ಕೊನೆಗೂ ರಾಜಸ್ಥಾನಕ್ಕೆ ಮುಖ್ಯಮಂತ್ರಿ ನೇಮಕ| ರಾಜಸ್ಥಾನ ಸಿಎಂ ಆಗಿ ಅಶೋಕ್ ಗೆಹ್ಲೋಟ್ ನೇಮಕ| ಉಪಮುಖ್ಯಮಂತ್ರಿಯಾಗಿ ಸಚಿನ್ ಪೈಲೆಟ್| ಕೊನೆಗೂ ಸುಖಾಂತ್ಯ ಕಂಡ ಸಿಎಂ ಆಯ್ಕೆ ಕಸರತ್ತು| ಹೈಕಮಾಂಡ್ ಪ್ರಸ್ತಾವನೆ ಒಪ್ಪಿಕೊಂಡ ಇಬ್ಬರೂ ನಾಯಕರು
ನವದೆಹಲಿ(ಡಿ.14): ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಹಿರಿಯ ಕಾಂಗ್ರೆಸ್ಸಿಗ ಅಶೋಕ್ ಗೆಹ್ಲೊಟ್ ಅವರನ್ನು ನೇಮಕ ಮಾಡಲಾಗಿದೆ.
ಕಳೆದ ಮೂರು ದಿನಗಳಿಂದ ರಾಝಸ್ಥಾನಕ್ಕೆ ಸಿಎಂ ಆಯ್ಕೆ ಮಾಡುವುದು ಕಾಂಗ್ರೆಸ್ ಹೈಕಮಾಂಡ್ ಗೆ ಕಬ್ಬಿಣದ ಕಡಲೆಯಾದಂತಾಗಿತ್ತು. ಸಿಎಂ ಸ್ಥಾನಕ್ಕಾಗಿ ಅಶೋಕ್ ಗೆಹ್ಲೊಟ್ ಮತ್ತು ಸಚಿನ್ ಪೈಲೆಟ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು.
KC Venugopal, All India Congress Committee observer for Rajasthan: Congress President Rahul Gandhi has decided to appoint Ashok Gehlot Ji as the Chief Minister of Rajasthan. Sachin Pilot will be the Deputy Chief Minister of Rajasthan pic.twitter.com/TAJ7levt8F
— ANI (@ANI)ಕೊನೆಗೂ ಹಲವು ಸುತ್ತಿನ ಮಾತುಕತೆ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಅದರಂತೆ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಆಗಿ ಅಶೋಕ್ ಗೆಹ್ಲೊಟ್ ಮತ್ತು ಉಪ ಮುಖ್ಯಮಂತ್ರಿಯಾಗಿ ಸಚಿನ್ ಪೈಲೆಟ್ ಅವರನ್ನು ನೇಮಕ ಮಾಡಲಾಗಿದೆ.
Rajasthan Deputy Chief Minister designate Sachin Pilot: I would like to thank Congress President Rahul Gandhi and other legislators for taking this decision to make Ashok Gehlot Ji the Chief Minister of Rajasthan pic.twitter.com/RSYVRNLTJ4
— ANI (@ANI)ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಘೋಷಣೆ ಹೊರಡಿಸಿದ್ದು, ಇಬ್ಬರೂ ನಾಯಕರು ಈ ಪ್ರಸ್ತಾವನೆಗೆ ತಮ್ಮ ಸಹಮತ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.