
ನವದೆಹಲಿ (ಎ. 01): ಏ.01 ರಿಂದ ಬಿಎಸ್-3 ಮಾದರಿಯ ವಾಹನಗಳ ಮಾರಾಟವನ್ನು ಸುಪ್ರೀಂ ಕೋರ್ಟ್ ನಿಷೇಧಿಸಿರುವ ಹಿನ್ನೆಲೆಯಲ್ಲಿ, ಡೀಲರ್’ಗಳು ‘ನಕಲಿ ಮಾರಾಟ’ದಂತಹ ವಾಮಮಾರ್ಗವನ್ನು ಬಳಸಿಕೊಳ್ಳುತ್ತಿದ್ದಾರೆಂದು ಪರಿಸರ ಮಾಲಿನ್ಯ ತಡೆ ಮತ್ತು ನಿಯಂತ್ರಣ ಪ್ರಾಧಿಕಾರ (EPCA) ಆರೋಪಿಸಿದೆ.
ಡೀಲರ್’ಗಳು ಬಿಎಸ್-3 ವಾಹನಗಳನ್ನು ಸದ್ಯಕ್ಕೆ ತಮ್ಮ ಸಂಬಂಧಿಕರಿಗೆ ಬೃಹತ್ ಪ್ರಮಾಣದಲ್ಲಿ ಮಾರಿದ್ದಾರೆ. ಆ ಬಳಿಕ ಅವರು ಗ್ರಾಹಕರಿಗೆ ಮಾರಬಹುದಾಗಿದೆ. ಆಗ ನೋಂದಣಿ ಸಮಸ್ಯೆಯಾಗುವುವುದಿಲ್ಲ, ಎಂದು ಪ್ರಾಧಿಕಾರವು ಹೇಳಿದೆ.
ಆದುದರಿಂದ, ತಮ್ಮ ಬಳಿ ದಾಸ್ತಾನಿದ್ದ ವಾಹನಗಳನ್ನು ಡೀಲರ್’ಗಳು ಏನು ಮಾಡಿದ್ದಾರೆ ಎಂಬಿತ್ಯಾದಿ ವಿವರಗಳನ್ನು ಸುಪ್ರೀಂ ಕೋರ್ಟ್’ಗೆ ಸಲ್ಲಿಸಬೇಕಾಗಬಹುದೆಂದು, ಪ್ರಾಧಿಕಾರವು ಹೇಳಿದೆ.
ಸುಪ್ರೀಂ ಕೋರ್ಟ್ ಕಳೆದ ಮಾ.29ಕ್ಕೆ ಬಿಎಸ್-3 ವಾಹನಗಳನ್ನು ನಿಷೇಧಿಸಿದ್ದು, ವರದಿಗಳ ಪ್ರಕಾರ ದೇಶದಲ್ಲಿ 8.24 ಲಕ್ಷ ವಾಹನಗಳು ದಾಸ್ತಾನಿದ್ದುವು, ಅದರಲ್ಲಿ ಸಿಂಹಪಾಲು ಅಂದರೆ ಸುಮಾರು 6 ಲಕ್ಷ ಸಂಖ್ಯೆಯ ದ್ವಿಚಕ್ರವಾಹನಗಳಿದ್ದುವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.