ಶೆಟ್ಟರ್, ಅಶೋಕ್, ಈಶ್ವರಪ್ಪಗೆ ಹಿನ್ನಡೆ?

By Web DeskFirst Published Aug 26, 2019, 8:58 AM IST
Highlights

ರಾಜ್ಯದ ಈ ಮೂವರು ಹಿರಿಯ ನಾಯಕರಿಗೆ ಹಿನ್ನಡೆ ಎದುರಾಗುತ್ತಿದೆ. ಯಾವ ರೀತಿಯ ಹಿನ್ನಡೆ ಇಲ್ಲಿದೆ ಮಾಹಿತಿ. 

ಬೆಂಗಳೂರು [ಆ.26]:  ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯ ಮಂತ್ರಿಯಾಗಿದ್ದ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ಕುರುಬ ಸಮುದಾಯದ ಕೆ.ಎಸ್. ಈಶ್ವರಪ್ಪ ಹಾಗೂ ಒಕ್ಕಲಿಗ ಸಮುದಾಯದ ಆರ್. ಅಶೋಕ್ ಅವರಿಗೆ ಹಿನ್ನೆಡೆ ಸಂಭವಿಸುವ ಸಾಧ್ಯತೆ ಯಿದೆ. 

ಅಂದರೆ, ಈ ಮೂವರು ಈಗ ಸಚಿವರಾಗಿ ಮಾತ್ರ ಮುಂದುವರೆಯಬೇಕಾಗಿ ಬರಬಹುದು. ಇವರಿಗಿಂತ ಕಿರಿಯರು ಉಪಮುಖ್ಯಮಂತ್ರಿಗಳಾಗ ಲಿದ್ದಾರೆ. ಶೆಟ್ಟರ್ ಮತ್ತು ಈಶ್ವರಪ್ಪ ಅವರ ಬಗ್ಗೆ ಅಲ್ಲದಿದ್ದರೂ ಅಶೋಕ್ ಅವರ ಬಗ್ಗೆ ಮಾತ್ರ ಸಂಘ ಪರಿವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವರಿಷ್ಠರು ಸಂಘ ಪರಿವಾರದ ಮುಖಂಡರ ಅಭಿಪ್ರಾಯಗಳಿಗೆ ಬೆಲೆ ನೀಡುವ ಸಾಧ್ಯತೆಯಿದೆ.

ಹೀಗಾಗಿಯೇ ಒಕ್ಕಲಿಗ ಸಮುದಾಯದ ಡಾ. ಅಶ್ವತ್ಥನಾರಾಯಣ ಅವರಿಗೆ ಅವಕಾಶ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.

click me!