ಗುಂಪು ಹಲ್ಲೆ: ಕಾನೂನು ರಚಿಸಲು ಒವೈಸಿ ಒತ್ತಾಯ!

By Web Desk  |  First Published Jul 6, 2019, 9:13 PM IST

ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹಲ್ಲೆ ಪ್ರಕರಣಗಳು| ಕಠಿಣ ಕಾನೂನಿಗೆ ಅಸದುದ್ದೀನ್ ಒವೈಸಿ ಒತ್ತಾಯ| ಕಾನೂನು ರಚಿಸಲು ಸುಪ್ರೀಂಕೋರ್ಟ್ ಸಲಹೆ ನೀಡಿದೆ ಎಂದ ಒವೈಸಿ| ‘ಮೋದಿ ಗುಂಪು ಹಲ್ಲೆಕೋರರನ್ನು ಭಯೋತ್ಪಾದಕರು ಎಂದು ಕರೆಯಲಿ’| 


ನವದೆಹಲಿ(ಜು.06):  ದೇಶದಲ್ಲಿ ಕೋಮು ಆಧಾರಿತ ಗುಂಪು ಹಲ್ಲೆಗಳು ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಸೂಕ್ತ ಕಾನೂನು ರೂಪಿಸಬೇಕೆಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಈಗಾಗಲೇ ಸುಪ್ರೀಂಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಇದುವರೆಗೂ ಶಾಸನ ರಚನೆಯಾಗದಿರುವುದು ತಮಗೆ ಅಚ್ಚರಿ ತಂದಿದೆ ಎಂದು ಒವೈಸಿ ಹೇಳಿದ್ದಾರೆ.

Tap to resize

Latest Videos

ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ ಗುಂಪು ಹಲ್ಲೆ ಹೆಚ್ಚುತ್ತಿದ್ದು, ಪ್ರಧಾನಿ ಹಿಂಸಾ ವಿರೋಧಿಯೇ ಆಗಿದ್ದರೆ ಹಲ್ಲೆಕೋರರನ್ನು ಭಯೋತ್ಪಾದಕರು ಎಂದು ಕರೆಯಲಿ ಒವೈಸಿ ಒತ್ತಾಯಿಸಿದ್ದಾರೆ.

ಗುಂಪು ಹಲ್ಲೆ ತಡೆಗಟ್ಟಲು ಸೂಕ್ತ ಹಾಗೂ ಕಠಿಣ ಕಾನೂನಿನ ಅವಶ್ಯಕತೆ ಇದ್ದು, ಕೂಡಲೇ ಕೇಂದ್ರ ಸರ್ಕಾರ ಈ ಕುರಿತು ಕಾನೂನು ಜಾರಿಗೊಳಿಸಬೇಕು ಎಂದು ಒವೈಸಿ ಆಗ್ರಹಿಸಿದ್ದಾರೆ.

click me!