ಇನ್ಮುಂದೆ ಕೆಲಸದ ಮೇಲೆ ಆಸ್ಟ್ರೇಲಿಯಾಗೆ ತೆರಳಬೇಕೆಂದಿರುವ ಭಾರತೀಯರಿಗೆ ಕಾದಿದೆ ಶಾಕ್!

By Suvarna Web DeskFirst Published Apr 18, 2017, 10:34 AM IST
Highlights

ಇನ್ಮುಂದೆ ಕೆಲಸದ ಮೇಲೆ ಆಸ್ಟ್ರೇಲಿಯಾಗೆ ತೆರಳಬೇಕೆಂದಿರುವ ಭಾರತೀಯರಿಗೆ ಕಾದಿದೆ ಶಾಕ್! ವಿದೇಶಿ ಕೆಲಸಗಾರರಿಗೆ ಉದ್ಯೋಗ ನಿಮಿತ್ತ ನೀಡುತ್ತಿದ್ದ  457 ವೀಸಾ ಯೋಜನೆಯನ್ನು ರದ್ದುಗೊಳಿಸಲು ಆಸ್ಟ್ರೇಲಿಯಾ ಮುಂದಾಗಿದೆ.

ನವದೆಹಲಿ (ಏ.18): ಇನ್ಮುಂದೆ ಕೆಲಸದ ಮೇಲೆ ಆಸ್ಟ್ರೇಲಿಯಾಗೆ ತೆರಳಬೇಕೆಂದಿರುವ ಭಾರತೀಯರಿಗೆ ಕಾದಿದೆ ಶಾಕ್! ವಿದೇಶಿ ಕೆಲಸಗಾರರಿಗೆ ಉದ್ಯೋಗ ನಿಮಿತ್ತ ನೀಡುತ್ತಿದ್ದ  457 ವೀಸಾ ಯೋಜನೆಯನ್ನು ರದ್ದುಗೊಳಿಸಲು ಆಸ್ಟ್ರೇಲಿಯಾ ಮುಂದಾಗಿದೆ.

457 ವೀಸಾ ಯೋಜನೆಯನ್ನು 95,000 ತಾತ್ಕಾಲಿಕ ವಿದೇಶಿ ಕೆಲಸಗಾರರು ಬಳಸುತ್ತಿದ್ದು, ಇದರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಯೋಜನೆಯಡಿ ಆಸ್ಟ್ರೇಲಿಯಾಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಅಲ್ಲಿನವರಿಗೆ ನಿರುದ್ಯೋಗ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ನಮ್ಮದು ವಲಸೆ ದೇಶ.  ುದ್ಯೋಗದಲ್ಲಿ ಆಸ್ಟ್ರೇಲಿಯಾದವರಿಗೇ ಮೊದಲ ಆದ್ಯತೆ ನೀಡಬೇಕು.ಹಾಗಾಗಿ 457 ವೀಸಾವನ್ನು ನಾವು ತೆಗೆದು ಹಾಕುತ್ತಿದ್ದೇವೆ. ಇದರ ಬದಲು ಹೊಸ ವೀಸಾ ನಿಯಮವನ್ನು ಕೆಲವು ನಿರ್ಬಂಧಗಳೊಂದಿಗೆ ತರಲಿದ್ದೇವೆ ಎಂದು ಅಲ್ಲಿನ ಪ್ರಧಾನ ಮಂತ್ರಿ ಮಾಲ್ಕೋಮ್ ಟರ್ನ್ ಬುಲ್ ಹೇಳಿದ್ದಾರೆ.

ಇಂಗ್ಲೆಂಡ್ ಹಾಗೂ ಚೀನಾಗೆ ಹೋಲಿಸಿದರೆ ಭಾರತೀಯರೇ ಹೆಚ್ಚಿನ ಪ್ರಮಾಣದಲ್ಲಿ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ.

click me!