ಮಾಜಿ ಆರ್'ಬಿಐ ಗವರ್ನರ್ ರಾಜನ್'ಗೆ ರಾಜ್ಯಸಭಾ ಸ್ಥಾನದ ಆಫರ್

By Suvarna Web DeskFirst Published Nov 8, 2017, 6:57 PM IST
Highlights

ಸೆ.04, 2013ರಿಂದಸೆ.04 2016ರವರೆಗೆಆರ್'ಬಿಐಗವರ್ನರ್ಆಗಿಕಾರ್ಯನಿರ್ವಹಿಸಿದನಂತರಅಮೆರಿಕಾದಶಿಕಾಗೋವಿಶ್ವವಿದ್ಯಾಲಯದಲ್ಲಿಅಧ್ಯಾಪಕರಾಗಿಸೇವೆ ಸಲ್ಲಿಸುತ್ತಿದ್ದಾರೆ.

ನವದೆಹಲಿ(ನ.08):ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರು ಮಾಜಿ ಆರ್'ಬಿಐ ಗವರ್ನರ್ ರಘುರಾಂ ರಾಜನ್ ಅವರಿಗೆ ರಾಜ್ಯಸಭಾ ಸ್ಥಾನ ನೀಡುವ ಆಫರ್ ನೀಡಿದ್ದಾರೆ.

ಸೆ.04, 2013ರಿಂದ ಸೆ.04 2016ರವರೆಗೆ ಆರ್'ಬಿಐ ಗವರ್ನರ್ ಆಗಿ ಕಾರ್ಯ ನಿರ್ವಹಿಸಿದ ನಂತರ ಅಮೆರಿಕಾದ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೊಬಲ್ ಪ್ರಶಸ್ತಿಯ ಅರ್ಥಶಾಸ್ತ್ರ ವಿಭಾಗದಲ್ಲೂ  ಇವರ ಹೆಸರು ಕೇಳಿ ಬಂದಿತ್ತು. ಬಿಜೆಪಿ ಸರ್ಕಾರ ಹಾಗೂ ರಘುರಾಮ್ ಅವರಿಗೂ ತಿಕ್ಕಾಟ ಶುರುವಾಗಿತ್ತು. ಈ ಕಾರಣದಿಂದ ಕೇಂದ್ರ ಸರ್ಕಾರ ರಾಜನ್ ಅವರ ಅವಧಿಯನ್ನು ವಿಸ್ತರಿಸಿರಲಿಲ್ಲ. ಅಲ್ಲದೆ ಮಾಧ್ಯಮಗಳ ವರದಿಯ ಪ್ರಕಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವೈಯಕ್ತಿಕವಾಗಿ ರಾಜ್ಯಸಭಾ ಸ್ಥಾನ ನೀಡುವುದಾಗಿ ತಿಳಿಸಿದ್ದಾರೆ' ಎನ್ನಲಾಗಿದೆ.

ಜನವರಿಯಲ್ಲಿ ದೆಹಲಿಯಲ್ಲಿ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಅಡಳಿತರೂಢ ಅಮ್ ಆದ್ಮಿ ಪಕ್ಷಕ್ಕೆ ತಮ್ಮ ಪಕ್ಷದವರನ್ನು ಹೊರತುಪಡಿಸಿ ರಾಜಕೀಯೇತರ ಉತ್ತಮ ವ್ಯಕ್ತಿಗಳು ಬೇಕಾಗಿದ್ದಾರೆ ಎನ್ನಲಾಗಿದೆ. ರಾಜನ್ ಅವರು ಮೋದಿ ಸರ್ಕಾರದ  500, 1000 ರೂ.ಗಳ ಅಪಮೌಲ್ಯಿಕರಣವನ್ನು ವಿರೋಧಿಸಿದ್ದರು.  ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸುವ ಇಂತಹ ವ್ಯಕ್ತಿಗಳನ್ನು ಮೇಲ್ಮನೆಯಲ್ಲಿ ಕೂರಿಸಬೇಕೆನ್ನುವುದು ಅರವಿಂದ್ ಕೇಜ್ರಿವಾಲ್ ಲೆಕ್ಕಾಚಾರವೆನ್ನಲಾಗಿದೆ.

click me!