'ಯಾವುದಾದರೂ ಪುಸ್ತಕ ಸುಟ್ಟುಹಾಕಿದ್ದರೆ ಅದರು ಹೇಳಿ ಹೋಗು ಕಾರಣ..' ಲೇಖಕಿಯ ಪೋಸ್ಟ್‌ಗೆ ಭಾರೀ ಕಾಮೆಂಟ್ಸ್‌!

Published : Dec 22, 2025, 04:23 PM IST
Heli Hogu Karana Book

ಸಾರಾಂಶ

ರವಿ ಬೆಳಗರೆಯವರ 'ಹೇಳಿ ಹೋಗು ಕಾರಣ' ಪುಸ್ತಕವು ಯುವಜನರಲ್ಲಿ ಇಂದಿಗೂ ಜನಪ್ರಿಯವಾಗಿದೆ. ಇತ್ತೀಚೆಗೆ ಲೇಖಕಿ ಪೂರ್ಣಿಮಾ ಹೆಗ್ಗಡೆ ಅವರು ಈ ಪುಸ್ತಕವನ್ನು ತಾನು ಸುಟ್ಟುಹಾಕಿದ್ದೆ ಎಂದು ಹೇಳಿಕೊಂಡಿದ್ದು, ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು (ಡಿ.22): ಯುವಜನರ ಪಾಲಿಗೆ ಇಂದಿಗೂ ಫೇವರಿಟ್‌ ಆಗಿರುವ ಪುಸ್ತಕವೆಂದರೆ ಅದು ರವಿ ಬೆಳಗರೆಯವರ ಹೇಳಿ ಹೋಗು ಕಾರಣ. ಪ್ರೀತಿ, ನೋವು, ಸಂಕಟ, ವಿರಹ, ಪ್ರೀತಿಸಿದವಳಿಗಾಗಿ ಎಂಥಾ ಹಂತಕ್ಕೂ ಹೋಗುವ ಧಾರ್ಷ್ಟ್ಯ, ಕೊನೆಗೆ ಎಲ್ಲವನ್ನೂ ಬಿಟ್ಟುಕೊಡುವ ತ್ಯಾಗ ಇದೆಲ್ಲವನ್ನೂ ಅತ್ಯಂತ ಎಳೆಎಳೆಯಾಗಿ ಯುವ ಮನಸ್ಸುಗಳಿಗೆ ತಿಳಿಸಿದ ಪುಸ್ತಕ 'ಹೇಳಿ ಹೋಗು ಕಾರಣ'. ಕೆಲವರಿಗೆ ಈ ಪುಸ್ತಕ ಓದುವ ಅಭಿಲಾಷೆಯನ್ನು ಹೆಚ್ಚಿಸಿದರೆ, ಇನ್ನೂ ಕೆಲವರಿಗೆ ಇಂಥದ್ದೊಂದು ಪುಸ್ತಕ ಯಾಕಾದರೂ ಓದಿದೆನೋ ಎನ್ನುವ ನೋವಿನ 'ಸಮ್ಮತಿ' ಇದರ ಮೂಲಕ ಸಿಗುತ್ತದೆ.

ಇನ್ಸ್‌ಟಾಗ್ರಾಮ್‌ನಲ್ಲಿ ಕನ್ನಡದ ಪುಸ್ತಕಗಳ ರಿವ್ಯೂ ಮಾಡುವ ಮೂಲಕ ಜನರಿಗೆ ಓದುವ ಅಭಿಲಾಷೆಯನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿರುವ ಲೇಖಕಿ ಪೂರ್ಣಿಯಾ ಹೆಗ್ಗಡೆ ಅವರಿಗೆ ಬಹಳ ಕಾಲದಿಂದ ಕಾಮೆಂಟ್‌ ಮಾಡುವವರು ಇದೊಂದು ಪ್ರಶ್ನೆಯನ್ನು ಕೇಳುತ್ತಲೇ ಇದ್ದರು. 'ಹೇಳಿ ಹೋಗು ಕಾರಣ..' ಪುಸ್ತಕದ ರಿವ್ಯೂ ಮಾಡಿ ಅನ್ನೋದು. ಕೊನೆಗೂ ನನ್ನ ಸೈಕಲ್ಲು ಪುಸ್ತಕದ ಲೇಖಕಿ ಪೂರ್ಣಿಮಾ, ಇದರ ಬಗ್ಗೆ ಬರೆದುಕೊಂಡಿದ್ದಾರೆ.

'ತುಂಬಾ ಜನ ಕೇಳ್ತಾರೆ ಇದಿರ "ಹೇಳಿ ಹೋಗು ಕಾರಣ " review ಮಾಡಿ ಅಂತ. ವಯಸ್ಸಲ್ಲದ ವಯಸ್ಸಲ್ಲಿ ಓದಿದ್ದು ನನ್ನದೇ ತಪ್ಪ ಅಥವಾ ಅದನ್ನ ನನಗೆ ಅರಗಿಸಿಕೊಳ್ಳುವ ಶಕ್ತಿ ಇರಲಿಲ್ಲವ ನನಗೆ ಗೊತ್ತಿಲ್ಲ. ಯಾವುದಾದರು ಒಂದು ಪುಸ್ತಕವನ್ನ ಸುಟ್ಟು ಹಾಕಿದ್ದರೆ ಅದು ಇದೇ ಪುಸ್ತಕ. ಪುಸ್ತಕದ ಕೊನೆಯ page ಸುಡುವವರೆಗೂ ನಿಂತು ನೋಡಿ ಮನಸ್ಸನ್ನು ನಿರಾಳ ಮಾಡಿಕೊಂಡಿದ್ದೆ.ಈಗ ಅದರ ಬಗ್ಗೆ ನನಗೆ ಬೇರೆಯೇ ದೃಷ್ಟಿಕೋನ ಇದ್ರೂ ಅದನ್ನ ವ್ಯಕ್ತಪಡಿಸೋ ಮನಸಿಲ್ಲ, ಯಾರಿಗೂ ಅದನ್ನು ಓದಿ ಎಂದು ನಾನು suggest ಕೂಡ ಮಾಡಲ್ಲ That's all' ಎಂದು ಅವರು ಬರೆದುಕೊಂಡಿದ್ದಾರೆ.

