ರಂಗ ಕರ್ಮಿ ರಂಗ ನಿರ್ದೇಶಕ, ನಟ ಆಶೋಕ್ ಬಾದರದಿನ್ನಿ ನಿಧನ

By suvarna web deskFirst Published Nov 24, 2016, 9:32 AM IST
Highlights

ಹಿರಿಯ ರಂಗ ಕರ್ಮಿ ರಂಗ ನಿರ್ದೇಶಕ ಹಾಗೂ ಕನ್ನಡ ಮತ್ತು ಹಿಂದಿ ಚಲನ ಚಿತ್ರಗಳ ನಟ ಆಶೋಕ್ ಬಾದರದಿನ್ನಿ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು   ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 

ಬೆಂಗಳೂರು(ನ.24): ಹಿರಿಯ ರಂಗ ಕರ್ಮಿ ರಂಗ ನಿರ್ದೇಶಕ ಹಾಗೂ ಕನ್ನಡ ಮತ್ತು ಹಿಂದಿ ಚಲನ ಚಿತ್ರಗಳ ನಟ ಆಶೋಕ್ ಬಾದರದಿನ್ನಿ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು   ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 

ಬಾದರ ದಿನ್ನಿ ಹೆಸರಾಂತ  ರಂಗ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಗಿರೀಶ್ ಕಾರ್ನಾಡ್ ಅವರ ತುಘಲಕ್ ನಾಟಕವನ್ನು ನಿರ್ದೇಶಿಸಿದ ಖ್ಯಾತಿ ಇವರದ್ದು, ಇಷ್ಟೆ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಇವರ ನಾಟಕಗಳು ಪ್ರರ್ದಶನಗೊಂಡಿವೆ.  

ಇವರ ಸೇವೆಯನ್ನು ಮೆಚ್ಚಿ  ಕರ್ನಾಟಕ ನಾಟಕ ಅಕಾಡೆಮಿಯಿಂದ ಹಿಡಿದು ಮಠ ಮಾನ್ಯಗಳು ಮತ್ತು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಇಂತಹ ಕಲಾ ಸೇವಕ ಹಾಗೂ ಹಿರಿಯ ರಂಗ ಕರ್ಮಿಯನ್ನು ಕಳೆದುಕೊಂಡಿರುವುದು  ರಂಗ ಭೂಮಿ ಹಾಗೂ ಚಲನ ಚಿತ್ರ ರಂಗಕ್ಕೆ ಅಪಾರ ನಷ್ಟವುಂಟಾಗಿದೆ. 

ಐಯುಡಿಪಿ ಬಡಾವನೆಯಲ್ಲಿರೋ ನಿವಾಸದಲ್ಲಿ  ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಇಡಲಾಗಿದೆ. ಸಂಜೇ ಹೊತ್ತಿಗೆ ವೀರ ಶೈವ ರುದ್ರ ಭೂಮಿಯಲ್ಲಿ ಇವರ ಅಂತ್ಯ ಸಂಸ್ಕಾರ ನೆರವೇರುತ್ತದೆಂದು ಕುಟುಂಬ ವರ್ಗ ತಿಳಿಸಿದೆ.   


 

click me!