
ನವದೆಹಲಿ[ಸೆ.17]: ಕರ್ನಾಟಕದ ಪ್ರಸಿದ್ಧ ಸಿಹಿ ತಿನಿಸು ಎನಿಸಿಕೊಂಡಿರುವ ಮೈಸೂರು ಪಾಕ್ ಇದೀಗ ತಮಿಳುನಾಡಿನ ಭೌಗೋಳಿಕ ಸೂಚಕದ ತಿನಿಸಾಗಿದೆ ಎಂಬ ತಮಿಳುನಾಡಿನ ಲೇಖಕ, ವಿಜ್ಞಾನಿ ಹಾಗೂ ಅಂಕಣಕಾರ ಆನಂದ್ ರಂಗನಾಥನ್ ಅವರು ಮಾಡಿದ್ದ ಟ್ವೀಟೊಂದು ಕರ್ನಾಟಕದಲ್ಲಿ ಕೆಲ ಹೊತ್ತು ಆಕ್ರೋಶದ ಕಿಡಿಯನ್ನೇ ಹೊತ್ತಿಸಿದ ಘಟನೆ ಸೋಮವಾರ ನಡೆದಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮೈಸೂರು ಪಾಕ್‌ಗಳನ್ನೊಳಗೊಂಡ ಬಾಕ್ಸ್ ನೀಡುವಂಥ ಚಿತ್ರವೊಂದನ್ನು ಅಂಕಣಕಾರ ಆನಂದ್ ರಂಗನಾಥನ್ ಸೋಮವಾರ ಟ್ವೀಟ್ ಮಾಡಿದ್ದರು. ‘ತಮಿಳುನಾಡಿಗೆ ಮೈಸೂರು ಪಾಕ್ ಜಿಐ ಟ್ಯಾಗ್ ನೀಡಿರುವುದಕ್ಕಾಗಿ ಏಕ ಸದಸ್ಯ ಸಮಿತಿಯ ಪರವಾಗಿ ಈ ಪ್ರಶಂಸೆ ಸ್ವೀಕರಿಸಲು ಸಂತಸವಾಗುತ್ತಿದೆ’ ಎಂದವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.
ಇದು ಹಾಸ್ಯ ಎಂದು ಅರಿಯದೇ ಹಲವು ಸುದ್ದಿವಾಹಿನಿಗಳು ಇದನ್ನು ನಿಜ ಎಂದೇ ಬಿಂಬಿಸಿ ವರದಿ ಮಾಡಿದವು. ಇದಕ್ಕೆ ರಾಜಕೀಯ ನಾಯಕರ ಪ್ರತಿಕ್ರಿಯೆ, ವಿರೋಧವೂ ಕೇಳಿಬಂತು. ಪ್ರತಿಭಟನೆಯ ಮಾತುಗಳೂ ಮೊಳಗಿದವು. ಇಷ್ಟಾಗುವಷ್ಟರಲ್ಲಿ ಈ ಸುದ್ದಿ ಆನಂದ್ ರಂಗನಾಥನ್ ಅವರ ಕಿವಿಗೂ ಬಿತ್ತು. ವಿಷಯ ಹೀಗೆ ಬಿಟ್ಟರೆ ಅದು ದೊಡ್ಡ ಅನಾಹುತವಾದೀತು ಎಂದು ಅರಿತ ಅವರು, ಇದು ತಮಾಷೆಗಾಗಿ ಮಾಡಿದ ಟ್ವೀಟ್ ಎಂದು ಸಮಾಜಾಯಿಷಿ ನೀಡಿ, ವಿಷಯವನ್ನು ತಣ್ಣಗಾಗಿಸುವ ಕೆಲಸ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.