ಸಾಕಷ್ಟು ಪರ-ವಿರೋಧ ಅಭಿಪ್ರಾಯ

ಅವರ ಈ ಅಭಿಪ್ರಾಯಕ್ಕೆ ಸಾಕಷ್ಟು ಪರ ವಿರೋಧದ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಸುಟ್ಟು ಹಾಕಿದ್ರಾ? ರವಿ ಬೆಳೆಗೆರೆ ನಿಮ್ಮನ್ನ ಕ್ಷಮಿಸುತ್ತಾರಾ?' ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. '22 ವರ್ಷದ ಹಳೆಯ ಕಾದಂಬರಿ ಇಂದು ಸದ್ದು ಮಾಡುತ್ತಿದೆ...' ಎಂದು ಮತ್ತೊಬ್ಬರು ಬರೆದಿದ್ದಾರೆ.

'ನಿದ್ರೆಯಲ್ಲೂ ಎದ್ದು ತವತವಡಿಸುವ ಪುಸ್ತಕ..ಈ ಪುಸ್ತಕ ಮನಸ ಪೂರಕವಾಗಿ ಓದಿದೊರು ..ಅದರಿಂದ ಹೊರಬರೊಕೆ ನಮಗೆ ಸಮಯ ಬೇಕಾಗುತ್ತೆ..ಯಾವ ಪಾತ್ರವನ್ನ ಓದಿದರು ಎಲ್ಲಾ ಪಾತ್ರಕ್ಕು ಇದು ನಾನೆನಾ ಅನ್ನೊ ಭಾವ ಹುಟ್ಟುತ್ತೆ...ಪ್ರತಿಯೊಂದು ಸಂಭಾಷಣೆ ಜೀವ ತುಂಬ ಆ ಪಾತ್ರಗಳನ್ನ ನಾವು ಕಲ್ಪನೆ ಮಾಡೊಕೆ ಹೊಗ್ತಿವಿ ...ನಾನಂತ್ರು ಹುಚ್ಚ ಆಗಿದ್ದೆ ಓದಿ' ಎಂದು ಪ್ರಕಾಶ್‌ ರಾಠೋಢ್‌ ಎನ್ನುವ ವ್ಯಕ್ತಿ ಬರೆದುಕೊಂಡಿದ್ದಾರೆ.

'ಕಾಡುವ ಅಳಿಸುವ ನಗಿಸುವ ನರಳುವಂತೆ ಮಾಡುವ ಪುಸ್ತಕಗಳನ್ನ ನಾನು ಹೇಗೆ ಸ್ವಿಕರಿಸಲಿ..' ಎಂದು ಮತ್ತೊಬ್ಬರು ಬರೆದಿದ್ದಾರೆ. 'ಹೌದು ಮ್ಯಾಮ್, 'ಹೇಳಿ ಹೋಗು ಕಾರಣ' ಪುಸ್ತಕದ ಕೆಲವೇ ಕೆಲವು ಪುಟಗಳು ಓದಿದ್ದೇನೆ, ಆದರೆ ಏಕೋ ಗೊತ್ತಿಲ್ಲ ಮುಂದಿನ ಪುಸ್ತಕಕ್ಕೆ ಹೋಗುವ ಮುನ್ನ ಬೆರಳುಗಳು ನಡುಗುತ್ತಿವೆ, ಪುಸ್ತಕವನ್ನ ನೋಡಿದರೆ ಸಾಕು ಹೀಗೆ ಕೇಳಿದ ಮಾತು ಪ್ರಾರ್ಥನಾ ಹಿಮವಂತನನ್ನು ಬಿಟ್ಟು ಹೋಗುತ್ತಾಳೆ ಎಂಬ ಭಯದಿಂದ ಭರಿತನಾಗಿದ್ದೇನೆ..' ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

'ಅಂಥದ್ದು ಏನ್ ಇದೆ? I should read this book at least once, curiousity goes high..' ಎಂದು ಮಧು ಎನ್ನುವವರು ಪುಸ್ತಕ ಓಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. 'ಒಂದು ಕಾಲದ ಜೀವ ಹಿಡಿದ ಕನವರಿಕೆಗಳು. ಈಗ ಕ್ಲೀಷೆಗಳು. ರವಿ ಮತ್ತು ರವಿಯ ಬರಹ ಒಂದು ಕಾಲದ ಕನವರಿಕೆ..' ಎಂದು ಮತ್ತೊಬ್ಬರು ಬರೆದಿದ್ದಾರೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗಂಡ ಇಷ್ಟ ಇಲ್ಲ, ಪ್ರೇಮಿಯೂ ಸೇರಿಸ್ತಿಲ್ಲ; 'ಯಾರಿಗೆ ಬೇಕು ಈ ಲೋಕ'ವೆಂದು ಲೈವ್‌ನಲ್ಲಿ ನೇಣಿಗೆ ಶರಣಾದ ಗೃಹಿಣಿ!
ಲೇಡಿಸ್ ಕೋಚ್‌ಗೆ ಹತ್ತಿ ಚಲಿಸುವ ರೈಲಿನಿಂದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಕೆಳಗೆ ತಳ್ಳಿದ್ದ ದುಷ್ಕರ್ಮಿಯ ಬಂಧನ