ಅರಮನೆ ನಗರಿಯಲ್ಲಿ ವಯೋವೃದ್ಧೆ ಮೇಲೆ ಅಟ್ಟಹಾಸ: ಥಳಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

By Suvarna Web DeskFirst Published Oct 20, 2017, 11:41 AM IST
Highlights

ಮೈಸೂರಿನಲ್ಲಿ  ಮ್ಯೂಸಿಯಂಗೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ವಯೋವೃದ್ಧೆಯ ಮೇಲೆ  ಹಲ್ಲೆ ನಡೆಸಿದ್ದಾರೆ. ಚಾಮುಂಡಿಬೆಟ್ಟ ರಸ್ತೆಯಲ್ಲಿ ರುವ  ಗೌರಿ ಎಂಬುವವರಿಗೆ ಸೇರಿದ ಸ್ಯಾಂಡ್​  ಮ್ಯೂಸಿಯಂನಲ್ಲಿ ಈ ಘಟನೆ ನಡೆದಿದೆ.

ಮೈಸೂರು(ಅ.20): ಮೈಸೂರಿನಲ್ಲಿ  ಮ್ಯೂಸಿಯಂಗೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ವಯೋವೃದ್ಧೆಯ ಮೇಲೆ  ಹಲ್ಲೆ ನಡೆಸಿದ್ದಾರೆ. ಚಾಮುಂಡಿಬೆಟ್ಟ ರಸ್ತೆಯಲ್ಲಿ ರುವ  ಗೌರಿ ಎಂಬುವವರಿಗೆ ಸೇರಿದ ಸ್ಯಾಂಡ್​  ಮ್ಯೂಸಿಯಂನಲ್ಲಿ ಈ ಘಟನೆ ನಡೆದಿದೆ.

ಕಲಾವಿದೆ ಗೌರಿ ತಾಯಿ ನಾಗಲಾಂಬಿಕೆ ಮೇಲೆ ಹಲ್ಲೆ ನಡೆದಿದೆ. ಸ್ಯಾಂಡ್​ ಮ್ಯೂಸಿಯಂ ಪಕ್ಕದಲ್ಲೇ ಕಾವೇರಿ ಸಿಲ್ಕ್​'ನ ರೇಷ್ಮೆ​ ಉದ್ಯೋಗ ಸೀರೆ ಶೋರೂಂ ಇದೆ. ಮ್ಯೂಸಿಯಂಗೆ ಬರುವ ಪ್ರವಾಸಿಗರನ್ನು ಸೀರೆ  ಶೋರೂಂಗೂ ಕಳುಹಿಸುವಂತೆ ಧಮಕಿ ಹಾಕಿ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

Latest Videos

ಇನ್ನು  ಹಲ್ಲೆ ನಡೆಸಿದ ದಾಂಡಿಗರೆಲ್ಲರೂ ವಿಧಾನಪರಿಷತ್​ ಸದಸ್ಯ ಸಂದೇಶ್​ ನಾಗರಾಜ್​ ಬೆಂಬಲಿಗರೆಂದು ಎಂದು ಗೌರಿ ತಾಯಿ ನಾಗಲಾಂಬಿಕೆ ಆರೋಪಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ.

click me!