ಅಟಲ್‌ ಪಿಂಚಣಿ ಯೋಜನೆ ಮಿತಿ 10000 ರು.ಗೆ ಏರಿಕೆಗೆ ಕೇಂದ್ರ ಸರ್ಕಾರ ಚಿಂತನೆ

First Published Jun 13, 2018, 9:45 AM IST
Highlights

ಅಟಲ್‌ ಪಿಂಚಣಿ ಯೋಜನೆಯ ಗರಿಷ್ಠ ಪಿಂಚಣಿಯ ಮಿತಿಯನ್ನು ಮಾಸಿಕ 10000 ರು.ಗೆ ಏರಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹಾಲಿ ಯೋಜನೆಯಡಿ 1000 ರು.ನಿಂದ 5000 ರು.ವರೆಗೆ ಪಿಂಚಣಿ ಪಡೆಯಬಹುದಾದ 5 ಯೋಜನೆಗಳಿವೆ. 

ನವದೆಹಲಿ (ಜೂ. 13): ಅಟಲ್‌ ಪಿಂಚಣಿ ಯೋಜನೆಯ ಗರಿಷ್ಠ ಪಿಂಚಣಿಯ ಮಿತಿಯನ್ನು ಮಾಸಿಕ 10000 ರು.ಗೆ ಏರಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಹಾಲಿ ಯೋಜನೆಯಡಿ 1000 ರು.ನಿಂದ 5000 ರು.ವರೆಗೆ ಪಿಂಚಣಿ ಪಡೆಯಬಹುದಾದ 5 ಯೋಜನೆಗಳಿವೆ. ಆದರೆ ಈ ಪಿಂಚಣಿ ಕೈಗೆ ಸೇರುವ ಹೊತ್ತಿಗೆ ಈ ಮೊತ್ತ ತೀರಾ ಕಡಿಮೆ ಎನ್ನಿಸಬಹುದು ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಮಿತಿ ಹೆಚ್ಚಳಕ್ಕೆ ಚಿಂತಿಸಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆಯ ಜಂಟಿ ಕಾರ್ಯದರ್ಶಿ ಮಂದೇಶ್‌ ಕುಮಾರ ಮಿಶ್ರಾ ತಿಳಿಸಿದ್ದಾರೆ. ಹಾಲಿ 18-40 ವರ್ಷ ವಯೋಮಿತಿಯವರು ಈ ಯೋಜನೆ ಸೇರಬಹುದು. ಇದನ್ನು 18-50 ವರ್ಷಕ್ಕೆ ಏರಿಸುವ ಇರಾದೆಯೂ ಕೇಂದ್ರದ ಮುಂದಿದೆ. 

click me!