9 ದಿನಗಳ ಕೇಜ್ರಿವಾಲ್ ಧರಣಿ ಕೊನೆಗೂ ಅಂತ್ಯ..!

First Published Jun 19, 2018, 8:07 PM IST
Highlights

9 ದಿನಗಳ ಕೇಜ್ರಿವಾಲ್ ಧರಣಿ ಕೊನೆಗೂ ಅಂತ್ಯ

ಲೆ.ಗ ಅನಿಲ್ ಬೈಜಾಲ್ ಅವರಿಂದ ಕೇಜ್ರಿಗೆ ಪತ್ರ

ಧರಣಿ ಹಿಂಪಡೆಯುವ ನಿರ್ಧಾರಕ್ಕೆ ಆಪ್ ನಾಯಕರು

ರಾಷ್ಟ್ರ ರಾಜಧಾನಿಯಲ್ಲಿ ಆಡಳಿತ ಸುಗಮವಾಗಿ ನಡೆಯುತ್ತಾ?

ನವದೆಹಲಿ(ಜೂ.19): ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಕಳೆದ 9 ದಿನಗಳಿಂದ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಕಚೇರಿಯಲ್ಲಿ ನಡೆಸುತ್ತಿದ್ದ ಧರಣಿಯನ್ನು ಅಂತ್ಯಗೊಳಿಸಿದ್ದಾರೆ.

ತುರ್ತುಗಾಗಿ ಐಎಎಸ್ ಅಧಿಕಾರಿಗಳನ್ನು ಭೇಟಿ ಮಾಡಿ, ಮಾತುಕತೆ ಮೂಲಕ ಇಬ್ಬರ ನಡುವಿನ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಅನಿಲ್ ಬೈಜಾಲ್ ಸಿಎಂ ಕೇಜ್ರಿವಾಲ್ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯಲಾಗಿದೆ.

अधिकारियों द्वारा मंत्रियों की मीटिंग्स अटेंड किए जाने की सूचने मिलने और उप मुख्यमंत्री की अपील का बाद आज CM ने LG दफ़्तर में किए जा रहे अपने आंदोलन को समाप्त किया।
मुख्यमंत्री अपने आवास पर पहुँचकर AAP विधायकों और कार्यकर्ताओं को सम्बोधित कर रहे हैं। pic.twitter.com/7mDWDFnbv7

— Aam Aadmi Party Delhi (@AAPDelhi)

ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ಆಪ್ ನಾಯಕರು ಬೈಜಾಲ್ ವಿರುದ್ದ ತೀವ್ರ ವಾಗ್ದಾಳಿ ಮುಂದುವರೆಸಿದ ಹಿನ್ನೆಲೆಯಲ್ಲಿ, ಲೆಫ್ಟಿನೆಂಟ್ ಗವರ್ನರ್ ಅವರಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ನಾನು ಕಳೆದ ಎಂಟು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇನೆ. ಆದರೆ ನನ್ನನ್ನು ಭೇಟಿ ಮಾಡಲು ಬೈಜಾಲ್ ಅವರಿಗೆ ಎಂಟು ನಿಮಿಷ ಸಮಯ ಇಲ್ಲ’ ಎಂದು ದೆಹಲಿ ಸಿಎಂ ಇಂದು ಬೆಳಗ್ಗೆಯಷ್ಟೇ ವಾಗ್ದಾಳಿ ನಡೆಸಿದ್ದರು.

ಅಲ್ಲದೇ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಆಪ್ ಸಹಿ ಆಂದೋಲನ ಕೂಡ ಆರಂಭಿಸಿತ್ತು. ಇದೀಗ ಬೈಜಾಲ್ ಪ್ರತಿಕ್ರಿಯೆ ನೀಡಿದ ಬಳಿಕ ಧರಣಿಯನ್ನು ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ. ಐಎಎಸ್ ಅಧಿಕಾರಿಗಳ ಅಘೋಷಿತ ಮುಷ್ಕರ ಹಿಂಪಡೆಯುವಂತೆ ಲೆಫ್ಟಿನೆಂಟ್ ಗವರ್ನರ್ ಸೂಚಿಸಬೇಕು ಎಂದು ಒತ್ತಾಯಿಸಿ ಕೇಜ್ರಿವಾಲ್ ಕಳೆದ ಜೂನ್ 11ರಿಂದ ಧರಣಿ ನಡೆಸುತ್ತಿದ್ದರು.

click me!