೇಜರ್ 25 ಎಂಬ ಎರಡು ಮಾದರಿಯ ಬೈಕ್'ಗಳನ್ನು ಪರಿಚಯಿಸಿ ಯಶಸ್ವಿಯಾಗಿತ್ತು.  ಇದೀಗ ನೂತನ ವರ್ಷದಲ್ಲಿ 'ಆರ್' ಸೀರಿಸ್'ನಲ್ಲಿ ಬೈಕ್'ಗಳನ್ನು ಪರಿಚಯಿಸುತ್ತಿದೆ.

ಜಪಾನ್'ನ ದ್ವಿಚಕ್ರ ವಾಹನ ಕ್ಷೇತ್ರದ ದಿಗ್ಗಜ ಸಂಸ್ಥೆ 2018ನೇ ಸಾಲಿನಲ್ಲಿ ಎರಡು ಹೊಸ ಮಾದರಿಯ ಬೈಕ್'ಗಳನ್ನು ಪರಿಚಯಿಸಲು ಮುಂದಾಗಿದೆ.

ಕಳೆದ ವರ್ಷ ಯಮಹಾ ಸಂಸ್ಥೆಯು ಯಮಹಾ FZ25 ಹಾಗೂ ಯಮಹಾ ಫೇಜರ್ 25 ಎಂಬ ಎರಡು ಮಾದರಿಯ ಬೈಕ್'ಗಳನ್ನು ಪರಿಚಯಿಸಿ ಯಶಸ್ವಿಯಾಗಿತ್ತು.  ಇದೀಗ ನೂತನ ವರ್ಷದಲ್ಲಿ 'ಆರ್' ಸೀರಿಸ್'ನಲ್ಲಿ ಬೈಕ್'ಗಳನ್ನು ಪರಿಚಯಿಸುತ್ತಿದೆ.

ಯಮಹಾ R15 ವರ್ಷನ್ 3.0

ಅಂದಾಜು ಬೆಲೆ: ರು.1.25-1.30 ಲಕ್ಷ(ಎಕ್ಸ್-ಶೋ ರೂಂ ಬೆಲೆ)

ವಿಶೇಷತೆ ಏನು..?

ಯಮಹಾ ಮೂರನೇ ತಲೆಮಾರಿಗೆ ಕಾಲಿಟ್ಟಿದ್ದು, R15 ವರ್ಷನ್ 3.0 ಹೊಸ ಲುಕ್'ನೊಂದಿಗೆ ಲಗ್ಗೆಯಿಡಲಿದೆ.

* ಬೈಕ್'ನ ಇಂಧನ ಸಾಮರ್ಥ್ಯದ ಟ್ಯಾಂಕ್ ಲುಕ್ ಕೂಡಾ ಬದಲಾಗಿದ್ದು, 12 ಲೀಟರ್ ಇದ್ದ ಟ್ಯಾಂಕ್ ಸಾಮರ್ಥ್ಯ 11 ಲೀಟರ್'ಗೆ ಇಳಿಸಲಾಗಿದೆ.

* ಹೊಸ 155 ಸಿಸಿ ಬೈಕ್ 19.5 ಕಿಲೋ ಮೀಟರ್ ಪರ್ ಸೆಕೆಂಡ್ ವೇಗ ಕ್ಷಮತೆಯನ್ನು ಹೊಂದಿದೆ ಎನ್ನಲಾಗುತ್ತಿದೆ.

* ಟಯರ್ ವಿನ್ಯಾಸದಲ್ಲೂ ಬದಲಾವಣೆಗಳಾಗಿದ್ದು, 6 ಗೇರ್'ಗಳನ್ನು ಹೊಂದಿದೆ.

ಯಮಹಾ R3

ಅಂದಾಜು ಬೆಲೆ: ರು. 3.3 - 3.5 ಲಕ್ಷ(ಎಕ್ಸ್ ಶೋ ರೂಂ ಬೆಲೆ)

ಹಳೆಯ ಮಾದರಿಯ ಯಮಹಾ R3 ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಹವಾ ಸೃಷ್ಟಿ ಮಾಡಿತ್ತು. ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಮನ ಸೆಳೆದಿರುವ ಯೂರೋ 4 ಮಾದರಿಯ ಬೈಕ್'ನ್ನು ಭಾರತದಲ್ಲಿ ರೀ ಲಾಂಚ್ ಮಾಡಲು ಯಮಹಾ ಸಂಸ್ಥೆ ನಿರ್ಧರಿಸಿದೆ.

* ನೂತನ ಯಮಹಾ R3 ಕೂಡಾ 321 ಸಿಸಿ ಸಾಮರ್ಥ್ಯವನ್ನೇ ಹೊಂದಿದ್ದು, 6 ಗೇರ್'ಗಳನ್ನು ಹೊಂದಿದೆ. ಇನ್ನು ಪ್ರತಿ ಸೆಕೆಂಡ್'ಗೆ 42 ಕಿಲೋ ಮೀಟರ್ ವೇಗ ಹೆಚ್ಚಿಸಿಕೊಳ್ಳುವ ಕ್ಷಮತೆ ಹೊಂದಿದೆ.

* ಕಳೆದ ಆವೃತ್ತಿಯ ಬೈಕ್'ನಲ್ಲಿ ಎಬಿಎಸ್ ಅಳವಡಿಸಿರಲಿಲ್ಲ. ಆದರೆ ನೂತನ ಬೈಕ್'ನಲ್ಲಿ ಇದನ್ನೂ ನಿರೀಕ್ಷಿಸಲಾಗಿದೆ.

click me!